Cashew Milk: ರಾತ್ರಿ ನಿದ್ದೆ ಸರಿಯಾಗಿ ಬರುತ್ತಿಲ್ಲ ಎನ್ನುವವರು ಗೋಡಂಬಿ ಹಾಲನ್ನು ಒಮ್ಮೆ ಟ್ರೈ ಮಾಡಿ

ಸರಿಯಾಗಿ ನಿದ್ದೆ ಬಾರದೇ ಇದ್ದರೆ ಭವಿಷ್ಯದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ವೈದ್ಯರನ್ನು ಸಂಪರ್ಕಿಸಬಹುದು ಅಥವಾ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಲ್ಲವಾದಲ್ಲಿ ಉತ್ತಮ ನಿದ್ದೆಗಾಗಿ ಗೋಡಂಬಿ ಹಾಲನ್ನು ಸೇವಿಸಬಹುದು.

Cashew Milk: ರಾತ್ರಿ ನಿದ್ದೆ ಸರಿಯಾಗಿ ಬರುತ್ತಿಲ್ಲ ಎನ್ನುವವರು ಗೋಡಂಬಿ ಹಾಲನ್ನು ಒಮ್ಮೆ ಟ್ರೈ ಮಾಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 26, 2021 | 9:00 AM

ನಿಮ್ಮ ದೇಹ ಹಾಗೂ ಮನಸ್ಸು ಆರೋಗ್ಯವಾಗಿರಲು ರಾತ್ರಿಯ ನಿದ್ದೆ ಬಹಳ ಮುಖ್ಯ. ಮರುದಿನ ಮತ್ತೆ ಹೊಸ ಚೈತನ್ಯ ಮತ್ತು ಉಲ್ಲಾಸವನ್ನು ಅನುಭವಿಸಲು ನಿದ್ದೆ ಸಹಾಯ ಮಾಡುತ್ತದೆ. ಇದು ದಿನದ ಎಲ್ಲಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಪ್ರತಿಯೊಬ್ಬರೂ ರಾತ್ರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ. ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ.

ಸರಿಯಾಗಿ ನಿದ್ದೆ ಬಾರದೇ ಇದ್ದರೆ ಭವಿಷ್ಯದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ವೈದ್ಯರನ್ನು ಸಂಪರ್ಕಿಸಬಹುದು ಅಥವಾ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಲ್ಲವಾದಲ್ಲಿ ಉತ್ತಮ ನಿದ್ದೆಗಾಗಿ ಗೋಡಂಬಿ ಹಾಲನ್ನು ಸೇವಿಸಬಹುದು. ಇದು ತುಂಬಾ ಪರಿಣಾಮಕಾರಿ. ಹಾಗಿದ್ದರೆ ಗೋಡಂಬಿ ಹಾಲು ಹೇಗೆ ತಯಾರಿಸಲಾಗುತ್ತದೆ ಮತ್ತು ಅದರ ಆರೋಗ್ಯ ಪ್ರಯೋಜನಗಳೇನು ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ಗೋಡಂಬಿ ಹಾಲು ತಯಾರಿಸುವ ವಿಧಾನ 3-4 ಗೋಡಂಬಿ ತೆಗೆದುಕೊಂಡು ಅವುಗಳನ್ನು ಒಂದು ಕಪ್ ಹಾಲಿನಲ್ಲಿ ನೆನೆಸಿ. ಇದನ್ನು 4-5 ಗಂಟೆಗಳ ಕಾಲ ನೆನೆಯಲು ಬಿಡಿ. ಈಗ ನೆನೆಸಿದ ಗೋಡಂಬಿಯನ್ನು ತೆಗೆದುಕೊಂಡು ಪುಡಿಮಾಡಿ. ನಂತರ ಅವುಗಳನ್ನು ಹಾಲಿನೊಂದಿಗೆ ಕಲಸಿ. ರುಚಿಗೆ ನೀವು ಸ್ವಲ್ಪ ಸಕ್ಕರೆಯನ್ನು ಕೂಡ ಇದಕ್ಕೆ ಸೇರಿಸಬಹುದು. ಬಳಿಕ ಇದನ್ನು ಸ್ವಲ್ಪ ಸಮಯ ಕುದಿಸಿ. ಈಗ ರುಚಿಕರವಾದ ಗೋಡಂಬಿ ಹಾಲು ಸವಿಯಲು ಸಿದ್ಧ. ಮಲಗುವ ಮೊದಲು ಇದನ್ನು ಕುಡಿಯಿರಿ. ಇದು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ನಿದ್ದೆಗಾಗಿ ಗೋಡಂಬಿ ಗೋಡಂಬಿ ಸೇರಿದಂತೆ ಅನೇಕ ಡ್ರೈ ಫ್ರೂಟ್ಸ್ ನಿದ್ರೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಮೆಗ್ನೀಸಿಯಮ್ ಮತ್ತು ಜಿಂಕ್ ನಂತಹ ಅಗತ್ಯವಾದ ಖನಿಜಗಳನ್ನು ಒಳಗೊಂಡಿರುತ್ತದೆ ಮತ್ತು ಮೆಲಟೋನಿನ್ ಅನೇಕ ದೈಹಿಕ ಕಾರ್ಯಗಳಿಗೆ ಮುಖ್ಯವಾಗಿದೆ.

ಸಂಶೋಧನೆಯ ಪ್ರಕಾರ, ಮೆಲಟೋನಿನ್, ಮೆಗ್ನೀಸಿಯಮ್ ಮತ್ತು ಸತುಗಳ ಸಂಯೋಜನೆಯು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಉತ್ತಮ ನಿದ್ರೆ ಪಡೆಯಲು ಕಷ್ಟಪಡುತ್ತಿದ್ದರೆ ಗೋಡಂಬಿ ಬೀಜ ಸೇವಿಸಬಹುದು.

ಉತ್ತಮ ನಿದ್ದೆಗಾಗಿ ಹಾಲು ಪ್ರಾಚೀನ ಕಾಲದಿಂದಲೂ ಜನರು ಮಲಗುವಾಗ ಹಾಲು ಕುಡಿಯುತ್ತಾರೆ. ಏಕೆಂದರೆ ಹಾಲು ಉತ್ತಮ ನಿದ್ದೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಟ್ರಿಪ್ಟೊಫಾನ್. ವಯಸ್ಸಾದವರಲ್ಲಿ ನಿದ್ದೆ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಹಾಲು ಸಹಾಯ ಮಾಡುತ್ತದೆ. ಇದರೊಂದಿಗೆ ಹಾಲು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ಒಳಗೊಂಡಿರುತ್ತದೆ. ಹಾಲು ಮಕ್ಕಳಿಗೆ ಕೂಡ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಲಗುವ ವೇಳೆಗೆ ಹಾಲು ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ: ನಿದ್ರೆಯನ್ನು ಯಾವತ್ತೂ ಕಡೆಗಣಿಸಬೇಡಿ, ಕನಿಷ್ಟ 6 ತಾಸುಗಳ ನಿದ್ರೆ ದೇಹಕ್ಕೆ ಅತ್ಯವಶ್ಯಕ: ಡಾ ಸೌಜನ್ಯ ವಶಿಷ್ಠ

Tv9 Yoga Class: ರಾತ್ರಿ ನಿದ್ದೆ ಬರ್ತಿಲ್ಲವಾ? ಮಲಗುವ ಮುನ್ನ ಹೀಗೆ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್