ಸಾಹಿತಿಗಳಿಕೆ ಬೆದರಿಕೆ ಪತ್ರ ಬರೆಯುತ್ತಿದ್ದವ ದಾವಣಗೆರೆಯಲ್ಲಿ ಸೆರೆ ಸಿಕ್ಕಿದ್ದಾನೆ: ಜಿ ಪರಮೇಶ್ವರ್ ಗೃಹ ಸಚಿವ

ಪತ್ರ ಬರೆಯುತ್ತಿದ್ದವ ಸೆರೆ ಸಿಕ್ಕಿದ್ದಾನೆ, ಆದರೆ ಪತ್ರಗಳನ್ನು ಅವನೇ ಬರೆಯುತ್ತಿದ್ದನಾ ಆಥವಾ ಯಾರಾದರು ಬರೆಸುತ್ತಿದ್ದಾರಾ ಅನ್ನೋದು ತನಿಖೆಯಾಗಬೇಕಿದೆ ಎಂದು ಸಚಿವರು ಹೇಳಿದರು. ಕುಮಾರಸ್ವಾಮಿ 6 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಯಾವಾಗಿನಿಂದ ಜ್ಯೋತಿಷ್ಯ ಹೇಳಲಾರಂಭಿಸಿದ್ದಾರೆ ಅಂದರು!

ಸಾಹಿತಿಗಳಿಕೆ ಬೆದರಿಕೆ ಪತ್ರ ಬರೆಯುತ್ತಿದ್ದವ ದಾವಣಗೆರೆಯಲ್ಲಿ ಸೆರೆ ಸಿಕ್ಕಿದ್ದಾನೆ: ಜಿ ಪರಮೇಶ್ವರ್ ಗೃಹ ಸಚಿವ
|

Updated on: Sep 30, 2023 | 1:57 PM

ತುಮಕೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಇಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮನೆಗೆ ಭೇಟಿ ನೀಡಿದ್ದು ಕುತೂಹಲ ಕೆರಳಿಸಿದೆ. ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯಕ್ಕೆ ನಾಲ್ವರು ಉಪ ಮುಖ್ಯಮಂತ್ರಿಗಳು ಬೇಕೆಂದು ಭಾರೀ ಗೊಂದಲ ಸೃಷ್ಟಿಸಿದ್ದ ರಾಜಣ್ಣ ಹೇಳಿಕೆಯನ್ನು ಪರಮೇಶ್ವರ್ ಸಮರ್ಥನೆ ಮಾಡಿದ್ದರು. ಇವತ್ತು ಅವರಿಬ್ಬರು ಭೇಟಿಯಾಗಿದ್ದು ಯಾಕೆ ಅಂತ ಗೊತ್ತಾಗಿಲ್ಲ. ಆ ವಿಷಯ ಬಿಡಿ, ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪರಮೇಶ್ವರ್ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಮಹತ್ವದ ವಿಷಯವನ್ನು ಹೇಳಿದರು. ಪತ್ರ ಬರೆಯುತ್ತಿದ್ದವ ಸೆರೆ ಸಿಕ್ಕಿದ್ದಾನೆ, ಆದರೆ ಪತ್ರಗಳನ್ನು ಅವನೇ ಬರೆಯುತ್ತಿದ್ದನಾ ಆಥವಾ ಯಾರಾದರು ಬರೆಸುತ್ತಿದ್ದಾರಾ ಅನ್ನೋದು ತನಿಖೆಯಾಗಬೇಕಿದೆ ಎಂದು ಸಚಿವರು ಹೇಳಿದರು. ಕುಮಾರಸ್ವಾಮಿ 6 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಯಾವಾಗಿನಿಂದ ಜ್ಯೋತಿಷ್ಯ ಹೇಳಲಾರಂಭಿಸಿದ್ದಾರೆ ಅಂದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us