ಮುಟ್ಟಾದಾಗ ಅಧಿಕ ರಕ್ತಸ್ರಾವವಾಗಲು ಕಾರಣ ಇಲ್ಲಿದೆ. ಜೊತೆಗೆ ಪರಿಹಾರ ಇದೆ

Women Health: ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ(Menorrhagia) ಎಂದು ಕರೆಯಲಾಗುತ್ತದೆ.

ಮುಟ್ಟಾದಾಗ ಅಧಿಕ ರಕ್ತಸ್ರಾವವಾಗಲು ಕಾರಣ ಇಲ್ಲಿದೆ. ಜೊತೆಗೆ ಪರಿಹಾರ ಇದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 08, 2021 | 9:47 AM

ಮುಟ್ಟಿನ ಸಮಯ ಬಂತೆಂದರೆ ಮಹಿಳೆಯರಿಗೆ ಒಂದು ರೀತಿ ಭಯ ಶುರುವಾಗುತ್ತದೆ. ಮುಟ್ಟಾದಾಗ ಆಗುವ ನೋವು ಯಾವ ಶತ್ರುಗೂ ಬೇಡ ಅಂತಾರೆ. ಹೊಟ್ಟೆ, ಸೊಂಟ ವಿಪರೀತವಾಗಿ ನೋವಾಗುತ್ತದೆ. ಹಾಗಂತ ಈ ಅನುಭವ ಎಲ್ಲರಿಗೂ ಆಗಲ್ಲ. ಕೆಲವರಿಗೆ ಮುಟ್ಟಾದಾಗ ಯಾವ ನೋವು ಕಾಣಿಸಿಕೊಳ್ಳಲ್ಲ. ಇನ್ನು ಕೆಲವರಿಗೆ ಎರಡರಿಂದ ಮೂರು ದಿನ ನೋವು ಇರುತ್ತದೆ. ಇದರ ಜೊತೆಗೆ ರಕ್ತಸ್ರಾವವೂ ಅಧಿಕವಾಗಿರುತ್ತದೆ. ಎಷ್ಟೇ ನೋವಾದರೂ ಪ್ರತಿ ತಿಂಗಳು ಇದನ್ನು ಅನುಭವಿಸಲೇ ಬೇಕು. ಇದನ್ನ ಅನಿಷ್ಟ ಅಂತ ಹೇಳಬಾರದು. ಪ್ರಕೃತಿ ನಿಯಮವಿದು.

ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ(Menorrhagia) ಎಂದು ಕರೆಯಲಾಗುತ್ತದೆ.

ಮೆನೊರ್ಹೇಜಿಯಾಕ್ಕೆ ಕಾರಣವೇನು? * ಮೆನೊರ್ಹೇಜಿಯಾಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ಇದು ಹಾರ್ಮೋನ್ ಅಸಮತೋಲನದಿಂದಾಗಿ ಸಂಭವಿಸುತ್ತದೆ (Hormone Imbalance). ಮಹಿಳೆಯರ ಗರ್ಭಾಶಯದಲ್ಲಿ ಪ್ರತಿ ತಿಂಗಳು ಒಂದು ಪದರವು ರೂಪುಗೊಳ್ಳುತ್ತದೆ. ಈ ಪದರವು ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತಸ್ರಾವದ ಮೂಲಕ ಹೊರಬರುತ್ತದೆ. ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಇದ್ದಾಗ ಈ ಪದರವು ತುಂಬಾ ದಪ್ಪವಾಗುತ್ತದೆ. ಆಗ ಇದು ಅಧಿಕ ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ. * ಗರ್ಭಾಶಯದಲ್ಲಿ ಫೈಬ್ರಾಯ್ಡ್​ಗಳು ಇರುವುದರಿಂದ ಕೆಲವೊಮ್ಮೆ ಅಧಿಕ ರಕ್ತಸ್ರಾವ ಪ್ರಾರಂಭವಾಗುತ್ತದೆ. * ಗರ್ಭಾಶಯದಲ್ಲಿನ ಕ್ಯಾನ್ಸರ್ ಅಥವಾ ಅಂಡಾಶಯದಲ್ಲಿನ ಕ್ಯಾನ್ಸರ್ ಕೂಡ ಹೆಚ್ಚು ರಕ್ತಸ್ರಾವಕ್ಕೆ ಕಾರಣವಾಗಬಹುದು. * ಹಾರ್ಮೋನ್ ಸಮಸ್ಯೆಯಿದ್ದಾಗ ಔಷಧಿಗಳನ್ನು ತೆಗೆದುಕೊಳ್ಳಲು ತಜ್ಞರು ಸೂಚಿಸುತ್ತಾರೆ. ವೈದ್ಯರು ನೀಡಿದ ಕೆಲ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಆಗ ಮಾತ್ರ ಮೆನೊರ್ಹೇಜಿಯಾ ಸಮಸ್ಯೆಯನ್ನು ದೂರ ಮಾಡಬಹದು. * ರಕ್ತಸ್ರಾವ ಅಧಿಕವಾಗುತ್ತಿದ್ದರೆ ಅಂತವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಗರ್ಭಾಶಯವನ್ನು ತೆಗೆಯಬಹುದು. ಆ ಬಳಿಕ ಮುಟ್ಟಾಗುವುದು ನಿಲ್ಲುತ್ತದೆ.

ಮನೆಮದ್ದುಗಳು ಇಲ್ಲಿವೆ * ಸಾಸಿವೆಯನ್ನು ಚೆನ್ನಾಗಿ ಪುಡಿ ಮಾಡಿ. ಮುಟ್ಟಿನ ವೇಳೆ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಒಂದು ಚಮಚ ಸಾಸಿವೆ ಪುಡಿಯನ್ನು ತಣ್ಣಗಿರುವ ಹಾಲಿನೊಂದಿಗೆ ಸೇರಿಸಿ ಕುಡಿಯಿರಿ. * ಜೀರಿಗೆಯನ್ನು ಪುಡಿ ಮಾಡಿ. ಎರಡು ಚಮಚ ಜೀರಿಗೆ ಪುಡಿಯನ್ನು ಒಂದು ಲೋಟ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ, ಕುಡಿಯಿರಿ. ಕುಡಿಯುವಾಗ ಜೀರಿಗೆ ನೀರು ಬಿಸಿಯಾಗಿರಬೇಕು. * ಒಂದು ಬಟ್ಟೆ ಅಥವಾ ಟವೆಲ್ಗೆ ಐಸ್ ಕ್ಯೂಬ್ಗಳನ್ನು ಹಾಕಿ. ಅದನ್ನು ಚೆನ್ನಾಗಿ ಹೊಟ್ಟೆಗೆ ಕಟ್ಟಿಕೊಳ್ಳಿ. ಹೊಟ್ಟೆಯ ಕೆಳಭಾಗದಲ್ಲಿ 15 ರಿಂದ 20 ನಿಮಿಷಗಳ ಕಾಲ ಇರಿಸಿ. * ಒಂದು ಚಮಚ ಮೆಂತ್ಯ ಬೀಜವನ್ನು ಎರಡು ಕಪ್ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಉಳಿದಿರುವಾಗ ಸೋಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿಯಬೇಕು.

ಇದನ್ನೂ ಓದಿ

Health Tips: ಚೀನಿಕಾಯಿ ಬೀಜ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮದ ಬಗ್ಗೆಯೂ ಗಮನ ಇರಲಿ

WhatsApp Use Tips: ವಾಟ್ಸ್​ಆ್ಯಪ್​ ಬಳಸಲು ಸಮಸ್ಯೆಯಾಗುತ್ತಿದೆಯೇ? ಇಲ್ಲಿದೆ 8 ಪರಿಹಾರೋಪಾಯ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ