AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Custard Apple: ಸೀತಾಫಲ ಹಣ್ಣು ಸೇವನೆಯಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

ತಾಜಾ ಹಣ್ಣುಗಳ ಸೇವನೆ ಮತ್ತು ತರಕಾರಿಗಳಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಉತ್ತಮ ಆಹಾರ ಪದ್ಧತಿ ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Custard Apple: ಸೀತಾಫಲ ಹಣ್ಣು ಸೇವನೆಯಿಂದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 27, 2021 | 9:50 AM

ಸೀತಾಫಲ ಹಣ್ಣೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ರುಚಿಯಲ್ಲಿ ತುಂಬಾ ಸಿಹಿಯಾದ ಈ ಹಣ್ಣು ಅನೇಕ ಆಗೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಜತೆಗೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೆಲವು ಔಷಧಿ ತಯಾರಿಕೆಯಲ್ಲಿಯೂ ಸಹ ಈ ಹಣ್ಣನ್ನು ಬಳಸುತ್ತಾರೆ. ಹಾಗಿರುವಾಗ ಸೀತಾಫಲ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ.

ಸಿತಾಫಲವು ವಿಟಮಿನ್ ಸಿ ನಂತಹ ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿದೆ. ಇದು ನಿಮ್ಮ ದೇಹದಲ್ಲಿನ ಸ್ವತಂತ್ರ ರಾಡಿಕಲ್​ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಶಿಯಂ ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಜತೆಗೆ ಹೃದಯ ಸಂಬಂಧಿ ಖಾಯಿಲೆಗಳಿಂದ ರಕ್ಷಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಸೀತಾಫಲದ ಆರೋಗ್ಯ ಪ್ರಯೋಜನಗಳು ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಎ ಅಂಶವಿರುತ್ತದೆ. ಇದು ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯಕ್ಕೆ ಒಳ್ಳೆಯದು. ಕಣ್ಣಿನ ಆರೋಗ್ಯಕ್ಕೂ ಸಹ ಈ ಹಣ್ಣು ಹೆಚ್ಚು ಉಪಯುಕ್ತ. ಜತೆಗೆ ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

ಸೀತಾಫಲದಲ್ಲಿ ಮೆಗ್ನೀಶಿಯಮ್ ಇರುತ್ತದೆ. ಇದು ನಿಮ್ಮ ಅಸ್ವಸ್ಥತೆ, ದೌರ್ಬಲ್ಯದಿಂದ ಪರಿಹಾರ ಪಡೆಯಲು ಸಹಾಯಕವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ. ಸೀತಾಫಲದಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಬಿ6 ಇರುತ್ತದೆ. ಸೀತಾಫಲ ಹಣ್ಣನ್ನು ಸೇವಿಸುವಿದರಿಂದ ನಿಮ್ಮ ಮನಸ್ಥಿತಿ ಸುಧಾರಣೆಗೆ ಸಹಾಯಕ. ಖಿನ್ನತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಸೀತಾಫಲವು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಸೀತಾಫಲ ಹಣ್ಣಿನಲ್ಲಿರುವ ಪೋಷಕಾಂಶಗಳು ಕ್ಯಾಲೊರಿ- 120ಕೆ ಪ್ರೋಟೀನ್ 2.50 ಗ್ರಾಂ ಕಾರ್ಬೋಹೈಡ್ರೇಟ್- 28.34 ಗ್ರಾಂ ಕ್ಯಾಲ್ಸಿಯಂ- 16ಮಿಗ್ರಾಂ ಕಬ್ಬಿಣ- 0.43 ಮಿಗ್ರಾಂ ಮೆಗ್ನೀಶಿಯಂ- 27 ಮಿಗ್ರಾಂ ರಂಜಕ- 42 ಮಿಗ್ರಾಂ ಪೊಟ್ಯಾಷಿಯಂ- 459 ಮಿಗ್ರಾಂ ಸತು- 0.26 ಮಿಗ್ರಾಂ

ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ನಿಮ್ಮ ಸುತ್ತ ಮುತ್ತಲು ಬೆಳೆದಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಅವುಗಳನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಇದನ್ನೂ ಓದಿ:

Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು

Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ