AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Care: ನಿಮ್ಮ ಉಗುರು ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಗೊತ್ತೇ?

Health Care: ನಿಮ್ಮ ಉಗುರಿನ ಆರೈಕೆ ಜೊತೆಗೆ ಉಗುರು ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಿ.

Nail Care: ನಿಮ್ಮ ಉಗುರು ಸ್ವಚ್ಛವಾಗಿರುವುದು ಎಷ್ಟು ಮುಖ್ಯ ಗೊತ್ತೇ?
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 28, 2021 | 8:00 AM

ನೀವು ಆರೋಗ್ಯವಂತರಾಗಿರಬೇಕಾದರೆ ನಿಮ್ಮ ಉಗುರುಗಳ ಆರೋಗ್ಯ ತುಂಬಾ ಮುಖ್ಯ. ಅಂದರೆ ಉಗುರು ಅಂದವಾಗಿರುವುದರ ಜೊತೆಗೆ ಸ್ವಚ್ಛವಾಗರಬೇಕು. ಈಗಿನ ಜನರಿಗೆ ಉಗುರು ಉದ್ದವಾಗಿ ಬಿಡುವುದು ಸ್ಟೈಲ್ ಆಗಿಬಿಟ್ಟಿದೆ. ಹಾಗಿರುವಾಗ ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸ್ವಚ್ಛತೆಯಿಂದ ಉಗುರುಗಳನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಅವುಗಳಲ್ಲಿ ಸಿಲುಕಿಕೊಳ್ಳುವ ಕೆಸರು, ಮಣ್ಣು ನಿಮ್ಮ ದೇಹದ ಒಳಗೆ ಸೇರಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದು ನಿಮ್ಮ ಒಳ್ಳೆಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. 

ಸಾಮಾನ್ಯವಾಗಿ ನಿಮ್ಮ ದೇಹದ ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ಸಹ ಉಗುರಿನ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಆರೋಗ್ಯದಲ್ಲಿ ಉಂಟಾದ ಸಮಸ್ಯೆ ಲಕ್ಷಣಗಳು ಉಗುರಿನಲ್ಲಿ ಬಣ್ಣ ಬದಲಾವಣೆಯ ರೂಪದಲ್ಲಿ ತಿಳಿದು ಬರುತ್ತದೆ. ಹಾಗಿರುವಾಗ ಉಗುರಿನ ಆರೋಗ್ಯದ ಜೊತೆಗೆ ಉಗುರು ಹೆಚ್ಚು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಈ ಕೆಳಗಿನಂತಿರುವ ಸೂಚನೆಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಉಗುರುಗಳನ್ನು ಕಚ್ಚುವ ಅಭ್ಯಾಸದಿಂದ ದೂರವಿರಿ ಬೆರಳು ಕಚ್ಚುವ ಅಭ್ಯಾಸ ಒಳ್ಳೆಯದಲ್ಲ. ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಉಗುರು ಕಚ್ಚುವ ಅಭ್ಯಾಸದಿಂದ ಉಗುರಿನೊಳಗೆ ಸಿಲುಕಿಕೊಂಡಿದ್ದ ಕೆಸರು ಧೂಳು ಮಣ್ಣು ನೇರವಾಗಿ ನಿಮ್ಮ ದೇಹದ ಒಳಕ್ಕೆ ಸೇರುತ್ತವೆ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ.

ನಿಮ್ಮ ಉಗುರುಗಳ ತಪಾಸಣೆ ಮಾಡಿಸಿಕೊಳ್ಳಿ ಆರೋಗ್ಯದಲ್ಲಿ ಏನೇ ಏರು ಪೇರು ಉಂಟಾದರೂ ಉಗುರಿನ ಮೂಲಕ ತಿಳಿದು ಬರುತ್ತದೆ. ಉಗುರಿನಲ್ಲಿ ಬಣ್ಣ ಬದಲಾಗುವುದು ಇವುಗಳೆಲ್ಲಾ ಕೆಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಿರುವಾಗ ನಿಮ್ಮ ಉಗುರು ತಪಾಸಣೆಯಿಂದ ನಿಮ್ಮ ಆರೋಗ್ಯ ಲಕ್ಷಣ ಕಂಡು ಬರುತ್ತದೆ.

ಉಗುರುಗಳನ್ನು ಒಣಗಿಸಿ ಸ್ವಚ್ಛವಾಗಿಟ್ಟುಕೊಳ್ಳಿ ನಿಮ್ಮ ಉದ್ದವಾದ ಉಗುರಿನ ಒಳಗೆ ಬ್ಯಾಕ್ಟೀರಿಯಾ ಸೇರಿರುತ್ತದೆ. ಯಾವಾಗಲೂ ಒದ್ದೆಯಾದ ಉಗುರುಗಳನ್ನು ಹೊಂದಿರುವುದರಿಂದ ಉಗುರು ಹಾಳಾಗುವ ಸಾಧ್ಯತೆಗಳಿರುತ್ತದೆ. ನಿಮ್ಮ ಉಗುರಿನ ಆರೈಕೆಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕಾಗಿರುವುದು ಅತ್ಯವಶ್ಯಕ.

ಇದನ್ನೂ ಓದಿ:

Health Tips: ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳೆಷ್ಟಿವೆ ಗೊತ್ತಾ?

Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ