Dharwad News: ನೊರೆ ಸಮಸ್ಯೆ ಸ್ಥಳಕ್ಕೆ ಭೇಟಿ, ಜನ ತರಾಟೆ ತೆಗೆದುಕೊಂಡಿದ್ದಕ್ಕೆ ಕಣ್ಣೀರಿಟ್ಟ ಗ್ರಾ.ಪಂ ಸದಸ್ಯೆ

Dharwad News: ನೊರೆ ಸಮಸ್ಯೆ ಸ್ಥಳಕ್ಕೆ ಭೇಟಿ, ಜನ ತರಾಟೆ ತೆಗೆದುಕೊಂಡಿದ್ದಕ್ಕೆ ಕಣ್ಣೀರಿಟ್ಟ ಗ್ರಾ.ಪಂ ಸದಸ್ಯೆ

ಆಯೇಷಾ ಬಾನು
|

Updated on:Jun 26, 2023 | 12:41 PM

ನೊರೆ ಭೀತಿ ಹಿನ್ನೆಲೆ ಸ್ಥಳಕ್ಕೆ ಬಂದ ಗ್ರಾ.ಪಂ ಸದಸ್ಯೆಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು ಸದಸ್ಯೆ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಧಾರವಾಡ: ಜಿಲ್ಲೆಯಲ್ಲಿ ನೊರೆ ಭೀತಿ ಹಿನ್ನೆಲೆ ಸ್ಥಳಕ್ಕೆ ಬಂದ ಗ್ರಾ.ಪಂ ಸದಸ್ಯೆಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು ಸದಸ್ಯೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಧಾರವಾಡದ ಸಾಧುನವರ್ ಎಸ್ಟೇಟ್​ನಲ್ಲಿ ಕೊಳಚೆ ನೀರಿನ ಹಳ್ಳದಿಂದ ಕೆಮಿಕಲ್ ಮಿಶ್ರಿತ ನೊರೆ ಬರುತ್ತಿರುವ ಹಿನ್ನೆಲೆ ಸ್ಥಳಕ್ಕೆ ಇಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಲಿದ್ದಾರೆ. ಹೀಗಾಗಿ ಸಚಿವರ ಭೇಟಿ ಮುಂಚಿತವಾಗಿ ಚಿಕ್ಕಮಲ್ಲಿಗವಾಡ ಗ್ರಾ.ಪಂ ಸದಸ್ಯೆ ಪವಿತ್ರಾ ತಳವಾರ ಅವರು ಸ್ಥಳಕ್ಕೆ ಬಂದಿದ್ದಾರೆ.

ಈ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು ಸ್ಥಳಕ್ಕೆ ಬಂದಿದ್ದ ಪವಿತ್ರಾ ತಳವಾರ ಜನರ ಮುಂದೆಯೇ ಕಣ್ಣೀರು ಹಾಕಿದ್ದಾರೆ. ಬಸಾಧುನವರ ಎಸ್ಟೇಟ್ ಪ್ರತಿನಿಧಿಸುವ ಸದಸ್ಯೆ ಹಿನ್ನೆಲೆ ಶಿವಕುಮಾರ್ ದೊಡ್ಡಮನಿ ಎಂಬ ಹಿರಿಯರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸದ ಬಗ್ಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ.

Published on: Jun 26, 2023 11:29 AM