Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು

100 ಗ್ರಾಂ ಬೇಯಿಸಿದ ಮೊಟ್ಟೆಗಳು 13 ಗ್ರಾಂ ಪ್ರೋಟೀನ್ ಅನ್ನು ನೀಡುತ್ತವೆ. ಆದರೆ, ಮೊಟ್ಟೆಯನ್ನು ತಿನ್ನದ ಸಸ್ಯಾಹಾರಿಗಳು ಹೇಗೆ ಪ್ರೋಟೀನ್‌ ಅನ್ನು ಪಡೆಯಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
ಕುಂಬಳಕಾಯಿ ಬೀಜ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 10, 2021 | 4:20 PM

ನವದೆಹಲಿ: ಕೋಳಿ ಮೊಟ್ಟೆಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರೋಟೀನ್‌ ವಿಷಯಕ್ಕೆ ಬಂದರೆ ಮೊಟ್ಟೆಗಳು ಮ್ಯಾಕ್ರೋನ್ಯೂಟ್ರಿಯಂಟ್‌ಗಳ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ. ತೂಕವನ್ನು ಮೇಂಟೇನ್ ಮಾಡುವವರು, ಮಸಲ್​ಗಳು ಬರಬೇಕು, ದೇಹ ಗಟ್ಟಿಮುಟ್ಟಾಗಬೇಕು ಎಂದು ಬಯಸುವವರು, ಆಹಾರ ತಜ್ಞರು ಮತ್ತು ಫಿಟ್‌ನೆಸ್ ತಜ್ಞರು ದೈನಂದಿನ ಪ್ರೋಟೀನ್‌ನ ಅಗತ್ಯವನ್ನು ಪೂರೈಸಲು ಸಾಕಷ್ಟು ಮೊಟ್ಟೆಗಳನ್ನು ತಿನ್ನಬೇಕೆಂದು ಶಿಫಾರಸು ಮಾಡುತ್ತಾರೆ.

100 ಗ್ರಾಂ ಬೇಯಿಸಿದ ಮೊಟ್ಟೆಗಳು 13 ಗ್ರಾಂ ಪ್ರೋಟೀನ್ ಅನ್ನು ನೀಡುತ್ತವೆ. ಇಷ್ಟು ಪ್ರಮಾಣದ ಪ್ರೋಟೀನ್ ಬೇರೆ ಆಹಾರ ಪದಾರ್ಥಗಳಲ್ಲಿ ಸಿಗುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಮೊಟ್ಟೆ ಪ್ರೋಟೀನ್​ಯುಕ್ತವಾದುದೇನೋ ಹೌದು. ಆದರೆ, ಮೊಟ್ಟೆಯನ್ನು ತಿನ್ನದ ಸಸ್ಯಾಹಾರಿಗಳು ಹೇಗೆ ಪ್ರೋಟೀನ್‌ ಅನ್ನು ಪಡೆಯಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ. ಮೊಟ್ಟೆ ಮಾತ್ರವಲ್ಲದೆ ಕೆಲವು ಮೊಟ್ಟೆಗಳಿಗಿಂತ ಹೆಚ್ಚು ಪ್ರೋಟೀನ್‌ಗಳನ್ನು ನೀಡುವ ಕೆಲವು ಸಸ್ಯಾಹಾರಿ ಆಹಾರಗಳಿವೆ.

ಮೊಟ್ಟೆಗಳಿಗಿಂತ ಉತ್ಕೃಷ್ಟವಾಗಿರುವ ಪ್ರೋಟೀನ್‌ಗಳ ಈ ಸೂಪರ್ ಆರೋಗ್ಯಕರ ಸಸ್ಯಾಹಾರಿ ಮೂಲಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳು ಮೊಟ್ಟೆಗಳಿಗೆ ಹೋಲಿಸಿದರೆ ಪ್ರೋಟೀನ್‌ಗಳ ಉತ್ಕೃಷ್ಟ ಮೂಲವಾಗಿದೆ. 100 ಗ್ರಾಂ ಕುಂಬಳಕಾಯಿ ಬೀಜಗಳು ಫೈಬರ್, ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಕೆ, ರಂಜಕ ಮತ್ತು ಸತುವುಗಳೊಂದಿಗೆ 19 ಗ್ರಾಂ ಪ್ರೋಟೀನ್‌ಗಳನ್ನು ನೀಡುತ್ತವೆ.

ಕಡಲೆ: ಕಡಲೆ ಭಾರತದಲ್ಲಿನ ಜನಪ್ರಿಯ ಆಹಾರ ಪದಾರ್ಥವಾಗಿದೆ. ಕಡಲೆಯ ಉಸಲಿ, ಗ್ರೇವಿ, ಬೇಯಿಸಿ ಉಪ್ಪು ಹಾಕಿದ ಕಡಲೆ ಹೀಗೆ ನಾನಾ ರೀತಿಯ ಕಡಲೆಗಳಿವೆ. ಕಡಲೆಯನ್ನು ಉತ್ತರ ಭಾರತದ ಕಡೆ ಸಾಮಾನ್ಯವಾಗಿ ಬೀದಿ ಆಹಾರವಾಗಿ ಇಷ್ಟಪಡುತ್ತಾರೆ. ಕುಲ್ಚೆ, ಭಟೂರ್, ಪುರಿ, ಟಿಕ್ಕಿ, ಚಾಟ್, ಪರಂಥಸ್ ಅಥವಾ ಅನ್ನದೊಂದಿಗೆ ಕಡಲೆಯ ಪದಾರ್ಥಗಳನ್ನು ಸೇವಿಸಬಹುದು. 100 ಗ್ರಾಂ ಕಡಲೆಯು 19 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ.

ಕಾಟೇಜ್ ಚೀಸ್: ಕಾಟೇಜ್ ಚೀಸ್ ಅಥವಾ ಪನೀರ್ ಸಸ್ಯಾಹಾರಿಗಳಿಗೆ ಅತ್ಯಂತ ಜನಪ್ರಿಯವಾದ ತಿಂಡಿಗಳಲ್ಲಿ ಒಂದಾಗಿದೆ. ರುಚಿಕರವಾದ ಡೈರಿ ಉತ್ಪನ್ನವಲ್ಲದೆ, ಪನೀರ್ ಪ್ರೋಟೀನ್‌ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. 100 ಗ್ರಾಂ ಪನೀರ್ 23 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.

ಗ್ರೀಕ್ ಮೊಸರು: ಸಾಮಾನ್ಯ ಮೊಸರುಗಿಂತ ಗ್ರೀಕ್ ಮೊಸರು ಪ್ರೋಟೀನ್‌ಗಳಲ್ಲಿ ಉತ್ಕೃಷ್ಟವಾಗಿದೆ. ಅದೇ ರೀತಿಯ ಸಿಹಿಗೊಳಿಸದ ವಿಧವು ಒಂದು ಸೇವೆಯಲ್ಲಿ 23 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಕೆಲವು ಬೆರ್ರಿ ಹಣ್ಣುಗಳು, ಬಾದಾಮಿ ಮತ್ತು ಬಾಳೆಹಣ್ಣುಗಳೊಂದಿಗೆ ಇದನ್ನು ಸೇರಿಸಿ ಇದನ್ನು ಸೇವಿಸಬಹುದು.

ಸೋಯಾಬೀನ್: ಸೋಯಾಬೀನ್​ ಪ್ರೋಟೀನ್​ಗಳ ಮತ್ತೊಂದು ಅಚ್ಚರಿಯ ಸಸ್ಯ-ಆಧಾರಿತ ಮೂಲವಾಗಿದ್ದು, ಕೇವಲ ಒಂದು ಕಪ್ ಸೋಯಾಬೀನ್​ನಲ್ಲಿ 29 ಗ್ರಾಂಗಳಷ್ಟು ಮ್ಯಾಕ್ರೋನ್ಯೂಟ್ರಿಯೆಂಟ್ ಇದೆ. ತೋಫು ಮತ್ತು ಸೋಯಾಮಿಲ್ಕ್‌ನಂತಹ ಸೋಯಾಬೀನ್ ಉತ್ಪನ್ನಗಳನ್ನು ಸಸ್ಯಾಹಾರಿಗಳು ಸೇವಿಸಬಹುದು.

ಇದನ್ನೂ ಓದಿ: Health Tips: ಮಕ್ಕಳಿಗೆ ಬಾಲ್ಯದಲ್ಲೇ ಮೊಟ್ಟೆ ತಿನ್ನಿಸುವುದರಿಂದ ಮೊಟ್ಟೆಯ ಅಲರ್ಜಿ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಬಯಲು

Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ

Published On - 4:19 pm, Fri, 10 December 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ