Drinking Water: ನಿಂತು ನೀರು ಕುಡಿಯುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ
ಹೆಚ್ಚಿನ ಜನರು ನಿಂತು ನೀರು ಕುಡಿಯುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಯಾವಾಗ ಬೇಕಾದರೂ ನೀರು ಕುಡಿಯಿರಿ. ಆದರೆ ನೀರು ಕುಡಿಯುವಾಗ ಶಾಂತವಾಗಿ ಕುಳಿತುಕೊಳ್ಳಿ. ನೀವು ಎದ್ದು ನಿಂತು ನೀರು ಕುಡಿದರೆ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು ಇದಕ್ಕೆ ಉತ್ತರ ಇಲ್ಲಿದೆ.
ದೇಹಕ್ಕೆ ಎಷ್ಟು ನೀರು ಬೇಕು ಎಂದು ಎಲ್ಲರಿಗೂ ತಿಳಿದಿದೆ. ಆಹಾರವಿಲ್ಲದೆ ಸ್ವಲ್ಪ ದಿನ ಇರಬಹುದು. ಆದರೆ ನೀರಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿಯೇ ನೀವು ದಿನಕ್ಕೆ ಎಷ್ಟು ಲೀಟರ್ ನೀರನ್ನು ಕುಡಿಯುತ್ತೀರಿ ಎಂಬುವುದನ್ನು ನೀವು ಪರಿಶೀಲಿಸಬೇಕು. ಅಲ್ಲದೇ ನೀರು ಹೇಗೆ ಕುಡಿಯುತ್ತಿದ್ದೀರಿ ಎಂಬುವುದೂ ಮುಖ್ಯ. ಹೆಚ್ಚಿನ ಜನರು ನಿಂತು ನೀರು ಕುಡಿಯುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಯಾವಾಗ ಬೇಕಾದರೂ ನೀರು ಕುಡಿಯಿರಿ. ಆದರೆ ನೀರು ಕುಡಿಯುವಾಗ ಶಾಂತವಾಗಿ ಕುಳಿತುಕೊಳ್ಳಿ. ನೀವು ಎದ್ದು ನಿಂತು ನೀರು ಕುಡಿದರೆ ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು ಇದಕ್ಕೆ ಉತ್ತರ ಇಲ್ಲಿದೆ.
1. ಅಜೀರ್ಣ ನಿಂತು ನೀರನ್ನು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕುಡಿಯುವ ನೀರು ವೇಗವಾಗಿ ದೇಹಕ್ಕೆ ಹೋಗುತ್ತದೆ ಮತ್ತು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಇದು ತುಂಬಾ ಅಪಾಯಕಾರಿ. ಹೀಗೆ ಮಾಡುವುದರಿಂದ ದ್ರವದ ಸಮತೋಲನ ಹಾಳಾಗುತ್ತದೆ. ಇದು ದೇಹದಲ್ಲಿ ಸಮಸ್ಯೆ ನಿರ್ಮಿಸಲು ಕಾರಣವಾಗುತ್ತದೆ.
2. ಸಂಧಿವಾತ ನಿಂತು ನೀರು ಕುಡಿಯುವಾಗ ನರಗಳು ಉದ್ವಿಗ್ನ ಸ್ಥಿತಿಯಲ್ಲಿರುತ್ತವೆ. ಇದು ದ್ರವ ಸಮತೋಲನವನ್ನು ಹಾನಿಗೊಳಿಸುತ್ತದೆ. ದೇಹದಲ್ಲಿನ ವಿಷಗಳು, ಅಜೀರ್ಣವನ್ನು ಹೆಚ್ಚಿಸುತ್ತದೆ. ಹೀಗೆ ಮಾಡುವುದರಿಂದ ಸಂಧಿವಾತಕ್ಕೆ ಕಾರಣವಾಗಬಹುದು. ಏಕೆಂದರೆ ನಿಂತಲ್ಲೇ ನೀರು ಕುಡಿಯುವುದರಿಂದ ಕೀಲುಗಳಲ್ಲಿ ದ್ರವ ಸಂಗ್ರಹವಾಗುತ್ತದೆ. ಇದು ಸಂಧಿವಾತ ಸಮಸ್ಯೆಗಳು ಮತ್ತು ಕೀಲು ನೋವುಗಳಿಗೆ ಕಾರಣವಾಗಬಹುದು.
3. ಶ್ವಾಸಕೋಶಕ್ಕೆ ಅಪಾಯ ನಿಂತುಕೊಂಡು ನೀರು ಕುಡಿಯುವಾಗ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ತಲುಪುವುದಿಲ್ಲ. ನೀವು ಎದ್ದು ನಿಂತು ನೀರು ಕುಡಿದಾಗ, ನೀರು ದೇಹಕ್ಕೆ ವೇಗವಾಗಿ ಹೋಗುತ್ತವೆ. ಇದು ಆಮ್ಲಜನಕದ ಮಟ್ಟವನ್ನು ಹೊರಹಾಕಲು ಕಾರಣವಾಗುತ್ತದೆ. ಆದ್ದರಿಂದ ಶ್ವಾಸಕೋಶ ಹೃದಯದ ಕಾರ್ಯವನ್ನು ಅಪಾಯಕ್ಕೆ ತಳ್ಳುತ್ತವೆ.
4. ಕಿಡ್ನಿ ಸಮಸ್ಯೆ ಕುಳಿತುಕೊಂಡಾಗ ನಮ್ಮ ಮೂತ್ರಪಿಂಡಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅನೇಕ ವರದಿಗಳಲ್ಲಿ ವರದಿಯಾಗಿದೆ. ನಿಂತು ನೀರು ಕುಡಿಯುವಾಗ ನೀರು ಯಾವುದೇ ಫಿಲ್ಟರ್ ಇಲ್ಲದೆ ಹೊಟ್ಟೆಯ ಕೆಳಭಾಗಕ್ಕೆ ಹೋಗುತ್ತದೆ. ಇದು ಮೂತ್ರಕೋಶದಲ್ಲಿ ನೀರಿನ ಮಾಲಿನ್ಯಕ್ಕೆ ಕಾರಣವಾಗಬಹುದು ಮತ್ತು ಮೂತ್ರಪಿಂಡದ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ ಮೂತ್ರನಾಳದಲ್ಲಿ ಅಸ್ವಸ್ಥತೆ ಉಂಟುಮಾಡುತ್ತದೆ.
ನೀರು ಕುಡಿಯಲು ಸರಿಯಾದ ಮಾರ್ಗ ಯಾವುದು? ಕುರ್ಚಿಯ ಮೇಲೆ ಕುಳಿತು ನೀರು ಕುಡಿಯುವುದು ಸರಿಯಾದ ಮಾರ್ಗ. ಅಂದರೆ ನಮ್ಮ ದೇಹ ಶಾಂತ ರೀತಿಯಲ್ಲಿ ಇರುವುದು ಮುಖ್ಯ. ಹೀಗಾಗಿ ನೀರು ಕುಳಿತು ಕುಡಿಯಿರಿ. ಈ ಮಾರ್ಗದಿಂದ ಮೆದುಳಿಗೆ ಪೋಷಕಾಂಶಗಳು ತಲುಪುತ್ತವೆ. ಮೆದುಳು ತನ್ನ ಕಾರ್ಯವನ್ನು ಸುಧಾರಿಸುತ್ತದೆ. ಜತೆಗೆ ಜೀರ್ಣಕ್ರಿಯೆಯನ್ನು ಇದು ಸುಧಾರಿಸುತ್ತದೆ.
ಇದನ್ನೂ ಓದಿ: Sprouts: ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ಗಮನಿಸಿ
Health Tips: ಬಿಸಿ ನೀರು ಕುಡಿಯುವಾಗ ಈ 3 ಪದಾರ್ಥಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ