ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!

ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿಯುತ್ತಿದ್ದಂತೆ ಮೋಹನ್ರ ಕರುಳು ಹೊರಗೆ ಬಂದಿತ್ತು. ಕೂಡಲೇ ಆಸ್ಪತ್ರೆಗೆ ಹೋಗಲು ಯತ್ನಿಸಿದ್ದು ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು, ತುಮಕೂರಿನ ನೇರಳೇಕಟ್ಟೆಯ ಮೋಹನ್ ಊರು ಬಿಟ್ಟು ಇಲ್ಲಿಗೆ ಬಂದಿದ್ರು

ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!
ಆರೀಫ್, ನವಾಜ್, ಮೋಹನ್
Follow us
TV9 Web
| Updated By: ಆಯೇಷಾ ಬಾನು

Updated on: Mar 17, 2022 | 4:50 PM

ಕೋಲಾರ: ಬಾರ್ನಲ್ಲಿ ಎಣ್ಣೆ ಖರೀದಿ ಮಾಡೋಕೆ ಬಂದಿದವರು ಬಾರ್ನಲ್ಲಿ ಕಿರಿಕ್ ಮಾಡಿ ನೋಡ ನೋಡ್ತಿದ್ದಂತೆ ಕ್ಯಾಶಿಯರ್ರನ್ನೇ ಡ್ರ್ಯಾಗರ್ ಇರಿದು ಕೊಲೆ ಮಾಡಿ ಎಸ್ಕೇಪ್ ಆದ ಘಟನೆ ಕೋಲಾರದಲ್ಲಿ ನಡೆದಿದೆ. ಕೇವಲ ಎರಡೇ ನಿಮಿಷದಲ್ಲಿ ಇಂತಹದೊಂದು ಘಟನೆ ನಡೆದಿದೆ. ಮೊದಲಿಗೆ ಇಬ್ಬರ ನಡುವೆ ಜಗಳ ನಡೆಯುತ್ತೆ ಇಬ್ಬರ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತೆ. ಬಳಿಕ ಇವರಿಬ್ಬರಿಗೂ ಬುದ್ಧಿ ಹೇಳಲು ಮುಂದಾದ ಕ್ಯಾಶಿಯರ್ರನ್ನೇ ಆರೋಪಿಗಳು ಕೊಂದು ಎಸ್ಕೇಪ್ ಆಗಿದ್ದವರು ಅರೆಸ್ಟ್ ಆಗಿದ್ದಾರೆ.

ಕೋಲಾರ ನಗರದ ಟೇಕಲ್ ಸರ್ಕಲ್ನಲ್ಲಿರು ಚಾಲುಕ್ಯ ಬಾರ್ ಬಳಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಷಹಿದ್ ನಗರದ ನವಾಜ್ ಹಾಗೂ ಆರೀಫ್, ಬಿಯರ್ ಕೇಳ್ಕೊಂಡು ಬಾರ್ಗೆ ಬಂದಿದರು. ಈ ವೇಳೆ 10 ರೂಪಾಯಿ ಹಣ ಕಡಿಮೆ ಕೊಟ್ಟಿದ್ದು, ಅದಕ್ಕೆ ಪೂರ್ತಿ ಹಣವನ್ನ ಕ್ಯಾಶಿಯರ್ ಮೋಹನ್ ಕೇಳಿದ್ದಾರೆ. ಈ ವೇಳೆ ನವಾಜ್ ಹಾಗೂ ಆರೀಫ್ ನಡುವೆ ಜಗಳ ಶುರುವಾಗಿದೆ. ನಂತರ ಇಬ್ಬರ ಜಗಳ ನೋಡಲಾಗದೆ ಮೋಹನ್ ಬಿಯರ್ ಕೊಟ್ಟು ಹೊರಡಿ ಎಂದಿದ್ದಾರೆ. ಇದಾದ ಬಳಿಕವೂ ಇಬ್ಬರ ಜಗಳ ನಿಂತಿಲ್ಲ. ಈ ವೇಳೆ, ಜಗಳ ಬಿಡಿಸಲು ಮೋಹನ್ ಹೋಗಿದ್ದಾರೆ. ಆದ್ರೆ, ಇಬ್ಬರು ಕ್ರಿಮಿಗಳು ತಮ್ಮ ಬಳಿಯಿದ್ದ ಡ್ರ್ಯಾಗರ್ನಿಂದ ಇರಿದು ಪರಾರಿಯಾಗಿದ್ರು.

ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿಯುತ್ತಿದ್ದಂತೆ ಮೋಹನ್ರ ಕರುಳು ಹೊರಗೆ ಬಂದಿತ್ತು. ಕೂಡಲೇ ಆಸ್ಪತ್ರೆಗೆ ಹೋಗಲು ಯತ್ನಿಸಿದ್ದು ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು, ತುಮಕೂರಿನ ನೇರಳೇಕಟ್ಟೆಯ ಮೋಹನ್ ಊರು ಬಿಟ್ಟು ಇಲ್ಲಿಗೆ ಬಂದಿದ್ರು. ಆದ್ರೆ, ಜೀವನ ಮಾಡಲು ಬಂದಿದ್ದವನನ್ನ ಪಾಪಿಗಳು ಕೊಂದಿದ್ದಾರೆ. ಆರೋಪಿಗಳಾದ ನವಾಜ್ ಹಾಗೂ ಆರೀಫ್ ಮೇಲೆ ಈಗಾಗಲೇ ಅನೇಕ ಕೇಸ್ಗಳಿವೆ. ಗಾಂಜಾ ಹೊಡೆದು, ಸಲ್ಯೂಶನ್ ಎಳೆದು ಮತ್ತೇರಿಸಿಕೊಂಡು ಸಿಕ್ಕ ಸಿಕ್ಕವ್ರ ಜತೆ ಜಗಳ ಮಾಡ್ತಿದ್ರಂತೆ. ಆದ್ರೆ, ಮೊನ್ನೆ ರಾತ್ರಿ ಬಿಯರ್ ವಿಷ್ಯಕ್ಕೆ ಗಲಾಟೆ ಮಾಡಿ ಒಬ್ಬನ ಜೀವ ತೆಗೆದು ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಒಟ್ನಲ್ಲಿ, ಕುಡಿತದ ಚಟಕ್ಕೆ ಬಿದ್ದಿದ್ದ ಇಬ್ಬರು ಮಾಡಿದ ಕೃತ್ಯಕ್ಕೆ, ಕ್ಯಾಶಿಯರ್ ಮೋಹನ್ ಉಸಿರು ಚೆಲ್ಲಿದ್ದಾನೆ. ಮೋಹನ್ ಕಳೆದುಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳು ಬಿಕ್ಕುತ್ತಿದ್ದು, ಬದುಕು ಹೇಗೆ ಎಂದು ಗೋಳಾಡ್ತಿದ್ದಾರೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: Covid-19 ಹಾಂಗ್ ಕಾಂಗ್​​ನಲ್ಲಿ ಒಂದೇ ದಿನ 21,650 ಹೊಸ ಕೊವಿಡ್ ಪ್ರಕರಣ ಪತ್ತೆ

ಜಿಮ್​ಗೆ ಹೋಗದೆಯೂ ದೇಹದ ತೂಕ ಇಳಿಸಿಕೊಳ್ಳಬಹುದು: ಇಲ್ಲಿವೆ ನೋಡಿ ಸಿಂಪಲ್​ ಸೂತ್ರಗಳು

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್