AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪು ಬಾಳೆಹಣ್ಣಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಕೆಲ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.

ಕೆಂಪು ಬಾಳೆಹಣ್ಣಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಕೆಂಪು ಬಾಳೆಹಣ್ಣು
Follow us
TV9 Web
| Updated By: sandhya thejappa

Updated on:Dec 15, 2021 | 5:10 PM

ಬಾಳೆಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ಸೇವಿಸುವ ಹಣ್ಣೆಂದರೆ ಅದು ಬಾಳೆಹಣ್ಣು. ಆರೋಗ್ಯವನ್ನು ಕಾಪಾಡುವ ಬಾಳೆಹಣ್ಣು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ ತೃಪ್ತಿಯಾಗುತ್ತೆ. ದೇಹ ಹಗರುವಾಗುವ ಜೊತೆಗೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಹಣ್ಣು ಖನಿಜಾಂಶ, ವಿಟಮಿನ್, ಫೈಬರ್ ಅಂಶಗಳನ್ನು ಹೊಂದಿದೆ. ವಿಶ್ವದಾದ್ಯಂತ 15 ರಿಂದ 16 ತರಹದ ಬಾಳೆಹಣ್ಣುಗಳು ಇವೆ. ಈ ಪೈಕಿ ಕೆಂಪು ಬಾಳೆಹಣ್ಣು ಕೂಡಾ ಒಂದು.

ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಕೆಲ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.

ದೇಹದ ತೂಕ ಇಳಿಸಬಹುದು ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು.

ರೋಗ ನಿರೋಧಕ ಶಕ್ತಿ ವೃದ್ಧಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಂಪು ಬಾಳೆಹಣ್ಣು ಸೇವಿಸುವುದು ಅನಿವಾರ್ಯ. ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಈ ವಿಧಾನಕ್ಕೆ ಕೆಂಪು ಬಾಳೆಹಣ್ಣು ಸೇವಿಸುವುದನ್ನು ಸೇರಿಸಿ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮುಖದ ಕಾಂತಿ ಹೆಚ್ಚಳ ಕೆಂಪು ಬಾಳೆಹಣ್ಣಿನಿಂದ ಮುಖದ ಕಾಂತಿಯನ್ನೂ ಹೆಚ್ಚಿಸಬಹುದು. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಮೂರ್ನಾಲ್ಕು ಜೇನುತುಪ್ಪ ಹನಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.

ಕೂದಲು ಉದುರುವಿಕೆ ತಡೆಗಟ್ಟಬಹುದು ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.

ಇದನ್ನೂ ಓದಿ

Health Tips: ನಿಮಗೆ ಡಯಾಬಿಟಿಸ್​ ಇದೆಯಾ?; ಮಧುಮೇಹಿಗಳಿಗೆ ವ್ಯಾಯಾಮದಿಂದ ಇದೆ ಭಾರೀ ಉಪಯೋಗ

Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ

Published On - 5:09 pm, Wed, 15 December 21