ಕೋಲಾರದ ಕ್ಲಾಕ್ ಟವರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಏಕಾಂಗಿ ಪ್ರತಿಭಟನೆಗೆ ನಿರ್ಧಾರ ಮಾಡಿದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ

ಕೋಲಾರ ನಗರದಲ್ಲಿರುವ ಕ್ಲಾಕ್ ಟವರ್ ಈ ದೇಶದ ಆಸ್ತಿ, ದೇಶ ಪ್ರೇಮ ಇರುವ ಪ್ರತಿಯೊಬ್ಬರು ಪ್ರತಿಭಟನೆಗೆ ಆಗಮಿಸಬೇಕು, ಈ‌ ದೇಶದ ವಿರುದ್ಧ ಮಾತನಾಡುವವರು ದೇಶ ವಿರೋಧಿಗಳು. ಕ್ಲಾಕ್ ಟವರ್ನ ರಾಷ್ಟ್ರ ಧ್ವಜ ಹಾರಿಸುವವರೆಗೂ ಶಾಂತಿಯುತ ಪ್ರತಿಭಟನೆ ಮಾಡೋಣ. -ಸಂಸದ ಎಸ್. ಮುನಿಸ್ವಾಮಿ

ಕೋಲಾರದ ಕ್ಲಾಕ್ ಟವರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಏಕಾಂಗಿ ಪ್ರತಿಭಟನೆಗೆ ನಿರ್ಧಾರ ಮಾಡಿದ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ
ಸಂಸದ ಎಸ್. ಮುನಿಸ್ವಾಮಿ
Follow us
TV9 Web
| Updated By: ಆಯೇಷಾ ಬಾನು

Updated on:Mar 17, 2022 | 8:50 PM

ಕೋಲಾರ: ಜಿಲ್ಲೆಯ ಕ್ಲಾಕ್ ಟವರ್ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ವಿಚಾರಕ್ಕೆ ಸಂಬಂಧಿಸಿ ಸಂಸದ ಎಸ್.ಮುನಿಸ್ವಾಮಿ ಏಕಾಂಗಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಮಾರ್ಚ್ 21 ರವರೆಗೆ 144 ಸೆಕ್ಷನ್ ಜಾರಿ ಇರೋದ್ರಿಂದ ಏಕಾಂಗಿ ಮೌನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಕೋಲಾರ ನಗರದಲ್ಲಿರುವ ಕ್ಲಾಕ್ ಟವರ್ ಈ ದೇಶದ ಆಸ್ತಿ, ದೇಶ ಪ್ರೇಮ ಇರುವ ಪ್ರತಿಯೊಬ್ಬರು ಪ್ರತಿಭಟನೆಗೆ ಆಗಮಿಸಬೇಕು, ಈ‌ ದೇಶದ ವಿರುದ್ಧ ಮಾತನಾಡುವವರು ದೇಶ ವಿರೋಧಿಗಳು. ಕ್ಲಾಕ್ ಟವರ್ನ ರಾಷ್ಟ್ರ ಧ್ವಜ ಹಾರಿಸುವವರೆಗೂ ಶಾಂತಿಯುತ ಪ್ರತಿಭಟನೆ ಮಾಡೋಣ. ಅವರವರ ಧರ್ಮ ಅವರವರ ಮನೆಗಳಲ್ಲಿರಲಿ. ದೇಶ ಅಂತ ಬಂದಾಗ ಪ್ರತಿಯೊಬ್ಬರೂ ದೇಶದ ಪರ ಇರಬೇಕು. ಕ್ಲಾಕ್ ಟವರ್ ಬಳಿ ಒಂದು ಪಕ್ಷಕ್ಕೆ ಮಾತ್ರ ರಾಜಕೀಯ ಭಾಷಣಕ್ಕೆ ಅವಕಾಶ ನೀಡ್ತಾರೆ. ಆದ್ರೆ ಬೇರೆಯವರಿಗೆ ಯಾಕೆ ಅವಕಾಶ ಮಾಡಿಕೋಡೋದಿಲ್ಲ. ಮೊದಲು ಆ ಮನಸ್ಥಿತಿಯನ್ನ ಬಿಡಬೇಕು. ಕ್ಲಾಕ್ ಟವರ್ನಲ್ಲಿ ತ್ರಿವರ್ಣ ದ್ವಜ ಹಾರಿಸೋದಕ್ಕೆ ವಿರೋಧಿಸುವವರು ಈ ದೇಶದ ದ್ರೋಹಿಗಳು. ಅಂತಹವರನ್ನು ಬಿಡೋ ಮಾತೆ ಇಲ್ಲ. ಅದು ಯಾರೇ ಆಗಿದ್ದರೂ ಎಂದು ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಕೋಲಾರದ ಕ್ಲಾಕ್​ ಟವರ್​ನಲ್ಲಿ ತ್ರಿವರ್ಣದ್ವಜ ಹಾರಿಸಲು ಸಂಸದರಿಂದ ಸತ್ಯಾಗ್ರಹ ಕೋಲಾರ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್​ ಟವರ್​ನಲ್ಲಿ ತ್ರಿವರ್ಣ ದ್ವಜ ಹಾರಿಸಲು ಕೋಲಾರ ಸಂಸದ ಎಸ್​.ಮುನಿಸ್ವಾಮಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಅದು ಮಾರ್ಚ್​-18 ರಿಂದ ಶಾಂತಿಯುತವಾಗಿ ತಾವೊಬ್ಬರೇ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಇದನ್ನು ವಿರೋಧ ಮಾಡುವವರು ದೇಶ ದ್ರೋಹಿಗಳು ಎಂದು ಮುನಿಸ್ವಾಮಿ ಹೇಳಿದ್ದಾರೆ. ಇವತ್ತು ಕೋಲಾರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮುನಿಸ್ವಾಮಿ ಕೋಲಾರದ ಕ್ಲಾಕ್​ ಟವರ್​ ಅಂದ್ರೆ ಅದೇನೋ ಬೇರೆ ಎಲ್ಲೋ ಇರುವಂತೆ ಬಿಂಬಿಸಲಾಗಿದೆ. ಹಾಗಾಗಿ ಕ್ಲಾಕ್​ ಟವರ್​ನಲ್ಲಿ ತ್ರಿವರ್ಣ ದ್ವಜ ಹಾರಿಸಲು ನಾನು ಸಾಯೋದಕ್ಕೂ ಸಿದ್ದ ಅನ್ನೋ ಮಾತುಗಳನ್ನಾಡಿದ್ದಾರೆ.

ಏನಿದು ಕ್ಲಾಕ್​ ಟವರ್​ ವಿವಾದ ಸೃಷ್ಟಿಯಾಗಿರೋದು ಏಕೆ ಕೋಲಾರ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್​ ಟವರ್​ ಅನ್ನೋ ಪ್ರದೇಶಕ್ಕೆ ದೊಡ್ಡ ಇತಿಹಾಸವೇ ಇದೆ, ಕೋಲಾರದಲ್ಲಿ 1930 ರ ಆಸುಪಾಸಿನಲ್ಲಿ ಚರ್ಮದ ರಪ್ತು ವ್ಯವಹಾರ ಹಾಗೂ ಅರಣ್ಯ ಇಲಾಖೆ ಗುತ್ತಿಗೆದಾರರಾಗಿದ್ದ ಕೋಲಾರದ ಶ್ರೀಮಂತ ವ್ಯಕ್ತಿ ಹಾಜಿ ಮೊಹಮದ್​ ಮುಸ್ತಾಫಾ ಸಾಬ್​ ಕ್ಲಾಕ್​ ಟವರ್​ ನಿರ್ಮಾಣ ಮಾಡಿದ್ದಾರೆ. ಕೋಲಾರದ ಪ್ರವೇಶ ದ್ವಾರದಂತಿದ್ದ ಕ್ಲಾಕ್​ ಟವರ್​ ಪ್ರದೇಶ ಹಾಗೂ ಹಳೇ ಬಸ್​ ನಿಲ್ದಾಣ ಎರಡು ಸ್ಥಳಗಳಲ್ಲಿ ನಿರ್ಮಾಣ ಮಾಡಿದ್ದರು. ಇಲ್ಲಿ ಕ್ಲಾಕ್​ ಟವರ್​ ನಿರ್ಮಾಣ ಮಾಡಲು ಮೂಲ ಕಾರಣ ಕೋಲಾರ ನಗರಕ್ಕೆ ಬರುವ ಜನರಿಗೆ ಸಮಯ ತಿಳಿಯಬೇಕು ಅನ್ನೋದು ಒಂದು ಕಾರಣವಾದರೆ, ಈ ಪ್ರದೇಶದಲ್ಲಿ ಹೆಚ್ಚಾಗಿ ಕೂಲಿ ಕೆಲಸ ಮಾಡುವ ಜನರಿದ್ದರು ಅವರಿಗೆ ಸಮಯ ತಿಳಿಯಬೇಕು. ಜೊತೆಗೆ ಹೋಗಿ ಬರುವ ಜನರಿಗೆ ಒಂದು ಸ್ಥಳದ ಗುರುತು ಇರಲಿ ಅನ್ನೋ ಕಾರಣಕ್ಕೆ ಇದನ್ನು ನಿರ್ಮಾಣ ಮಾಡಲಾಗಿತ್ತು. ಕಾಲ ಕ್ರಮೇಣ ಇದೊಂದು ಕೋಲಾರಕ್ಕೆ ಪ್ರಮುಖ ಸ್ಥಳವಾಗಿ ಇಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ನಡೆಯುವ ಸ್ಥಳವಾಗಿ ಮಾರ್ಪಾಟಾಗಿ ಹೋಯಿತು.

Kolar Clock Tower

ಕೋಲಾರದ ಕ್ಲಾಕ್​ ಟವರ್ (ಹಳೇ ಚಿತ್ರ)

ಕೋಲಾರದ ಕ್ಲಾಕ್​ ಟವರ್​ ಸುತ್ತ ಮುತ್ತ ಏನೇನಿದೆ ಗೊತ್ತಾ ಮುಸ್ತಾಫಾ ಸಾಬ್​ ನಿರ್ಮಾಣ ಮಾಡಿದ್ದ ಕ್ಲಾಕ್​ ಟವರ್​ ಸುತ್ತ ಮುತ್ತ ಹೆಚ್ಚಾಗಿ ಮುಸ್ಲಿಂ ಜನಾಂಗದವರೇ ವಾಸ ಮಾಡುವ ಪ್ರದೇಶವಾಗಿ ಇದು ಮಾರ್ಪಾಟಾಗಿ ಹೋಗಿದೆ ಇಂದಿಗೂ ಕ್ಲಾಕ್​ ಟವರ್​ ಪ್ರದೇಶಕ್ಕೆ ಹೊಂದಿಕೊಂಡು ಕೆ.ಜಿ ಮೊಹಲ್ಲಾ, ದರ್ಗಾ ಮೊಹಲ್ಲಾ, ಇಜರತ್ತಾ ಮೊಹಲ್ಲಾ, ಷಹೀದ್ ನಗರ್​, ಶಹಿಂಷಾ ನಗರ್​ ಪ್ರದೇಶ ಕ್ಲಾಕ್​ ಟವರ್​ಗೆ ಹೊಂದಿಕೊಂಡಿದೆ.ಇನ್ನು ಇದೇ ಕ್ಲಾಕ್​ ಟವರ್ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್​ ತಾತ-ಹಜರತ್​ ನವಾಬ್​ ಫತೆ ಆಲಿ ಖಾನ್​, ಟಿಪ್ಪು ಸುಲ್ತಾನ್ ಅಜ್ಜಿ​ ಸೈದಾನಿದಿ ಅವರ ಸಮಾಧಿಗಳಿವೆ ಜೊತೆಗೆ ಪವಾಡಗಳನ್ನು ಸೃಷ್ಟಿಸುತ್ತಿದ್ದ ಮುಸ್ಲಿಂ ಧರ್ಮಗುರು ಹಜರತ್ ಕುತುಬ್​ ಅವರ ಗೋರಿ ಕೂಡಾ ಇಲ್ಲಿದೆ. ಹಾಗಾಗಿ ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸ ಮಾಡುವ ಪ್ರದೇಶವಾಗಿ ಇಂದಿಗೂ ಮುಂದುವರೆಯುತ್ತಿದೆ.

ಕ್ಲಾಕ್​ ಟವರ್​ ವಿವಾದದ ಕೇಂದ್ರವಾಗಿದ್ದು ಏಕೆ ಹೀಗೆ ಕ್ಲಾಕ್​ ಟವರ್​ ಮೊದಲಿನಿಂದಲೂ ಕೋಲಾರ ನಗರದ ಪ್ರಮುಖ ಸರ್ಕಲ್​ಗಳಲ್ಲಿ ಒಂದಾಗಿ ಒಳ್ಳೆಯ ವ್ಯಾಪಾರ ನಡೆಯುವ ಸ್ಥಳವಾಗಿ ಬೆಂಗಳೂರು-ಚೆನೈ ಹೆದ್ದಾರಿಯಾಗಿ ಕೂಡಾ ಇದು ಇತ್ತು, ಕಾಲ ಕ್ರಮೇಣ ಕ್ಲಾಕ್​ ಟವರ್​ ಕೋಮು ಭಾವನೆಗಳನ್ನು ಕದಡುವ ಪ್ರದೇಶವಾಗಿ ಬದಲಾವಣೆಯಾಗುತ್ತಾ ಬಂದಿತ್ತು, ಹಿಂದುಗಳು ಗಣೇಶನ ಮೆರವಣಿಗೆ ಬಂದಾಗ ಇಲ್ಲಿ ಘೋಷಣೆಗಳನ್ನು ಕೂಗುವುದು ಹಾಗೂ ಇಲ್ಲಿ ಹೆಚ್ಚು ಹೊತ್ತು ಮೆರವಣಿಗೆ ನಿಲ್ಲಿಸಿ ಟ್ರಾಫಿಕ್​ ಸಮಸ್ಯೆ ಉಂಟುಮಾಡುವುದು ಮಾಡುತ್ತಾರೆ ಎಂದು ತಗಾದೆ ತೆಗೆಯಲು ಆರಂಭ ಮಾಡಿ, ಕೆಲವು ಬಾರಿ ಮೆರವಣಿಗೆ ಮೇಲೆ ಕಲ್ಲು ಎಸೆದಿರುವ ಘಟನೆ ಕೂಡಾ ನಡೆಯಿತು. ಇದಕ್ಕೆ ಪ್ರತಿಯಾಗಿ ಈದ್​ ಮಿಲಾದ್ ವೇಳೆ ಕೋಲಾರದ ಕ್ಲಾಕ್​ ಟವರ್​ ನಿಂದ ಡೂಂ ಲೈಟ್​ ಸರ್ಕಲ್​ ಮಾರ್ಗವಾಗಿ ಎಂ.ಜಿ.ರಸ್ತೆ ಮುಖಾಂತರ ಮೆರವಣಿಗೆ ಹೋಗುವಾಗ ಮುಸ್ಲಿಂ ಸಮುದಾಯದವರು ಘೋಷಣೆಗಳನ್ನು ಕೂಗುವುದು ಜೊತೆಗೆ ಟ್ರಾಫಿಕ್​ ಸಮಸ್ಯೆ ಉಂಟುಮಾಡುತ್ತಾರೆ ಅನ್ನೋ ದೂರುಗಳು ಕೇಳಿಬಂದವು ಆಗ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಮನೋಜ್​ ಕುಮಾರ್​ ಮೀನಾ ಅವರು ಹಿಂದು ಮೆರವಣಿಗೆಗಳು ಕ್ಲಾಕ್​ ಟವರ್​ಗೆ ಹೋಗದಂತೆ, ಮುಸ್ಲಿಮರ ಮೆರವಣಿಗೆಗಳು ಎಂ.ಜಿ.ರಸ್ತೆ ಭಾಗಕ್ಕೆ ಬಾರದಂತೆ ನಿರ್ಭಂದ ವಿಧಿಸಿದರು. ಇದು ಕಾಲ ಕ್ರಮೇಣ ನೋಡುವವರಿಗೆ ಬೇರೆಯೇ ಅರ್ಥ ಕಲ್ಪಿಸುತ್ತಾ ವಿವಾದದ ಕೇಂದ್ರವಾಗಿ ಮಾರ್ಪಾಟಾಗಿದೆ.

ಕ್ಲಾಕ್​ ಟವರ್​ ಇವತ್ತಿನ ಪರಿಸ್ಥಿತಿ ಏನು ಮುಸ್ತಾಫಾ ಸಾಬ್​ ಕ್ಲಾಕ್​ ಟವರ್​ ನಿರ್ಮಾಣ ಮಾಡಿ ನಂತರ ಅದರ ನಿರ್ವಹಣೆಯನ್ನು ಕೋಲಾರ ನಗರಸಭೆಗೆ ವಹಿಸಿದ್ದರು, ನಂತರ ಅದನ್ನು ಮುಸ್ತಾಫಾ ಸಾಬ್​ ಮೊಮ್ಮಗ ಹಾಗೂ ಅಂಜುಮನ್​ ಸಂಸ್ಥೆಯ ಅಧ್ಯಕ್ಷ ಜಮೀರ್​ ಅಹಮದ್​ ಪಡೆದಿದ್ದ ಅದರ ನಿರ್ವಹಣೆಯನ್ನು ಅವರೇ ಮಾಡುತ್ತಿದ್ದಾರೆ. ಸದ್ಯ ಹಿಂದೆ ಮಾಡಿದ್ದ ನಿಭಂದನೆ ರೀತಿಯಲ್ಲಿ ಹಿಂದೂ ಮೆರವಣಿಗೆಗಳು ಕ್ಲಾಕ್ ಟವರ್​ಗೆ ಹೋಗದಂತೆ, ಮುಸ್ಲಿಂರ ಈದ್ ಮಿಲಾದ್ ಸೇರಿದಂತೆ ಯಾವುದೇ ಮೆರವಣಿಗೆಗಳು ಡೂಂ ಲೈಟ್​ ಸರ್ಕಲ್​ಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಂಸದ ಮುನಿಸ್ವಾಮಿ ಅದನ್ನು ಪ್ರತ್ಯೇಕವಾಗಿ ನೋಡಲಾಗುತ್ತಿದೆ ಹಾಗಾಗಿ ಅಲ್ಲಿ ರಾಷ್ಟ್ರದ್ವಜ ಹಾರಿಸಬೇಕು ಕ್ಲಾಕ್​ ಟವರ್​ಗೆ ರಾಷ್ಟ್ರದ್ವಜದ ಬಣ್ಣ ಹಚ್ಚಬೇಕು ಅದಕ್ಕಾಗಿ ನಾನು ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅಂಜುಮನ್​ ಸಂಸ್ಥೆಯ ಅಧ್ಯಕ್ಷ ಜಮೀರ್​ ಅಹಮದ್​ ನಾವು ಭಾರತೀಯರು ಅಲ್ಲಿ ರಾಷ್ಟ್ರದ್ವಜ ಹಾರಿಸಲು ನಮ್ಮದೇನು ಅಭ್ಯಂತರವಿಲ್ಲ ಅದಕ್ಕಾಗಿ ಹೋರಾಟ ಮಾಡುವ ಅಗತ್ಯವಿಲ್ಲ, ನಾವೇ ಅಲ್ಲಿ ದ್ವಜ ಹಾರಿಸುತ್ತೇವೆ, ಸಂಸದ ಮುನಿಸ್ವಾಮಿ ರಾಜಕೀಯ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಸಂಸದರಿಗೆ ಪ್ರತಿಭಟನೆಗೆ ಅನುಮತಿ ನಿರಾಕರಣೆ ಈ ನಡುವೆ ಕ್ಲಾಕ್​ ಟವರ್​ನಲ್ಲಿ ಸಂಸದ ಮುನಿಸ್ವಾಮಿ ಪ್ರತಿಭಟನೆ ಮಾಡಲು ಪೊಲೀಸ್​ ಇಲಾಖೆಯ ಅನುಮತಿ ಕೇಳುತ್ತಿದ್ದಂತೆ ಪೊಲೀಸ್​ ಇಲಾಖೆ ಜಿಲ್ಲೆಯಲ್ಲಿ ನಿಷೇದಾಜ್ನೆ ಜಾರಿಯಲ್ಲಿದೆ ಜೊತೆಗೆ ಮುಸ್ಲಿಮರ ಷಬ್​-ಎ-ಭರತ್​ ಆಚರಣೆ ಇರುವ ಹಿನ್ನೆಲೆ ಪ್ರತಿಭಟನೆ ಅನುಮತಿ ನಿರಾಕರಣೆ ಮಾಡಲಾಗಿದೆ. ಪ್ರತಿಭಟನೆ ಭಾರತೀಯರ ಮೂಲಭೂತ ಹಕ್ಕಾಗಿರುವ ಕಾರಣ ನಿಮಗೆ ಮುಂದಿನ ಏಳು ದಿನಗಳಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಸಿಕೊಡುವುದಾಗಿ ಕೋಲಾರ ಎಸ್ಪಿ ಡಿ.ದೇವರಾಜ್​ ತಿಳಿಸಿದ್ದಾರೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ನಿಮ್ಮಲ್ಲಿ ಯಾರಾದರೂ ಲಂಚ ಕೇಳಿದರೆ ಇಲ್ಲ ಎಂದು ಹೇಳಬೇಡಿ, ಸಂಭಾಷಣೆ ರೆಕಾರ್ಡ್ ಮಾಡಿ  ಕಳಿಸಿ: ಕೇಜ್ರಿವಾಲ್

ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!

Published On - 5:13 pm, Thu, 17 March 22

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್