ಮುಖವನ್ನು ಹೆಚ್ಚು ಆಕರ್ಷಕವಾಗಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅಂದವಾಗಿ ಕಾಣಲು ಈ ಯೋಗಾಸನ ಮಾಡಿ

ಮುಖದ ಮೇಲಿನ ಕೆಲವು ಹೆಚ್ಚುವರಿ ಭಾಗವನ್ನು ಕಡಿಮೆ ಮಾಡುವುದು ಸುಲಭವಲ್ಲವಾದ್ದರಿಂದ, ಜನರು ಮುಖದ ಕೊಬ್ಬನ್ನು ಮರೆಮಾಡಲು ಮತ್ತು ಹೊಳಪನ್ನು ತರಲು ಸೌಂದರ್ಯವರ್ಧಕಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ.

ಮುಖವನ್ನು ಹೆಚ್ಚು ಆಕರ್ಷಕವಾಗಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅಂದವಾಗಿ ಕಾಣಲು ಈ ಯೋಗಾಸನ ಮಾಡಿ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 07, 2021 | 8:30 AM

ದೇಹದ ತೂಕ ಸಮತೋಲ ಸ್ಥಿತಿಯಲ್ಲಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಲ್ಲದೆ ತೂಕದ ಹೆಚ್ಚಳವು ಅನಾರೋಗ್ಯಕ್ಕೂ ಕಾರಣವಾಗುವಂತೆ ಮಾಡುತ್ತದೆ. ದೇಹದ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಅಲ್ಲದೆ ನೆಚ್ಚಿನ ಬಟ್ಟೆಗಳನ್ನು ಧರಿಸುವುದನ್ನು ತಡೆಯುತ್ತದೆ. ಅದಾಗ್ಯೂ, ದೇಹ ದಪ್ಪವಾದಾಗ ನಮ್ಮ ಮುಖದ ಆಕಾರವು ಕೂಡ ಬದಲಾಗುತ್ತದೆ. ಡಬಲ್ ಚಿನ್ ಸಮಸ್ಯೆ ಕೂಡ ಉಂಟಾಗುತ್ತದೆ.

ಮುಖದ ಮೇಲಿನ ಕೆಲವು ಹೆಚ್ಚುವರಿ ಭಾಗವನ್ನು ಕಡಿಮೆ ಮಾಡುವುದು ಸುಲಭವಲ್ಲವಾದ್ದರಿಂದ, ಜನರು ಮುಖದ ಕೊಬ್ಬನ್ನು ಮರೆಮಾಡಲು ಮತ್ತು ಹೊಳಪನ್ನು ತರಲು ಸೌಂದರ್ಯವರ್ಧಕಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಹೀಗಾಗಿ ಯೋಗಾಸನ ಮಾಡುವುದು ಮುಖ್ಯ. ಮುಖದ ಕೊಬ್ಬನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮುಖಕ್ಕೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.

ಈ ಎಂಟು ಯೋಗಾಸಗಳು ಮುಖದ ಕಾಂತಿ ಹೆಚ್ಚಿಸುತ್ತದೆ

1. ತ್ರಿಕೋನಾಸನ ಈ ಯೋಗ ಎದೆ, ಶ್ವಾಸಕೋಶ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ. ಇದು ಚರ್ಮಕ್ಕೆ ಹೆಚ್ಚಿನ ಆಮ್ಲಜನಕವನ್ನು ಒದಗಿಸಲು ಸಹಾಯ ಮಾಡುತ್ತದೆ. ತ್ರಿಕೋನಾಸನ ದೇಹದ ಜತೆಗೆ ಮುಖದ ಕಾಳಜಿ ಮಾಡುತ್ತದೆ ಮತ್ತು ಪುನರ್ಯೌವನಕ್ಕೆ ಸಹಾಯ ಮಾಡುತ್ತದೆ.

2. ಉಷ್ಟ್ರಾಸನ ಈ ಆಸನವು ಡಬಲ್ ಚಿನ್ ಸಮಸ್ಯೆ ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೊಟ್ಟೆಯನ್ನು ಕೂಡ ಬೊಜ್ಜಿನಿಂದ ದೂರ ಮಾಡುತ್ತದೆ.

3. ಉತ್ತಾನಾಸನ ಈ ಯೋಗಾಸನವು ಮುಖದ ಮೇಲಿನ ಚರ್ಮದ ಕೋಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಎದುರಿಸಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

4. ಧನುರಾಸನ ಈ ಯೋಗಾಸನವು ಕಿಬ್ಬೊಟ್ಟೆಯ ಪ್ರದೇಶದ ಮೇಲೆ ಬಲವಾದ ಒತ್ತಡವನ್ನು ಬೀರುವ ಮೂಲಕ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಆ ಮೂಲಕ ಮುಖಕ್ಕೆ ಹೊಳಪನ್ನು ನೀಡುತ್ತದೆ.

5. ಹಲಾಸನ ಇದು ನೈಸರ್ಗಿಕವಾಗಿ ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಆಸನವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

6. ಸರ್ವಾಂಗಾಸನ ಸರ್ವಾಂಗಾಸನವು ಮುಖದ ಕಡೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಚರ್ಮದ ವಿನ್ಯಾಸ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ.

7. ಶವಾಸನ ಶವಾಸನವು ಮುಖಕ್ಕೆ ಆಳವಾದ ಮತ್ತು ಧ್ಯಾನಸ್ಥ ವಿಶ್ರಾಂತಿಯನ್ನು ತರುತ್ತದೆ. ಅಲ್ಲದೆ, ಇದು ಅಂಗಾಂಶಗಳು ಮತ್ತು ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

8. ಮತ್ಯಾಸನ ಇದು ಕೆನ್ನೆಯ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಮತ್ಯಾಸನ ನಿಮಗೆ ಸೂಕ್ತವಾದ ದವಡೆ ಮತ್ತು ಕೆನ್ನೆಯ ಮೂಳೆಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: Yogasana Benefits: ಮೂಳೆಗಳ ಬಲಕ್ಕೆ ಪ್ರತಿದಿನ ಈ ಯೋಗಾಸನಗಳನ್ನು ಮಾಡಿ

Weight Reduce Yoga: ತೂಕ ಇಳಿಸಲು ಈ ಐದು ಯೋಗಾಸನ ಮಾಡಿ

ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು