AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ; ಕಣ್ಣೀರನ್ನು ತಡೆಹಿಡಿಯುವುದರಿಂದ ಕಾಯಿಲೆಗೆ ತುತ್ತಾಗುವಿರಿ ಎಚ್ಚರ

Crying Benefits: ಕಣ್ಣೀರು ಹಿಡಿದಿಟ್ಟುಕೊಳ್ಳುವುದು ನಮ್ಮ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಕಣ್ಣೀರು ಕಣ್ಣುಗಳನ್ನು ಶುಷ್ಕತೆಯಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಸಲು ಸಹಾಯ ಮಾಡುತ್ತದೆ.

ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ; ಕಣ್ಣೀರನ್ನು ತಡೆಹಿಡಿಯುವುದರಿಂದ ಕಾಯಿಲೆಗೆ ತುತ್ತಾಗುವಿರಿ ಎಚ್ಚರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 08, 2021 | 7:05 AM

Share

ಒಬ್ಬ ವ್ಯಕ್ತಿಯು ಯಾವುದೇ ರೀತಿಯ ಗಾಯವನ್ನು ಅನುಭವಿಸಿದಾಗ ಅಥವಾ ನೋವು ಉಂಟಾದಾಗ ಆತನ ಕಣ್ಣುಗಳಲ್ಲಿ ನೀರು ಬರುವುದು ಸಾಮಾನ್ಯವಾಗಿದೆ. ಜನರು ಸಾಮಾನ್ಯವಾಗಿ ಅಳುವುದನ್ನು ದೌರ್ಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿಯೇ ಅನೇಕ ಬಾರಿ ಕಣ್ಣೀರನ್ನು (Tears) ಒಳಗೆ ಹಿಡಿದಿಟ್ಟುಕೊಳ್ಳುತ್ತೇವೆ ಮತ್ತು ಅಳುವುದನ್ನು ತಪ್ಪಿಸುತ್ತೇವೆ. ಆದರೆ ಕಣ್ಣೀರು ಹಿಡಿದಿಟ್ಟುಕೊಳ್ಳುವುದು ನಮ್ಮ ಆರೋಗ್ಯಕ್ಕೆ ತೊಂದರೆಯುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಕಣ್ಣೀರು ಕಣ್ಣುಗಳನ್ನು ಶುಷ್ಕತೆಯಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಸ್ವಚ್ಛಗೊಳಿಸಲು ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಸಲು ಸಹಾಯ ಮಾಡುತ್ತದೆ.

ಕಣ್ಣೀರು 98 ಪ್ರತಿಶತದಷ್ಟು ನೀರು ಹೊಂದಿರುತ್ತದೆ ಆ ಮೂಲಕ ಕಣ್ಣುಗಳನ್ನು ಸ್ವಚ್ಛಗೊಳಿಸಿ ಸೋಂಕನ್ನು ತಡೆಯುತ್ತದೆ. ಕಣ್ಣೀರು ಎಂದರೇನು ಮತ್ತು ಕಣ್ಣೀರು ಏಕೆ ಹರಿಯುತ್ತದೆ ಎಂಬುದನ್ನು ನಾವು ತಿಳಿಯುವುದು ಸೂಕ್ತ. ಆಯುರ್ವೇದದಲ್ಲಿ ಅಳುವ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಆಯುರ್ವೇದದ ಪ್ರಕಾರ, ನೀವು ಅಳುವುದರ ಮೂಲಕ ಕಣ್ಣೀರು ಹರಿಯುವಂತೆ ಮಾಡಬೇಕು. ಇದನ್ನು ನಿಲ್ಲಿಸಬಾರದು ಏಕೆಂದರೆ ಹೀಗೆ ಮಾಡುವುದರಿಂದ ಅದರ ಅಡ್ಡ ಪರಿಣಾಮಗಳು ದೇಹದ ಮೇಲೆ ಕಂಡುಬರುತ್ತವೆ.

ಕಣ್ಣೀರಿನಲ್ಲಿ ಎಷ್ಟು ವಿಧಗಳಿವೆ ? ಮೊದಲೆಯದಾಗಿ ಯಾವುದೇ ಕಸ ಅಥವಾ ಹೊಗೆ ಇದ್ದಾಗ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ. ಇದು ಸಾಮಾನ್ಯ ಕೂಡ. ಎರಡನೆಯದು ಬೇಸಲ್ ಟಿಯರ್ ಎಂದು ಕರೆಯುತ್ತೇವೆ. ಇದು 98 ಪ್ರತಿಶತದಷ್ಟು ನೀರು ಹೊಂದಿದ್ದು, ಇದು ಕಣ್ಣುಗಳನ್ನು ನಯಗೊಳಿಸುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಮೂರನೆಯದು ತೊಂದರೆಗಳು ಎದುರಾದಾಗ ನಮ್ಮ ಕಣ್ಣುಗಳಿಂದ ಹೊರಬರುವ ಭಾವನಾತ್ಮಕ ಕಣ್ಣೀರಾಗಿರುತ್ತದೆ.

ಕಣ್ಣೀರನ್ನು ನಿಲ್ಲಿಸುವುದು ಆರೋಗ್ಯಕ್ಕೆ ಏಕೆ ಹಾನಿಕಾರಕ? ಆಯುರ್ವೇದದ ಪ್ರಕಾರ, ಕಣ್ಣಿನಿಂದ ಬರುವ ಕಣ್ಣೀರನ್ನು ಎಂದಿಗೂ ತಡೆಯಬಾರದು ಏಕೆಂದರೆ ಅಳುವ ಪ್ರವೃತ್ತಿಯು ತಲೆನೋವು, ಮೂಗುಕಟ್ಟುವಿಕೆ, ಕಣ್ಣಿನ ಕಾಯಿಲೆ ಮತ್ತು ಹೃದಯ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಳು ನಿಯಂತ್ರಿಸಬೇಡಿ. ಕಣ್ಣೀರು ಹರಿಯಲು ಬಿಡಿ. ಇದು ಹೃದ್ರೋಗ, ಖಿನ್ನತೆ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲ, ಅಳುವುದರಿಂದ ದೇಹದಲ್ಲಿ ಆಕ್ಸಿಟೋಸಿನ್, ಎಂಡಾರ್ಫಿನ್ ನಂತಹ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ನಾವು ಒತ್ತಡದಿಂದ ಕಣ್ಣೀರು ಹಾಕುವಾಗ ದೇಹದಲ್ಲಿನ ವಿಷವು ಕಣ್ಣೀರಿನ ಸಹಾಯದಿಂದ ನಿಧಾನವಾಗಿ ಹೊರಬರಲು ಪ್ರಾರಂಭಿಸುತ್ತದೆ. ಈ ಕಣ್ಣೀರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ ಅಳು ಬಂದಾಗ ಮುಕ್ತವಾಗಿ ಅತ್ತು ಬಿಡಿ.

ಇದನ್ನೂ ಓದಿ: ಅಳು ಮತ್ತು ನಗು ಎರಡೂ ಭಾವನೆಗಳೇ, ಅಳುವುದು ತಪ್ಪಲ್ಲ ಮತ್ತು ಬಲಹೀನತೆಯೂ ಅಲ್ಲ: ಡಾ ಸೌಜನ್ಯ ವಶಿಷ್ಠ

ಚಳಿಗಾಲದಲ್ಲಿ ಈ ತರಕಾರಿಗಳ ಸೇವನೆ ಬಹಳ ಮುಖ್ಯ; ಆರೋಗ್ಯದಲ್ಲಿನ ಬದಲಾವಣೆ ಬಗ್ಗೆ ತಿಳಿಯಿರಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ