ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ನಷ್ಟ, ಕಾಂಗ್ರೆಸ್ಗೆ ಲಾಭ: ಹೆಚ್ ವಿಶ್ವನಾಥ್
ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಟೀಕಿಸುತ್ತಿದ್ದರೆ, ಇತ್ತ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ನಷ್ಟವಾಗಲಿದೆ, ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ವಿಜಯಪುರ, ಸೆ.10: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ (BJP JDS Alliance) ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಟೀಕಿಸುತ್ತಿದ್ದರೆ, ಇತ್ತ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ (H.Vishwanath) ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ನಷ್ಟವಾಗಲಿದೆ, ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಯಾರ ಜೊತೆಗೆ ಸೇರಿದರೂ ಅವರಿಗೆ ಲಾಸ್ ಆಗತ್ತದೆ. ಮೈತ್ರಿಯಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ, ಬಿಜೆಪಿಗೆ ಲಾಸ್ ಆಗಲಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸುಮ್ಮನೆ ಜಾತ್ಯತೀತ ಪಕ್ಷ ಅಂತ ಇಟ್ಟುಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಇತರೆ ನಾಯಕರ ಭಿನ್ನ ಅಭಿಪ್ರಾಯ
ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವಿದೆ ಎಂಬುದರ ಬಗ್ಗೆ ಮಾತನಾಡಿದ ವಿಶ್ವನಾಥ್, ಈಗಲೂ ಮನೆಯವರಿಗಾಗಿಯೇ ಸೀಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ದಲಿತ-ಮುಸ್ಲಿಂ ಎರಡು ಟಿಕೇಟ್ ಕೇಳಿದಾಗ ಕೊಡಲಿಲ್ಲ. ಆಗ ಗೆಜ್ಜೆ ಪೂಜೆ, ಈಗ ರಿಯಲ್ ನಾಟಕ ಶುರು ಮಾಡಿದ್ದಾರೆ. ಈಗಲೂ ಬಿಜೆಪಿ ಹೈಕಮಾಂಡ್ ಬಳಿ ತಮ್ಮ ಮನೆಯವರಿಗೆ ಸೀಟ್ ಕೇಳುತ್ತಿತ್ತಿದ್ದಾರೆ ಎಂದರು.
ಸೀಟು ಹಂಚಿಕೆ ಮಾತುಕತೆ ನಡೆದಿದೆ: ಹೆಚ್ ವಿಶ್ವನಾಥ್
ಬಿಜೆಪಿ ಜೆಡಿಎಸ್ ಮೈತ್ರಿ ಯಾಕೆ ಆಗಿದೆಯಂತಾ ದೇವಗೌಡರು ಹೇಳುತ್ತಾರೆ. ಸೀಟ್ ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ಒಬ್ಬರಿಗೊಬ್ಬರು ಹೊಂದಾಣಿಕೆ ಆಗುವುದು ಇದೇನು ಹೊಸದಲ್ಲ. ಹಿಂದೆ ಕಾಂಗ್ರೆಸ್ – ಜೆಡಿಎಸ್ ಕೂಡ ಮೈತ್ರಿ ಮಾಡಿಕೊಂಡಿದ್ದರು. ಈಗಾ ಬಿಜೆಪಿ ಜೆಡಿಎಸ್ ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಇದೇನು ಹೊಸದಲ್ಲ. ಆದರೆ ಜನ ಯಾವರೀತಿ ಸ್ವೀಕಾರ ಮಾಡುತ್ತಾರೆ ಅದನ್ನ ನೋಡಬೇಕು. ಇದು ಫಲಿತಾಂಶದ ನಂತರ ತಿಳಿಯುತ್ತದೆ ಎಂದು ವಿಶ್ವನಾಥ್ ಹೇಳಿದರು.
ಚುನಾವಣೆ ಫಲಿತಾಂಶದ ನಂತರ ಮೈತ್ರಿಯ ಲಾಭ ಗೊತ್ತಾಗಲಿದೆ. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಬಿಜೆಪಿಗೆ ಲಾಭ ಆಗಿತ್ತು. ಈಗಲೂ ಅಷ್ಟೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ಗೆ ಲಾಭ ಆಗುತ್ತದೆ ಅಷ್ಟೆ. ನಾನು ಸದ್ಯ ಯಾವ ಪಕ್ಷದಲ್ಲೂ ಇಲ್ಲ. ರಾಜಕೀಯದಲ್ಲಿ ನಿವೃತ್ತಿಯಿಲ್ಲ. ಜೀವನ ಇರುವವರೆಗೆ ಉಸಿರು ಇರುವರೆಗೆ ರಾಜಕಾರಣದಲ್ಲಿ ಇದ್ದೇ ಇರುತ್ತೇನೆ ಎಂದರು.
ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಾಸಾದ್, ಈಡಿಗರಿಗೆ ಏನು ಕೊಟ್ಟಿಲ್ಲ ಎಂಬ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ತಮ್ಮ ವೇದನೆಯನ್ನ ಹೇಳಿದ್ದಾರೆ. ವೇದನೆ ಇದೆ ಸುಳ್ಳಲ್ಲ, ಆದರೆ ಆ ವೇದನೆಯನ್ನ ಬಹಿರಂಗವಾಗಿ ಪ್ರದರ್ಶನ ಮಾಡಬಾರದಿತ್ತು. ಹರಿಪ್ರಸಾದ್ ಅವರು ತಮ್ಮ ಸಮುದಾಯಕ್ಕೆ ಸಿಗಲಿಲ್ಲ ಅಂತಾ ಹೇಳಿದ್ದಾರೆ. ಬಹುಶಃ ಈಡೀಗ ಸಮುದಾಯಕ್ಕೆ ಕಾಂಗ್ರೆಸ್ನಲ್ಲಿ ಸಿಕ್ಕ ಅವಕಾಶಗಳು ಬೇರೆಲ್ಲೂ ಸಿಕ್ಕಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ