Periods: ಮುಟ್ಟಾದಾಗ ಮಹಿಳೆಯರು ಈ ತಪ್ಪುಗಳನ್ನು ಮಾಡಬೇಡಿ

ಸಹಜವಾಗಿ ಮುಟ್ಟಾದ ಆರಂಭದ ದಿನಗಳಲ್ಲಿ ಇದರ ಬಗ್ಗೆ ಅಷ್ಟು ತಿಳುವಳಿಕೆ ಇರುವುದಿಲ್ಲ. ಮುಟ್ಟಾದ 3 ರಿಂದ 4 ದಿನ ತೀರಾ ಸೂಕ್ಷ್ಮವಾಗಿ ಇರಬೇಕು. ಈ ದಿನಗಳಲ್ಲಿ ಕೆಲ ತಪ್ಪುಗಳನ್ನು ಕೂಡಾ ಹಲವರು ಮಾಡುತ್ತಾರೆ.

Periods: ಮುಟ್ಟಾದಾಗ ಮಹಿಳೆಯರು ಈ ತಪ್ಪುಗಳನ್ನು ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 18, 2021 | 8:47 AM

ಮುಟ್ಟು, ಇದೊಂದು ಪ್ರಕೃತಿ ನಿಯಮ. ಇದನ್ನು ಅನಿಷ್ಟ ಅಂತ ಭಾವಿಸುವುದು ದೊಡ್ಡ ತಪ್ಪು. ಪ್ರತಿ ಹೆಣ್ಣು ಮಕ್ಕಳು ತನ್ನ 12 ಅಥವಾ 14 ನೇ ವರ್ಷದಿಂದ ಮುಟ್ಟಾಗುತ್ತಾರೆ. ಕೆಲವರು ಇನ್ನು ಬೇಗನೇ ದೊಡ್ಡವರಾಗಬಹುದು ಅಂದರೆ ಮುಟ್ಟಾಗಬಹುದು. ಇದಕ್ಕೆ ಆಹಾರ ಪದ್ಧತಿಯೂ ಕಾರಣವಾಗುತ್ತದೆ. ಮಾತ್ರವಲ್ಲದೇ ಹೆರಿಡಿಟಿ ಕೂಡಾ ಹೌದು. ಸಹಜವಾಗಿ ಮುಟ್ಟಾದ ಆರಂಭದ ದಿನಗಳಲ್ಲಿ ಇದರ ಬಗ್ಗೆ ಅಷ್ಟು ತಿಳುವಳಿಕೆ ಇರುವುದಿಲ್ಲ. ಮುಟ್ಟಾದ 3 ರಿಂದ 4 ದಿನ ತೀರಾ ಸೂಕ್ಷ್ಮವಾಗಿ ಇರಬೇಕು. ಈ ದಿನಗಳಲ್ಲಿ ಕೆಲ ತಪ್ಪುಗಳನ್ನು ಕೂಡಾ ಹಲವರು ಮಾಡುತ್ತಾರೆ. ಅಂತಹ ತಪ್ಪುಗಳು ಯಾವುವು ಅಂತ ಈ ಕೆಳಗೆ ತಿಳಿಸಿದ್ದೇವೆ ಗಮನಿಸಿ. ತಿಳಿಸಿದ ತಪ್ಪುಗಳು ಮತ್ತೆ ಮಾಡದಂತೆ ಗಮನಹರಿಸಿ.

* ಅತಿಯಾದ ಮಾತ್ರೆ ಸೇವನೆ ಮುಟ್ಟಾದಾಗ ಸಹಜವಾಗಿ ಹೊಟ್ಟೆ ನೋವು ಮತ್ತು ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಎಲ್ಲರಿಗೂ ನೋವು ಇರಲ್ಲ. ಕೆಲವರಿಗೆ ಮೊದಲ ಎರಡು, ಮೂರು ದಿನ ನೋವಿನ ಜೊತೆ ಕಾಲ ಕಳೆಯುವುದು ತುಂಬಾ ಕಷ್ಟವಾಗಿರುತ್ತದೆ. ಹೀಗಾಗಿ ಮಾತ್ರೆಗಳನ್ನು ತಿನ್ನುತ್ತಾರೆ. ಪೈನ್ ಕಿಲ್ಲರ್ ಸೇವಿಸುವುದರಿಂದ ಗರ್ಭಕೋಶದ ಮೇಲೆ ಪರಿಣಾಮ ಬೀರುತ್ತದೆ. ವಿಪರೀತ ನೋವಿದ್ದರೆ ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಇದರ ಬದಲಿಗೆ ತಾವೇ ನಿರ್ಧರಿಸಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.

* ಪ್ಯಾಡ್ ಬದಲಾಯಿಸದೇ ಇರುವುದು ಶಾಲೆ, ಕಾಲೇಜು ಅಥವಾ ಆಫೀಸ್ಗಳಿಗೆ ಹೋಗಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದರೆ ಮುಟ್ಟಿನ ಬಗ್ಗೆ ಗಮನ ಹರಿಸಲ್ಲ. ಅಂದರೆ ಪ್ಯಾಡ್ನ ಬದಲಾಯಿಸುವ ಗೋಜಿಗೆ ಹೋಗಲ್ಲ. ಆದರೆ ಹೀಗೆ ಮಾಡುವುದು ತಪ್ಪು. ಧೀರ್ಘ ಸಮಯದವರೆಗೆ ಪ್ಯಾಡ್ ಬದಲಾಯಿಸದಿದ್ದರೆ ಬೇರೆ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಪ್ರತಿ ನಾಲ್ಕು ಗಂಟೆಗೆ ಅಥವಾ ಐದು ಗಂಟೆಗೆ ಪ್ಯಾಡ್​ನ ಬದಲಾಯಿಸಿ. ರಕ್ತಸ್ರಾವ ಹೆಚ್ಚು ಅಥವಾ ಕಡಿಮೆಯಾಗಿದ್ದರೂ ಪ್ಯಾಡ್ ಬದಲಾಯಿಸುತ್ತಿರಬೇಕು.

* ಶುಚಿತ್ವ ಕಾಪಾಡದೇ ಇರುವುದು ಮುಟ್ಟಾದ ದಿನಗಳು ಅಂದರೆ ತೀರಾ ಸೂಕ್ಷ್ಮವಾದ ದಿನಗಳು. ಈ ದಿನಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು. ಪ್ಯಾಡ್ಗಳನ್ನ ಬದಲಾಯಿಸಿದಾಗೆಲ್ಲ ಗುಪ್ತಾಂಗವನ್ನು ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಇಲ್ಲದಿದ್ದರೆ ಬೇರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈ ದಿನಗಳಲ್ಲಿ ಶುಚಿತ್ವದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ.

* ಹೆಚ್ಚು ಭಾರ ಎತ್ತುವುದು ಗರ್ಭಕೋಶ ಅತಿ ಸೂಕ್ಷ್ಮವಾದ ಅಂಗ. ಪೀರಿಯಡ್ಸ್ ಆದಾಗ ಅಥವಾ ಮುಟ್ಟಾದಾಗ ಹೆಚ್ಚು ಭಾರ ಎತ್ತಬಾರದು ಅಂತ ಕೆಲ ವೈದ್ಯರು ಹೇಳುತ್ತಾರೆ. ತುಂಬಾ ಭಾರವಿರುವ ವಸ್ತುಗಳನ್ನು ಶಕ್ತಿಗೂ ಮೀರಿ ಎತ್ತಿದರೆ ಗರ್ಭಕೋಶಕ್ಕೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಬಗ್ಗೆಯೂ ಹೆಚ್ಚು ಗಮನಹರಿಸಬೇಕು ಅಂತ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ

ಮುಟ್ಟಾದಾಗ ಅಧಿಕ ರಕ್ತಸ್ರಾವವಾಗಲು ಕಾರಣ ಇಲ್ಲಿದೆ. ಜೊತೆಗೆ ಪರಿಹಾರ ಇದೆ

Women Health: ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನ ಪರಿಹಾರಕ್ಕೆ ಹೀಗೆ ಮಾಡಿ