Communal Altercations: ಶಿವಮೊಗ್ಗ ನಗರದದಲ್ಲಿ ಪುನಃ ಭುಗಿಲೆದ್ದ ಮತೀಯ ಕಲಹಗಳು, ಸೂಕ್ಷ್ಮ ಏರಿಯಾಗಳಲ್ಲಿ ಪೊಲೀಸ್ ಕಾವಲು

Communal Altercations: ಶಿವಮೊಗ್ಗ ನಗರದದಲ್ಲಿ ಪುನಃ ಭುಗಿಲೆದ್ದ ಮತೀಯ ಕಲಹಗಳು, ಸೂಕ್ಷ್ಮ ಏರಿಯಾಗಳಲ್ಲಿ ಪೊಲೀಸ್ ಕಾವಲು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2023 | 12:30 PM

ಅನ್ಯ ಕೋಮಿನ ಎರಡು ಗುಂಪಗಳ ನಡುವೆ ಘರ್ಷಣೆಗಳು ನಡೆದ ಬಳಿಕ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗ: ಕೆಲ ತಿಂಗಳುಗಳಿಂದ ಶಾಂತವಾಗಿದ್ದ ಶಿವಮೊಗ್ಗ (Shivamogga) ಮತ್ತೊಮ್ಮೊ ಕೋಮು ದಳ್ಳುರಿಯಲ್ಲಿ (communal intolerance) ಬೇಯುತ್ತಿದೆ. ಎರಡು ಕೋಮಿನ ಗುಂಪುಗಳು ನಡುವೆ ಕಲಹ ನಡೆದ ಎರಡು ಪ್ರಕರಣಗಳುa ನಗರದಲ್ಲಿ ವರದಿಯಾಗಿವೆ. ಶಿವಮೊಗ್ಗ ಮೊದಲಿನಿಂದಲೂ ಕೋಮು ಗಲಭೆಗಳಿಗೆ ಅಪಖ್ಯಾತಿ (infamous) ಹೊಂದಿರುವ ಪ್ರದೇಶವಾಗಿದೆ. ಕಳೆದ ವರ್ಷ ಬಜರಂಗ ದಳ (Bajrang Dal) ಕಾರ್ಯಕರ್ತ ಹರ್ಷನ ಕೊಲೆಯ ನಗರದ ಹೆಚ್ಚು ಕಡಿಮೆ ಶಾಂತವಾಗಿತ್ತು. ಆದರೆ, ಕಳೆದೆರಡು ದಿನಗಳಿಂದ ನಗರದ ಶಾಂತಿ ಕದಡಿದೆ. ಅನ್ಯ ಕೋಮಿನ ಎರಡು ಗುಂಪಗಳ ನಡುವೆ ಘರ್ಷಣೆಗಳು ನಡೆದ ಬಳಿಕ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದ ಟಿಪ್ಪು ನಗರ ಮತ್ತು ದ್ರೌಪದಂ ವೃತ್ತದಲ್ಲಿ ಪೊಲೀಸರ ಬಿಗಿ ಕಾವಲನ್ನು ಗಮನಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.