ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟ ಆಹಾರ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರ ಸಲಹೆಗಳು ಇಲ್ಲಿವೆ
Health Tips: 24 ಗಂಟೆಗಳಿಗಿಂತ ಹಳೆಯದಾದ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ತೊಂದರೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಮಿಕ್ಕಿದ ಆಹಾರವನ್ನೆಲ್ಲಾ ಫ್ರಿಡ್ಜ್ನಲ್ಲಿ ಇಡುವ ಅಭ್ಯಾಸ ಇದ್ದೇ ಇರುತ್ತದೆ. ಹಾಗಿರುವಾಗ ಆಹಾರವನ್ನು ಫ್ರಿಡ್ಜ್ನಲ್ಲಿ ಎಷ್ಟು ಸಮಯ ಇಡಬಹುದು? ಇದು ಆರೋಗ್ಯಕರವೇ? ಎಂಬ ಪ್ರಶ್ನೆ ಎದುರಾಗುತ್ತದೆ. ಈ ಕುರಿತಂತೆ ಫಿಟ್ನೆಸ್ ತಜ್ಞೆ ಡಾ. ವರಲಕ್ಷ್ಮೀ ಇನ್ಸ್ಟಾಗ್ರಾಂನಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಅಹಾರವನ್ನು ಯಾವ ರೀತಿ ಬಳಸಿದರೆ ಒಳ್ಳೆಯದು ಎಂಬುದರ ಕುರಿತಾಗಿ ಒಂದಿಷ್ಟು ಟಿಪ್ಸ್ಗಳನ್ನು ತಿಳಿಸಿದ್ದಾರೆ.
24 ಗಂಟೆಗಳಿಗಿಂತ ಹಳೆಯದಾದ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ತೊಂದರೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ಫ್ರಿಡ್ಜ್ನಲ್ಲಿ ಆಹಾರವನ್ನು ಸಂಗ್ರಹಿಸಿಟ್ಟ ನಂತರ ಆಹಾರವನ್ನು ಬೇಯಿಸುತ್ತೇವೆ. ಫ್ರಿಡ್ಜ್ನಲ್ಲಿ ಆಹಾರವು ತೇವಾಂಶವನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಇತರ ರೋಗಾಣುಗಳಿಗೆ ಸಂತಾನೋತ್ಪತ್ತಿ ಮಾಡುತ್ತವೆ. ವಿಭಿನ್ನ ಆಹಾರವು ಬೇರೆ ಬೇರೆ ತೆರೆನಾದ ಶೇಖರಣಾ ಮಾರ್ಗ ಸೂಚಿಗಳನ್ನು ಹೊಂದಿವೆ ಎಂದು ಫಿಟ್ನೆಸ್ ತಜ್ಞೆ ವರದಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಫ್ರಿಡ್ಜ್ನಲ್ಲಿ ಇಟ್ಟ ಆಹಾರವನ್ನು ನಾವು ತಕ್ಷಣ ಬೇಯಿಸಿದಾಕ್ಷಣ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಕೆಲವರಿಗೆ ಫ್ರಿಡ್ಜ್ ಅನಯಕೂಲವಾಗಿದ್ದರೂ ಸಹ ಹೆಚ್ಚಿನವರಿಗೆ ಇದು ಅನಾನುಕೂಲ. ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಅವರು ವಿವರಿಸಿದ್ದಾರೆ.
ನೆನಪಿಡುವ ಅಂಶಗಳು *ಆಹಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಬೇಡಿ *ಪದೇ ಪದೇ ಬಿಸಿಯಾಗುವವರೆಗೆ ಆಹಾರವನ್ನು ಕಾಯಿಸುತ್ತಲೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ *ಮಾಂಸ, ಡೈರಿ ಉತ್ಪನ್ನಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿ ಬಳಸುವ ಮೊದಲು ಮಾರ್ಗಸೂಚಿಗಳನ್ನು ಅನುಸರಿಸಿ *ತಣ್ಣಗಾದ ಆಹಾರವನ್ನು ಎರಡು ಮೂರು ದಿನಗಳವರೆಗೆ ಬಳಸಬೇಡಿ
ಇದನ್ನೂ ಓದಿ:
Health Tips: ಡ್ರೈ ಫ್ರೂಟ್ಸ್ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
Health Tips: ಹೃದಯ ಆರೋಗ್ಯ ಸುಧಾರಣೆಗೆ ಈ ಹಣ್ಣುಗಳ ಸೇವನೆ ಪ್ರಯೋಜನಕಾರಿ