ಕುಮಾರಸ್ವಾಮಿಯೇ 2009 ಮತ್ತು 2019ರ ಸಮ್ಮಿಶ್ರ ಸರ್ಕಾರಗಳ ಪತನಕ್ಕೆ ಕಾರಣರಾಗಿದ್ದರು: ಹೆಚ್ ವಿಶ್ವನಾಥ್

ಕುಮಾರಸ್ವಾಮಿಯೇ 2009 ಮತ್ತು 2019ರ ಸಮ್ಮಿಶ್ರ ಸರ್ಕಾರಗಳ ಪತನಕ್ಕೆ ಕಾರಣರಾಗಿದ್ದರು: ಹೆಚ್ ವಿಶ್ವನಾಥ್
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 30, 2023 | 11:35 AM

ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ದಲಿತನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ತಾನು ನೀಡಿದ ಸಲಹೆ ಅವರು ತಿರಸ್ಕರಿಸಿದ್ದರು. ಅದಲ್ಲದೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೂತು ರಾಜ್ಯಾಭಾರ ಮಾಡುತ್ತಾ ಜನಸಾಮಾನ್ಯ ಮತ್ತು ಖುದ್ದು ಅವರ ಪಕ್ಷದ ಶಾಸಕರಿಗೆ ಮರೀಚಿಕೆಯಾದರು ಎಂದು ವಿಶ್ವನಾಥ್ ಹೇಳಿದರು.

ಬೆಳಗಾವಿ: ಇನ್ನಾರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ (Siddaramaiah government) ಉರುಳುತ್ತದೆ ಅಂತ ಹೇಳಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಹೆಚ್ ವಿಶ್ವನಾಥ್ (H Vishwanath) ಗೇಲಿ ಮಾಡಿದ್ದಾರೆ. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ವಿಶ್ವನಾಥ್, ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆ ಮತ್ತು ಮನಸ್ಸಿಗೆ ಬಂದಿದ್ದನ್ನು ಬಡಬಡಾಯಿಸುತ್ತಿದ್ದಾರೆ. 2009 ರಲ್ಲಿ ಸಮ್ಮಿಶ್ರ ಸರ್ಕಾರ ಪತನಾವಾಗಿದ್ದಕ್ಕೆ ಕುಮಾರಸ್ವಾಮಿಯೇ ಕಾರಣ, ಆಗ ಶಾಸಕ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ತನಗೆ ಅವರು ಮಾಡಿದ್ದೇನು ಅಂತ ಚೆನ್ನಾಗಿ ಗೊತ್ತಿದೆ. ನಂತರ 2018 ರಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಪತನಕ್ಕೂ ಅವರೇ ಕಾರಣರಾಗಿದ್ದರು. ಕಾಂಗ್ರೆಸ್ ಪಕ್ಷವು ಆವರಿಗೆ 12 ಮಂತ್ರಿಗಳನ್ನು ಆರಿಸಿಕೊಳ್ಳುವ ಅವಕಾಶ ನೀಡಿತ್ತು ಆದರೆ ಕುಮಾರಸ್ವಾಮಿ ಆಯ್ದುಕೊಂಡಿದ್ದು 10 ಜನ ಮತ್ತು ಅದರಲ್ಲಿ 7 ಮಂತ್ರಿಗಳು ಅವರ ಸಂಬಂಧಿಕರಾಗಿದ್ದರು. ಒಬ್ಬ ಅಲ್ಪಸಂಖ್ಯಾತ ಹಾಗೂ ಒಬ್ಬ ದಲಿತನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ತಾನು ನೀಡಿದ ಸಲಹೆ ಅವರು ತಿರಸ್ಕರಿಸಿದ್ದರು. ಅದಲ್ಲದೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕೂತು ರಾಜ್ಯಾಭಾರ ಮಾಡುತ್ತಾ ಜನಸಾಮಾನ್ಯ ಮತ್ತು ಖುದ್ದು ಅವರ ಪಕ್ಷದ ಶಾಸಕರಿಗೆ ಮರೀಚಿಕೆಯಾದರು ಎಂದು ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ
ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ