ಸರ್ಕಾರೀ ಕಾರ್ಯಕ್ರಮದ ವೇದಿಕೆ ಮೇಲೆ ರೌಡಿಗಳಂತೆ ಕಿತ್ತಾಡಿದ ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ವಿರುದ್ಧ ಎಫ್ಐಆರ್ಗಳು!
ನಾರಾಯಣಸ್ವಾಮಿ ವಿರುದ್ಧ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಬಾಲಾಜಿ ದೂರು ಸಲ್ಲಿಸಿದ್ದರೆ ಮುನಿಸ್ವಾಮಿ ವಿರುದ್ಧ ಖುದ್ದು ನಾರಾಯಣಸ್ವಾಮಿಯೇ ದೂರು ದಾಖಲಿಸಿದ್ದಾರೆ. ಎಂಥವರನ್ನು ನಮ್ಮ ಪ್ರತಿನಿಧಿಗಳಾಗಿ ಆರಿಸಿದ್ದಿವಲ್ಲ ಅಂತ ಕೋಲಾರ ಮತ್ತು ಬಂಗಾರಪೇಟೆಯ ಜನ ಪಶ್ವಾತ್ತಾಪಪಡುತ್ತಿರಬಹುದು.
ಕೋಲಾರ: ಹಾಗೆ ನೋಡಿದರೆ ಸೆಪ್ಟೆಂಬರ್ 25 ರಂದು ನಗರದಲ್ಲಿ ನಡೆದ ಒಂದು ಸರ್ಕಾರೀ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಎದುರು ವೇದಿಕೆಯ ಮೇಲೆ ರಸ್ತೆಬದಿಯ ರೌಡಿಗಳಂತೆ ಕಿತ್ತಾಡಿದ ಕೋಲಾರದ ಸಂಸದ ಎಸ್ ಮುನಿಸ್ವಾಮಿ (S Muniswamy) ಹಾಗೂ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ (SN Narayanaswamy) ಇಬ್ಬರೂ ಜನಪ್ರತಿನಿಧಿಗಳು ಅಂತ ಕರೆಸಿಕೊಳ್ಳಲು ನಾಲಾಯಕ್ಕು. ಕೋಲಾರದ ಉಸ್ತುವಾರಿ ಸಚಿವ ಭೈರತಿ ಸುರೇಶ್ (Byrathi Suresh) ಜನತಾ ದರ್ಶನ ನಡೆಸುತ್ತಿದ್ದಾಗ ಅವರಿಬ್ಬರ ನಡುವೆ ಜಟಾಪಟಿ ನಡೆದಿತ್ತು. ಈಗ ಮುನಿಸ್ವಾಮಿ ಹಾಗೂ ನಾರಾಯಣಸ್ವಾಮಿ ಇಬ್ಬರ ವಿರುದ್ಧವೂ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿವೆ. ನಾರಾಯಣಸ್ವಾಮಿ ವಿರುದ್ಧ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಬಾಲಾಜಿ ದೂರು ಸಲ್ಲಿಸಿದ್ದರೆ ಮುನಿಸ್ವಾಮಿ ವಿರುದ್ಧ ಖುದ್ದು ನಾರಾಯಣಸ್ವಾಮಿಯೇ ದೂರು ದಾಖಲಿಸಿದ್ದಾರೆ. ಎಂಥವರನ್ನು ನಮ್ಮ ಪ್ರತಿನಿಧಿಗಳಾಗಿ ಆರಿಸಿದ್ದಿವಲ್ಲ ಅಂತ ಕೋಲಾರ ಮತ್ತ ಬಂಗಾರಪೇಟೆಯ ಜನ ಪಶ್ವಾತ್ತಾಪಪಡುತ್ತಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ