AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಈದ್​ ಮಿಲಾದ್​ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ; ಎಸ್ಪಿ

ಶಿವಮೊಗ್ಗದಲ್ಲಿ ಈದ್​ ಮಿಲಾದ್​ ಮೆರವಣಿಗೆ ವೇಳೆ ಎರಡು ಓಮಿನಿ ವಾಹನಗಳಲ್ಲಿ ಆಗಮಿಸಿದ ವಿಚಾರ ‘ ದಾವಣಗೆರೆ ವ್ಯಾಪ್ತಿಯ ನ್ಯಾಮತಿ ಇಂದ ಓಮಿನಿ ಬಂದಿದ್ದು, ಆ ಎರಡೂ ಓಮಿನಿಗಳಲ್ಲಿ ಬಂದವರನ್ನೂ ಸಹ ನಾವು ತನಿಖೆ ಮಾಡಿದ್ದೇವೆ. ಆ ವಾಹನದಲ್ಲಿ ಎರಡೂ ಸಮುದಾಯದ ಜನರು ಬಂದಿದ್ದಾರೆ. ಇನ್ನು ಈ ಬಗ್ಗೆ ನಾವು ಕೂಲಂಕಶವಾಗಿ ತನಿಖೆ ಮಾಡುತ್ತೇವೆ. 

ಶಿವಮೊಗ್ಗದಲ್ಲಿ ಈದ್​ ಮಿಲಾದ್​ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ; ಎಸ್ಪಿ
ಶಿವಮೊಗ್ಗ ಎಸ್ಪಿ
Basavaraj Yaraganavi
| Edited By: |

Updated on: Oct 03, 2023 | 3:00 PM

Share

ಶಿವಮೊಗ್ಗ, ಅ.03: ಈದ್​-ಮಿಲಾದ್(Eid Milad)​ ಹಬ್ಬದಲ್ಲಿ ಆದ ಗಲಾಟೆಯ ಕುರಿತು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹಬ್ಬುತ್ತಿವೆ. ಬೇರೆ ಬೇರೆ ರಾಜ್ಯದ ವೀಡಿಯೋಗಳನ್ನು ಸಾಮಾಜಿಕ‌ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ರೀತಿ ಊಹಾಪೋಹಗಳನ್ನ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಜೊತೆಗೆ ಈ ಕುರಿತು ಸಾರ್ವಜನಿಕರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಶಿವಮೊಗ್ಗ ಎಸ್​ಪಿ.ಮಿಥುನ್ ಕುಮಾರ ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ  ವಿರುದ್ಧ ಕಠಿಣ ಕ್ರಮ

ಹೌದು, ಈದ್​-ಮಿಲಾದ್​ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಶಿವಮೊಗ್ಗ ನಗರದ  ರಾಗಿಗುಡ್ಡ ಶಾಂತಿ ನಗರದಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಈ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ‘ಅಂದಿನ‌ ದಿನ ರಾಗಿಗುಡ್ಡದಲ್ಲಿ ಯಾರೋ ಒಬ್ಬರ ಎನ್ ಕೌಂಟರ್ ಆಗಿದೆ ಎನ್ನುವ ಊಹಾಪೋಹ ಹರಿದಾಡಿದೆ. ಆ ರೀತಿ ಊಹಾಪೋಹಗಳ ಕುರಿತು ಈಗಾಗಲೇ ನಾವು ಸ್ಪಷ್ಟನೆಯನ್ನ ಪಡೆದುಕೊಂಡಿದ್ದೇವೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಈಗಾಗಲೇ ಕಲ್ಲು ತೂರಾಟದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಶಿವಮೊಗ್ಗ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ತಲ್ವಾರ್‌, ಚೂರಿ ಝಳಪಿಸಿದ ವಿಡಿಯೋ ಹರಿಬಿಟ್ಟ ಬಿಜೆಪಿ

ಮೆರವಣಿಗೆ ವೇಳೆ ದಾವಣಗೆರೆ ವ್ಯಾಪ್ತಿಯಿಂದ ಬಂದ ಎರಡು ಓಮಿನಿಗಳು

ಮೆರವಣಿಗೆ ವೇಳೆ ಎರಡು ಓಮಿನಿ ವಾಹನಗಳಲ್ಲಿ ಆಗಮಿಸಿದ ವಿಚಾರ ‘ ದಾವಣಗೆರೆ ವ್ಯಾಪ್ತಿಯ ನ್ಯಾಮತಿ ಇಂದ ಓಮಿನಿ ಬಂದಿದ್ದು, ಆ ಎರಡೂ ಓಮಿನಿಗಳಲ್ಲಿ ಬಂದವರನ್ನೂ ಸಹ ನಾವು ತನಿಖೆ ಮಾಡಿದ್ದೇವೆ. ಆ ವಾಹನದಲ್ಲಿ ಎರಡೂ ಸಮುದಾಯದ ಜನರು ಬಂದಿದ್ದಾರೆ. ಇನ್ನು ಈ ಬಗ್ಗೆ ನಾವು ಕೂಲಂಕಶವಾಗಿ ತನಿಖೆ ಮಾಡುತ್ತೇವೆ.  ಈಗಾಗಲೇ ಸ್ಥಳೀಯ ಪೊಲೀಸರ ವಿಚಾರಣೆಯಿಂದ‌ ಓಮಿನಿ ಕುರಿತು ಸ್ಪಷ್ಟನೆ ಸಿಕ್ಕಿದೆ. ಜೊತೆಗೆ ಬಂಧನ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ‌ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಸೂಕ್ತ ಕ್ರಮದ ಭರವಸೆ

ಇನ್ನು ಸಾಗರದಲ್ಲಿ ನಿನ್ನೆ ನಡೆದ ಪ್ರಕರಣದ ಕುರಿತೂ ಸಹ ತನಿಖೆ ಮಾಡಲಾಗಿದೆ. ಆದ್ರೆ, ಶಿವಮೊಗ್ಗದಲ್ಲಿ ಸುಖಾ ಸುಮ್ಮನೇ ಊಹಾಪೋಹಗಳು ಹರಿದಾಡುತ್ತಿದ್ದು, ಇದರಿಂದ ನಗರದ ಶಾಂತಿ ಹಾಳಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ರೀತಿ ತಪ್ಪುಗಳಿದ್ದರೆ, ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಗಿಗುಡ್ಡದಲ್ಲಿ ಮೂರು ಸಮುದಾಯದವರ ಮನೆಗಳ ಮೇಲೂ ದಾಳಿಯಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!