Health Tips: ಚೀನಿಕಾಯಿ ಬೀಜ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮದ ಬಗ್ಗೆಯೂ ಗಮನ ಇರಲಿ

TV9 Digital Desk

| Edited By: shruti hegde

Updated on: Oct 07, 2021 | 8:42 AM

ಚೀನಿಕಾಯಿ ಬೀಜಗಳನ್ನು ಸೇವಿಸುವಾಗ, ಅದರ ಪ್ರಮಾಣಕ್ಕೆ ವಿಶೇಷ ಗಮನ ನೀಡಬೇಕು. ವಿಶೇಷವಾಗಿ ನೀವು ಯಾವುದೇ ರೀತಿಯ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದರೆ, ಚೀನಿಕಾಯಿ ಬೀಜಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

Health Tips: ಚೀನಿಕಾಯಿ ಬೀಜ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮದ ಬಗ್ಗೆಯೂ ಗಮನ ಇರಲಿ
ಸಾಂದರ್ಭಿಕ ಚಿತ್ರ
Follow us

ಚೀನಿಕಾಯಿ ಅನೇಕ ಪೋಷಕಾಂಶಗಳನ್ನು ಹೊಂದಿರುವ ತರಕಾರಿ. ಇದು ತಿನ್ನಲು ರುಚಿಕರವಾಗಿರುತ್ತದೆ ಮತ್ತು ನೀವು ಇದನ್ನು ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸಹುದು. ಹೆಚ್ಚಿನ ಜನರು ಚೀನಿಕಾಯಿಯನ್ನು ಮಾತ್ರ ಸೇವಿಸುತ್ತಾರೆ ಮತ್ತು ಅದರ ಬೀಜಗಳನ್ನು ಎಸೆಯುತ್ತಾರೆ. ಅದಾಗ್ಯೂ, ಇದರ ಬೀಜಗಳು ಫೈಬರ್, ವಿಟಮಿನ್ ಎ, ಸಿ, ಇ, ಕಬ್ಬಿಣ, ಕ್ಯಾಲ್ಸಿಯಂ, ನಿಯಾಸಿನ್, ರಿಬೋಫ್ಲಾವಿನ್, ಸತು ಮತ್ತು ಫೋಲೇಟ್ ನಂತಹ ಪೋಷಕಾಂಶಗಳಿಂದ ಕೂಡಿದೆ. ಇದರಲ್ಲಿ ವಿಟಮಿನ್ ಇ ಇದ್ದು ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ.

ಚೀನಿಕಾಯಿ ಬೀಜಗಳನ್ನು ಒಣಗಿಸಿ ಪುಡಿ ಮಾಡುವ ಮೂಲಕ ಕೂಡ ಬಳಸಬಹುದು. ನೀವು ಇದನ್ನು ಸೂಪ್, ಸಲಾಡ್ ಮತ್ತು ಸಿಹಿ ತಿನಿಸುಗಳಲ್ಲಿ ಬಳಸಬಹುದು. ಈ ಬೀಜವನ್ನು ಸೇವಿಸುವಾಗ, ಅದರ ಪ್ರಮಾಣಕ್ಕೆ ವಿಶೇಷ ಗಮನ ನೀಡಬೇಕು. ವಿಶೇಷವಾಗಿ ನೀವು ಯಾವುದೇ ರೀತಿಯ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದರೆ, ಚೀನಿಕಾಯಿ ಬೀಜಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಚೀನಿಕಾಯಿ ಬೀಜವನ್ನು ಯಾರು ಸೇವಿಸಬಾರದು? ಗರ್ಭಿಣಿ ಮತ್ತು ಸ್ತನ್ಯಪಾನ ಮಾಡುವ ಮಹಿಳೆಯರು ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಚೀನಿಕಾಯಿ ಬೀಜಗಳನ್ನು ಮಿತವಾಗಿ ಸೇವಿಸಬೇಕು. ಅದಾಗ್ಯೂ, ಇದು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಹಾನಿಕಾರಕ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಮಧುಮೇಹ ರೋಗಿಗಳು ಮಧುಮೇಹಿ ರೋಗಿಗಳಿಗೆ ಚೀನಿಕಾಯಿ ಬೀಜಗಳು ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಾಗಿಯೂ ನಿಮ್ಮ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಯಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಚೀನಿಕಾಯಿ ಬೀಜ ಸೇವಿಸಿ.

ಕಡಿಮೆ ರಕ್ತದೊತ್ತಡ ಚೀನಿಕಾಯಿ ಬೀಜಗಳು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಕಡಿಮೆ ರಕ್ತದೊತ್ತಡದ ಕಾಯಿಲೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಚೀನಿಕಾಯಿ ಬೀಜಗಳನ್ನು ಸೇವಿಸಬೇಕು.

ಹೊಟ್ಟೆಯ ಸಮಸ್ಯೆಗಳು ಚೀನಿಕಾಯಿ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಆದರೆ ನೀವು ಇದನ್ನು ಅತಿಯಾಗಿ ಸೇವಿಸಿದರೆ ಅತಿಸಾರದ ಸಮಸ್ಯೆ ಉಂಟಾಗಬಹುದು. ಇದಲ್ಲದೇ, ಇದು ಹೊಟ್ಟೆ ನೋವು, ಸೆಳೆತ ಮತ್ತು ಹೊಟ್ಟೆ ಉಬ್ಬುವುದನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಅತಿ ವೇಗದಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಈ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ!

Drinking Water: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada