AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Good Sleep: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಲಗುವ ಮುನ್ನ ಹೀಗೆ ಮಾಡಿ

Health Tips: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಾತ್ರೆ ಸೇವಿಸದೇಯೇ ಒಳ್ಳೆಯ ನಿದ್ರೆ ಪಡೆಯಲು ಏನು ಮಾಡಬೇಕು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ಸಮಸ್ಯೆಗೆ ಪರಿಹಾರ.

Good Sleep: ನಿಮಗೆ ಒಳ್ಳೆಯ ನಿದ್ರೆ ಬೇಕೆ? ಮಲಗುವ ಮುನ್ನ ಹೀಗೆ ಮಾಡಿ
ಸಂಗ್ರಹ ಚಿತ್ರ
TV9 Web
| Edited By: |

Updated on: Oct 06, 2021 | 9:07 AM

Share

ಆರೋಗ್ಯ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ರಾತ್ರಿಯಲ್ಲಿನ ಒಳ್ಳೆಯ ನಿದ್ರೆಯನ್ನು ಕಿತ್ತುಕೊಳ್ಳಬಹುದು. ರಾತ್ರಿ ಸರಿಯಾಗಿ ನಿದ್ರೆ ಇಲ್ಲದಿದ್ದರೆ ಮರುದಿನ ಕೆಲಸ ಮಾಡಲು ಉತ್ಸಾಹವಿರುವುದಿಲ್ಲ. ಜತೆಗೆ ತಲೆನೋವಿನಂತಹ ಸಣ್ಣ ಪುಟ್ಟ ಕಿರಿ ಕಿರಿ, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಿರುವಾಗ ಒಳ್ಳೆಯ ನಿದ್ರೆ ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ.

ಕೆಲವರು ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲವೆಂದು ಮಾತ್ರೆ ನುಂಗುತ್ತಾರೆ. ಅದರೆ ಇವು ನಿಮ್ಮ ಇತರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಾತ್ರೆ ಸೇವಿಸದೇಯೇ ಒಳ್ಳೆಯ ನಿದ್ರೆ ಪಡೆಯಲು ಏನು ಮಾಡಬೇಕು ಎಂದು ಚಿಂತಿಸುತ್ತಿದ್ದೀರಾ? ಇಲ್ಲಿದೆ ಸಮಸ್ಯೆಗೆ ಪರಿಹಾರ.

ರಾತ್ರಿ ಮಲಗುವ ಮುನ್ನ ಮೊಬೈಲ್​ನಿಂದ ದೂರವಿರಿ ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್​ನೊಂದಿಗೆ ಕಳೆಯುತ್ತಾರೆ. ಇದು ದೃಷ್ಟಿ ಸಮಸ್ಯೆಗೆ ಕಾರಣವಾಗಬಹುದು. ಜತೆಗೆ ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುತ್ತಲೇ ಇರುವುದರಿಂದ ಕಣ್ಣಿಗೆ ಒತ್ತಡ ಉಂಟಾಗುತ್ತದೆ. ಇದರಿಂದ ನಿಮ್ಮ ಮನಸ್ಥಿತಿ ಹದಗೆಟ್ಟು ಒಳ್ಳೆಯ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಒಳ್ಳೆಯ ನಿದ್ರೆ ಪಡೆಯಲು ನಿದ್ರೆ ಮಾಡುವ ಒಂದು ಗಂಟೆ ಮೊದಲು ಮೊಬೈಲ್​ನಿಂದ ದೂರವಿರಿ.

ಮಲಗುವ ಮುನ್ನ ಸ್ನಾನ ಮಾಡಿ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ದಣಿದಿದ್ದಾಗ ದೇಹ ಆಯಾಸಗೊಂಡಿರುತ್ತದೆ. ಹಾಗಿರುವಾಗ ಧೂಳು, ಕಲುಷಿತ ವಾತಾವರಣದಿಂದ ದೇಹವನ್ನು ರಕ್ಷಿಸಿಕೊಳ್ಳಲು ಸ್ನಾನ ಮಾಡುವುದು ಅತ್ಯವಶ್ಯಕ. ಜತೆಗೆ ಸ್ನಾನ ಮಾಡುವುದರಿಂದ ದೇಹದ ಆಯಾಸ ಕಡಿಮೆ ಆಗುತ್ತದೆ. ಇದರಿಂದ ಒಳ್ಳೆಯ ನಿದ್ರೆ ಮಾಡಬಹುದು.

ಉಸಿರಾಟ ಸಂಬಂಧಿತ ವ್ಯಾಯಾಮ ಪ್ರತಿನಿತ್ಯ ಉಸಿರಾಟವನ್ನು ಸುಧಾರಿಸುವ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಜತೆಗೆ ಪ್ರಾಣಾಯಾಮ, ಯೋಗಾಸನ ಮತ್ತು ಧ್ಯಾನ ಆರೋಗ್ಯಕ್ಕೆ ಉತ್ತಮ. ಮನಸ್ಸು ಶಾಂತವಾಗಿರಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಕೊಳ್ಳಿ.

ಒಳ್ಳೆಯ ಪುಸ್ತಕವನ್ನು ಓದಿ ಮಲಗುವ ಮುನ್ನ ನಿಮಗಿಷ್ಟದ ಒಳ್ಳೆಯ ಪುಸ್ತಕವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಮನಸ್ಸು ಶಾಂತವಾಗಿದ್ದರೆ ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಮಾಡಬಹುದು. ಓದುವಾಗ ಮನಸ್ಸು ಏಕಾಗ್ರತೆಯಿಂದ ಕೂಡಿರುವುದರಿಂದ ಮನಸ್ಸಿಗೆ ಅನಗತ್ಯ ಯೋಚನೆಗಳು ಕಿರಿ ಕಿರಿ ಉಂಟು ಮಾಡುವುದಿಲ್ಲ.

ಇದನ್ನೂ ಓದಿ:

Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ

Health Tips: ಆಫೀಸು, ಮನೆ ಈ ಎಲ್ಲವುಗಳ ಒತ್ತಡದಿಂದ ಬಳಲುತ್ತಿದ್ದೀರಾ?; ಹೊರಬರಲು ಇಲ್ಲಿವೆ ಸುಲಭ ವಿಧಾನಗಳು

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ