Sprouts: ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ಗಮನಿಸಿ

Health Benefits: ಮೊಳಕೆಯೊಡೆದ ಹೆಸರು ಕಾಳುಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಮೊಳಕೆಯೊಡೆದ ನಂತರ ಹೆಸರು ಕಾಳುಗಳನ್ನು ತೆಗೆದುಕೊಂಡರೆ, ದೇಹದಲ್ಲಿನ ಅನೇಕ ರೋಗಗಳು ದೂರವಾಗುತ್ತದೆ. ಮೊಳಕೆಯೊಡೆದ ಹೆಸರು ಕಾಳುಗಳನ್ನು ತಿನ್ನುವುದರಿಂದ ದೈಹಿಕ ಲಾಭಗಳೇನು ಎಂಬುದನ್ನು ತಿಲಿಯುವುದು ಸೂಕ್ತ.

Sprouts: ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ಗಮನಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 25, 2021 | 1:34 PM

ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಸೇವಿಸುವುದು ಅಗತ್ಯ. ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಲು ವೈದ್ಯರು ಉತ್ತಮ ಆಹಾರ ಸೇವಿಸಲು ಸಲಹೆ ನೀಡುತ್ತಾರೆ. ಅದರಲ್ಲೂ ಮೊಳಕೆ ಬರಿಸಿದ ಆಹಾರ ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.  ಮೊಳಕೆಯೊಡೆದ ಹೆಸರು ಕಾಳುಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ. ಮೊಳಕೆಯೊಡೆದ ನಂತರ ಹೆಸರು ಕಾಳುಗಳನ್ನು ತೆಗೆದುಕೊಂಡರೆ, ದೇಹದಲ್ಲಿನ ಅನೇಕ ರೋಗಗಳು ದೂರವಾಗುತ್ತದೆ. ಮೊಳಕೆಯೊಡೆದ ಹೆಸರು ಕಾಳುಗಳನ್ನು ತಿನ್ನುವುದರಿಂದ ದೈಹಿಕ ಲಾಭಗಳೇನು ಎಂಬುದನ್ನು ತಿಲಿಯುವುದು ಸೂಕ್ತ.

ಮಧುಮೇಹವನ್ನು ನಿಯಂತ್ರಿಸುತ್ತದೆ ಮೊಳಕೆಯೊಡೆದ ಹೆಸರು ಕಾಳುಗಳನ್ನು ತೆಗೆದುಕೊಳ್ಳುವುದು ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಮಧುಮೇಹ ರೋಗಿಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಧುಮೇಹಿಗಳು ಮೊಳಕೆ ಕಾಳುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸಮತೋಲನದಲ್ಲಿರುತ್ತದೆ.

ಹೃದ್ರೋಗದಿಂದ ರಕ್ಷಿಸುತ್ತದೆ ಹೃದಯ ಕಾಯಿಲೆಯಿಂದ ದೂರವಿರಲು ಮೊಳಕೆಯೊಡೆದ ಹೆಸರು ಕಾಳುಗಳನ್ನು ತೆಗೆದುಕೊಳ್ಳುವುದು ಸಹ ಮುಖ್ಯವಾಗಿದೆ. ಇವುಗಳನ್ನು ಸೇವಿಸುವುದರಿಂದ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು.

ಶಕ್ತಿಯನ್ನು ಹೆಚ್ಚಿಸುತ್ತದೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಳಕೆಯೊಡೆದ ಹೆಸರು ಕಾಳುಗಳನ್ನು ತೆಗೆದುಕೊಳ್ಳುವುದರಿಂದ ದೇಹವು ಒಳಗಿನಿಂದ ಶಕ್ತಿಯುತವಾಗಿರುತ್ತದೆ. ಆದ್ದರಿಂದ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮೊಳಕೆಯೊಡೆದ ಹೆಸರು ಕಾಳು ಸೇವಿಸಿ.

ಫೋಲೇಟ್‌ನ ಉತ್ತಮ ಮೂಲ ಗರ್ಭಾವಸ್ಥೆಯಲ್ಲಿರುವವರಿಗೆ ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಅನುಕೂಲಕರವಾಗಿದೆ. ಫೋಲೇಟ್ ಎಂಬ ಪೋಷಕಾಂಶವು ಇದರಿಂದ ಸಿಗುತ್ತದೆ. ಇದು ಹುಟ್ಟಲಿರುವ ಮಗು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತೂಕ ಕಡಿಮೆ ಮಾಡಲು ನೀವು ತೂಕ ಹೆಚ್ಚಿಸಿಕೊಂಡಿದ್ದರೆ, ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲನ ಕೊಬ್ಬಿನ ಬೆಳವಣಿಗೆಯನ್ನು ಕಡಿಮೆ ಮಾಡಲು ಮೊಳಕೆ ಕಾಳು ಸಹಾಯ ಮಾಡುತ್ತದೆ.

ಇದನ್ನೂ ಓದಿ: Color Rice Benefits: ನಾವು ಸೇವಿಸುವ ಅಕ್ಕಿಯಲ್ಲೂ ಬಣ್ಣಗಳಿವೇ? ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?

Benefits Of Hing: ಇಂಗು ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ