Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ

ಚಳಿಗಾಲದಲ್ಲಿನ ತಂಪಾದ ಗಾಳಿ ಕೆಮ್ಮು, ಶೀತ ಮತ್ತು ಜ್ವರ ಸೇರಿದಂತೆ ಹಲವಾರು ಕಾಲೋಚಿತ ರೋಗಗಳನ್ನು ಸಹ ತರುತ್ತದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ.

Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 14, 2021 | 10:59 AM

ಸಾಮಾನ್ಯವಾಗಿ ಚಳಿಗಾಲದಲ್ಲಿ ಸೋಂಕಿಗೆ ಗುರಿಯಾಗುವುದು ಅಥವಾ ಶೀತ, ಜ್ವರಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚು. ಹೀಗಾಗಿಯೇ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಚಳಿಗಾಲದಲ್ಲಿನ (Winter) ತಂಪಾದ ಗಾಳಿ ಕೆಮ್ಮು, ಶೀತ ಮತ್ತು ಜ್ವರ ಸೇರಿದಂತೆ ಹಲವಾರು ಕಾಲೋಚಿತ ರೋಗಗಳನ್ನು ಸಹ ತರುತ್ತದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಪೌಷ್ಟಿಕ ಮತ್ತು ಸಮತೋಲಿತ ಆಹಾರ (Food) ಆರೋಗ್ಯಕರ ಜೀವನಶೈಲಿಯ ಪ್ರಕ್ರಿಯೆಯನ್ನು ಅನುಸರಿಸುವುದು ಮುಖ್ಯ. ಎಲ್.ಎ. ಕೇರ್ ಹೆಲ್ತ್ ಪ್ಲಾನ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಿಚರ್ಡ್ ಸೀಡ್‌ಮನ್ ಪ್ರಕಾರ, ಪೌಷ್ಟಿಕಾಂಶವು ನಮ್ಮ ಒಟ್ಟಾರೆ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಈ ಕುರಿತು ಅನೇಕ ಪುರಾವೆಗಳು ಕೂಡ ನಮ್ಮ ನಡುವೆ ಇದೆ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಈ 5 ಆಹಾರದ ಮೊರೆ ಹೋಗಿ

ಕಿತ್ತಳೆ ಚಳಿಗಾದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ. ಅದರಲ್ಲೂ ಕಿತ್ತಳೆ ಬಹಳಷ್ಟು ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ದೇಹದ ಒಳಗಿನಿಂದ ನಮ್ಮನ್ನು ಪೋಷಿಸಲು ಸಹಾಯ ಮಾಡುತ್ತದೆ.

ಮಸಾಲಾ ಟೀ ಚಳಿಗಾಲ ಮತ್ತು ಕಡಕ್ ಟೀ ಎರಡು ಕೂಡ ಒಳ್ಳೆ ಕಾಂಬಿನೆಷನ್ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಲವಂಗ, ದಾಲ್ಚಿನ್ನಿ ಮತ್ತು ಇನ್ನಿತರ ಮಸಾಲೆಗಳೊಂದಿಗೆ ತಯಾರಿಸಿದ ಟೀ ನಿಮಗೆ ಹೆಚ್ಚು ಆರಮ ನೀಡುತ್ತದೆ. ಇದು ದೈನಂದಿನ ಆಹಾರದಲ್ಲಿ ಹಲವಾರು ಅಗತ್ಯ ಪೋಷಕಾಂಶಗಳನ್ನು ಕೂಡ ನೀಡುತ್ತದೆ. ಪ್ರತಿರಕ್ಷಣಾ ಆರೋಗ್ಯವನ್ನು ಉತ್ತೇಜಿಸಲು ಮತ್ತು ಶೀತ ಮತ್ತು ಜ್ವರವನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ನಮ್ಮ ಊಟಕ್ಕೆ ಉತ್ತಮ ರುಚಿ ಮತ್ತು ಪರಿಮಳವನ್ನು ಸೇರಿಸುವುದರ ಜೊತೆಗೆ, ಬೆಳ್ಳುಳ್ಳಿ ಆರೋಗ್ಯಕ್ಕೂ ಒಳ್ಳೆಯದು. ಇದು ಪೋಷಕಾಂಶದ ಸಮೃದ್ಧ ಘಟಕವಾಗಿದೆ. ಬೆಳ್ಳುಳ್ಳಿ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ಸೋಂಕು ಮತ್ತು ಹಲವಾರು ಕಾಲೋಚಿತ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಅರಿಶಿಣ ಅರಿಶಿಣವು ಕರ್ಕ್ಯುಮಿನ್‌ನಿಂದ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕಗಳು, ನಂಜುನಿರೋಧಕ, ಆಂಟಿವೈರಲ್ ಮತ್ತು ಉರಿಯೂತದ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನು ಸಹ ಒಳಗೊಂಡಿದೆ. ಇದು ಒಳಗಿನಿಂದ ನಮ್ಮನ್ನು ಪೋಷಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯಕ್ಕೆ ಕೂಡ ಅರಿಶಿಣ ಉತ್ತಮ. ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಜೇನುತುಪ್ಪ ತೀವ್ರವಾದ ಕೆಮ್ಮು ಮತ್ತು ಶೀತವಿದ್ದಲ್ಲಿ ಜೇನುತುಪ್ಪ ಬಳಸಬಹುದು. ಇದು ತ್ವರಿತ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಶುಂಠಿಯೊಂದಿಗೆ ಸ್ವಲ್ಪ ಜೇನುತುಪ್ಪು ಬೆರೆಸಿ ಸೇವಿಸುವುದು ಕೂಡ ಉತ್ತಮ ಪರಿಹಾರ ನೀಡುತ್ತದೆ.

ಇದನ್ನೂ ಓದಿ: Immunity Booster: ವಿಟಮಿನ್ ಹೊಂದಿರುವ ಪದಾರ್ಥಗಳು ಯಾವುವು? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಏನೆಲ್ಲಾ ಸೇವಿಸಬೇಕು ಎನ್ನುವುದನ್ನು ತಿಳಿಯಿರಿ

Carrot Benefits: ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಎಷ್ಟು ಮುಖ್ಯ? ಸಮಸ್ಯೆ ಬಂದ ಮೇಲೆ ಚಿಂತಿಸುವ ಮೊದಲೇ ಎಚ್ಚರ ವಹಿಸಿ