Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ

ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ.

Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ
ತ್ವಚೆಯನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ಸ್ನಾನದ ಮೂಲಕ ನಿಮ್ಮ ತ್ವಚೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು ಎಂಬುವುದು ನಿಮಗೆ ತಿಳಿದಿದೆಯೇ? ಇದಕ್ಕಾಗಿ ನೀವು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಬೇಕು.
Follow us
TV9 Web
| Updated By: Pavitra Bhat Jigalemane

Updated on: Dec 08, 2021 | 10:03 AM

ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಿಸಬೇಕು ಎನ್ನುವ ಹಂಬಲವಿರುತ್ತದೆ. ಸೌಂದರ್ಯವೆನ್ನುವುದು ಕೇವಲ ಮುಖದ ಅಂದ ಮಾತ್ರವಲ್ಲ. ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ವಾತಾವರಣ ತಂಪಾದಂತೆ ಕೂದಲು ಶುಷ್ಕಗೊಂಡು, ಡ್ರೈ ಎನಿಸಲು ಆರಂಭವಾಗುತ್ತದೆ. ಹೀಗಾಗಿ ಕೇಶ ಸೌಂದರ್ಯ ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ಚಳಿಗಾಲದಲ್ಲಿ ಕೊಂಚ ಶ್ರಮವಹಿಸುವುದು ಅಗತ್ಯ.

ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಶನರ್​ಗಳು ನಮ್ಮ ಕೂದಲಿಗೆ ಹಾನಿಯ ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ನೈಸರ್ಗಿಕವಾಗಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೂದಲು ಉದುರುವುದನ್ನು ತಡೆಯಹುದುಸಾಮಾನ್ಯವಾಗಿ ನಾವು ವಿವಿಧ ರೀತಿಯ ಹೇರ್​ಸ್ಟೈಲ್​ ಮಾಡಿಕೊಳ್ಳಲು ಹೇರ್ ಡ್ರೈಯರ್​ನಂತಹ ಉಪಕರಣಗಳನ್ನು ಬಳಸುತ್ತೇವೆ. ಇದರಿಂದ ಕೂದಲಿಗೆ ಅನಗತ್ಯ ಅಥವಾ ಅತಿಯಾದ ಬಿಸಿತಾಗಿ ಕೂದಲು ಡ್ರೈಆಗುತ್ತದೆ. ಇದು ಕೂದಲು ಉದುರಲು ಒಂದು ಮುಖ್ಯ ಕಾರಣ. ನಮ್ಮ ಆಹಾರ ಶೈಲಿಯೂ ಕೂಡ ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರೋಟೀನ್​ಭರಿತ ಆಹಾರ ಸೇವನೆ ಅವಶ್ಯಕ.​

ಕೂದಲ ಆರೈಕೆಯಲ್ಲಿ ಇವುಗಳನ್ನು ತಪ್ಪದೇ ಮಾಡಿ ಎಣ್ಣೆಯ ಮಸಾಜ್ ಮತ್ತು ಹೇರ್​ ಪ್ಯಾಕ್​​ ಪ್ರತಿ ಬಾರಿ ತೆಲೆಗೆ ಸ್ನಾನ ಮಾಡುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ. ಇದು ಕೂದಲಿನ ಸಾಪ್ಟನೆಸ್​ ಹೆಚ್ಚಿಸುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಸೆಟ್​ ಆಗುವ ಹೇರ್​ಪ್ಯಾಕ್​​ ಹಾಕಿಕೊಳ್ಳಿ. ಹೇರ್ ಪ್ಯಾಕ್​ನಲ್ಲಿ ಆದಷ್ಟು ಮೊಸರು ಇರುವಂತೆ ನೋಡಿಕೊಳ್ಳಿ. ಏಕೆಂದರೆ ಮೊಸರು ನಿಮ್ಮ ಕೂದಲು ಡ್ರೈ ಆಗುವುದನ್ನು ತಡೆಯುತ್ತದೆ. ಅಲ್ಲದೆ ಮೊಸರನ್ನು ಕೂದಲಿಗೆ ಹಾಕುವುದರಿಂದ ಹೊಟ್ಟಿನ (ಡ್ಯಾಂಡ್ರಪ್) ಸಮಸ್ಯೆ ನಿವಾರಣೆಯಾಗಲಿದೆ.

ಸ್ನಾನಕ್ಕೆ ಬಿಸಿ ನೀರು ಬೇಡ ನೆನಪಿಡಿ ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಬೇಡಿ. ಕೂದಲಿನ ಸೂಕ್ಷ್ಮತೆಗೆ ಬಿಸಿ ನೀರು ಹಾನಿಯುಂಟು ಮಾಡುತ್ತದೆ. ಹೀಗಾಗಿ ಉಗುರು ಬೆಚ್ಚಗಿನ ಅಥಾವ ತಣ್ಣನೆಯ ನೀರಿನಿಂದ ಸ್ನಾನಮಾಡಿ. ಸ್ನಾನದ ಬಳಿಕ ಕೂದಲನ್ನು ತಕ್ಷಣ ಬಾಚಿಕೊಳ್ಳಬೇಡಿ. ಬದಲಾಗಿ ಒದ್ದೆ ಕೂದಲನ್ನು ಗಾಳಿಯಲ್ಲಿ ಒಣಗಿಸಿ ಅಥವಾ ಹತ್ತಿಯ ಟವೆಲ್​ನಿಂದ ನೀರು ಆರುವವರೆಗೆ ಕಟ್ಟಿಕೊಳ್ಳಿ. ಅನಿವಾರ್ಯವಿದ್ದರೆ ಹೇರ್ ಡ್ರೈಯರ್​ ಬಳಸಿ ಆದರೆ, ಹೇರ್​ ಡ್ರೈಯರ್​ನಲ್ಲಿ ಹೀಟ್​ ಆಗುವ ಪ್ರಮಾಣವನ್ನು ಸೆಟ್​ ಮಾಡಿಕೊಳ್ಳಲು ಮರೆಯದಿರಿ.

ಅಗಲ ಹಲ್ಲಿನ ಬಾಚಣಿಗೆ ಬಳಸಿ ಕೂದಲು ಬಾಚುವಾಗ ಆದಷ್ಟು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ. ಇದು ನಿಮ್ಮ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಅಲ್ಲದೆ ಸಿಕ್ಕಾಗಿರುವ ಕೂದಲನ್ನು ನಿಧಾನವಾಗಿ ಬಿಡಿಸಬಹುದು. ಇದರಿಂದ ಕೂದಲು ಅರ್ಧದಲ್ಲೇ ತುಂಡಾಗಿ ಬಿಳುವುದು ತಪ್ಪುತ್ತದೆ.

ಲೋಳೆಸರ (ಆಲೋವೇರಾ) ಬಳಕೆಯಿರಲಿ. ಚಳಿಗಾಲದಲ್ಲಿ ನಾವು ದೇಹವನ್ನು ಬೆಚ್ಚಗಿರಿಸಿಲು ಸೇವಿಸಿದ ಆಹಾರ ನಮ್ಮ ಕೂದಲಿಗೆ ಹೊಂದಿಕೆಯಾಗದಿರಬಹುದು. ಹೀಗಾಗಿ ತಲೆಯ ಆರೋಗ್ಯಕ್ಕೆ ಆದಷ್ಟು ಆಲೋವೆರಾ ಬಳಸಿ. ಇದು ನಿಮ್ಮ ನೆತ್ತಿಯನ್ನು ತಂಪಾಗಿರುಸುತ್ತದೆ. ಪ್ರೆಶ್​ ಆಲೋವೆರಾ ಎಲೆಯನ್ನು ಕತ್ತರಿಸಿ ಕೂದಲು ಮತ್ತು ನೆತ್ತಿಯ ಮಧ್ಯ ಉಜ್ಜಿಕೊಂಡು 30 ನಿಮಿಷ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಆಲೋವೆರಾ ಕೂದಲ ಸಮೃದ್ಧ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಕೂದಲು ಮೃದುವಾಗಿರುವಂತೆ ಮಾಡುತ್ತದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ