ಈ ಕೆಲವು ಆಹಾರ ಪದಾರ್ಥಗಳು ನಿಮ್ಮ ನಿದ್ರಾಹೀನತೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯಕ
ನಿದ್ರಾಹೀನತೆಗೆ ಕಾರಣವಾಗುತ್ತವೆ. ಉತ್ತಮ ನಿದ್ರೆಗಾಗಿ ನೀವು ಈ ಕೆಲವು ಆಹಾರಗಳನ್ನು ಸೇವಿಸಿ. ಇವು ನಿದ್ರಾ ಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕೆಲವು ಆಹಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯಕರ ಆಹಾರ ಸೇವನೆ ಎಷ್ಟು ಮುಖ್ಯವೋ ಅದೇ ರೀತಿ ರಾತ್ರಿ ನಿದ್ರೆಯೂ ಅಷ್ಟೇ ಮುಖ್ಯ. ಉತ್ತಮ ಪ್ರಮಾಣದ ನಿದ್ರೆಯು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಉತ್ತಮ ನಿದ್ರೆ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಹಾಗಿರುವಾಗ ನೀವು ಒಳ್ಳೆಯ ನಿದ್ರೆ ಮಾಡುವುದು ಆರೋಗ್ಯಕ್ಕೆ ಅವಶ್ಯಕ. ಅನಾರೋಗ್ಯಕರ ಆಹಾರ ಸೇವನೆಯು ನಿಮ್ಮ ದೇಹದ ಒತ್ತಡ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇವುಗಳು ನಿದ್ರಾಹೀನತೆಗೆ ಕಾರಣವಾಗುತ್ತವೆ. ಉತ್ತಮ ನಿದ್ರೆಗಾಗಿ ನೀವು ಈ ಕೆಲವು ಆಹಾರಗಳನ್ನು ಸೇವಿಸಿ. ಇವು ನಿದ್ರಾ ಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಕೆಲವು ಆಹಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
ನಿದ್ರಾಹೀನತೆಯನ್ನು ತಡೆಯಲು ಸಹಾಯ ಮಾಡುವ ಆಹಾರ ಪದಾರ್ಥಗಳು ಬಿಸಿ ಹಾಲು ಮಲಗುವ ಮುನ್ನು ಬೆಚ್ಚಗಿನ ಹಾಲನ್ನು ಕುಡಿಯುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಹಾಲು ಮೆಲೊಟೋನಿನ್ ಮತ್ತು ಸಿರೊಟೋನಿನ್ಅನ್ನು ಒಳಗೊಂಡಿರುವ ಟ್ರಿಪ್ಟೊಫಾನ್ಅನ್ನು ಹೊಂದಿರುತ್ತದೆ. ಇವು ಮೆದುಳನ್ನು ಶಾಂತಗೊಳಿಸುತ್ತದೆ. ಇವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇವೆಲ್ಲವೂ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತವೆ.
ಬಾಳೆಹಣ್ಣು ಬಾಳೆಹಣ್ಣುಗಳು ನೈಸರ್ಗಿಕ ಕಾರ್ಬೋಹೈಟ್ರೇಟ್ ಅಂಶವನ್ನು ಹೊಂದಿದ್ದು ಅದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಬಾಳೆ ಹಣ್ಣುಗಳು ಪ್ರೋಬಯಾಟಿಕ್ಗಳನ್ನು ಹೆಚ್ಚಿಸಲು ಸಹಾಯ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಪ್ರಿಬಯಾಟಿಕ್ಗಳನ್ನು ತಿನ್ನುವುದು ಶಾಂತಿಯಿಂದ ನಿದ್ರಿಸಲು ಮತ್ತು ಒತ್ತಡವನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಚೆರ್ರಿ ಚೆರ್ರಿಗಳು ಮೆಲಟೀನಿನ್ಅನ್ನು ಹೊಂದಿರುತ್ತದೆ. ಇದು ರಾತ್ರಿಯಲ್ಲಿ ಪೀನಲ್ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನ್. ಇದು ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಇದರೊಂದಿಗೆ ಬೆರ್ರಿಗಳು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
ಜೇನು ಉತ್ತಮ ನಿದ್ರೆಗಾಗಿ ರಾತ್ರಿಯಲ್ಲಿ ಆಹಾರದಲ್ಲಿ ಜೇನುತುಪ್ಪ ಸೇರಿಸಿ. ನೈಸರ್ಗಿಕ ಸಕ್ಕರೆಯಿರುವುದರಿಂದ ಜೇನುತುಪ್ಪ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಟ್ರಿಪ್ಟೋಫಾನ್ ಮತ್ತು ಸಿರೊಟೀನಿನ್ಅನ್ನು ಮೆದುಳಿಗೆ ರವಾನಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹ ವಿಶ್ರಾಂತಿ ಪಡೆಯಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್ಗಳ ಬಿಸ್ಕತ್ನಲ್ಲಿವೆ ಕ್ಯಾನ್ಸರ್ಕಾರಕ ಅಂಶ