ಎರಡು ತಿಂಗಳಲ್ಲಿ ಬೆಂಗಳೂರಿಗೆ ಬರಲಿವೆ 10 ಸಾವಿರ ಇ-ಸ್ಕೂಟರ್​; ಉದ್ಯೋಗಾವಕಾಶ ಹೆಚ್ಚಿಸಲು ಝೈಪ್ ಎಲೆಕ್ಟ್ರಿಕ್ ಗುರಿ

|

Updated on: May 03, 2023 | 8:36 PM

ಮುಂದಿನ ಎರಡು ತಿಂಗಳ ಒಳಗಾಗಿ ಬೆಂಗಳೂರಿನಲ್ಲಿ10 ಸಾವಿರ ಇ-ಸ್ಕೂಟರ್​ಗಳು ಕಾರ್ಯಾಚರಿಸುವಂತೆ ಮಾಡಲಾಗುವುದು. 2,000 ಇ-ಸ್ಕೂಟರ್​ಗಳು ಈಗಾಗಲೇ ನಗರದಲ್ಲಿವೆ. ಉಳಿದ 8,000 ಸ್ಕೂಟರ್​​ಗಳು ಇನ್ನೆರಡು ತಿಂಗಳಲ್ಲಿ ಬರಲಿವೆ ಎಂದು ಝೈಪ್ ಎಲೆಕ್ಟ್ರಿಕ್ ಮಂಗಳವಾರ ತಿಳಿಸಿದೆ.

ಎರಡು ತಿಂಗಳಲ್ಲಿ ಬೆಂಗಳೂರಿಗೆ ಬರಲಿವೆ 10 ಸಾವಿರ ಇ-ಸ್ಕೂಟರ್​; ಉದ್ಯೋಗಾವಕಾಶ ಹೆಚ್ಚಿಸಲು ಝೈಪ್ ಎಲೆಕ್ಟ್ರಿಕ್ ಗುರಿ
ಝೈಪ್ ಎಲೆಕ್ಟ್ರಿಕ್
Follow us on

ಮುಂಬೈ: ಮುಂದಿನ ಎರಡು ತಿಂಗಳ ಒಳಗಾಗಿ ಬೆಂಗಳೂರಿನಲ್ಲಿ (Bengaluru) 10 ಸಾವಿರ ಇ-ಸ್ಕೂಟರ್​ಗಳು (e-scooters) ಕಾರ್ಯಾಚರಿಸುವಂತೆ ಮಾಡಲಾಗುವುದು. 2,000 ಇ-ಸ್ಕೂಟರ್​ಗಳು ಈಗಾಗಲೇ ನಗರದಲ್ಲಿವೆ. ಉಳಿದ 8,000 ಸ್ಕೂಟರ್​​ಗಳು ಇನ್ನೆರಡು ತಿಂಗಳಲ್ಲಿ ಬರಲಿವೆ ಎಂದು ಝೈಪ್ ಎಲೆಕ್ಟ್ರಿಕ್ (Zypp Electric) ಮಂಗಳವಾರ ತಿಳಿಸಿದೆ. ದೇಶದ 30 ನಗರಗಳಲ್ಲಿ ಸೇವೆ ವಿಸ್ತರಿಸುವುದಾಗಿ ಕಂಪನಿ ಇತ್ತೀಚೆಗೆ ಘೋಷಿಸಿತ್ತು. 2025ರ ಒಳಗೆ 2 ಲಕ್ಷ ಇ-ಸ್ಕೂಟರ್​ಗಳು ಕಾರ್ಯಾಚರಿಸುವಂತೆ ಮಾಡುವ ಬಗ್ಗೆ ಕಂಪನಿ ಗುರಿ ಹಾಕಿಕೊಂಡಿದೆ.

ಬೆಂಗಳೂರಿನಲ್ಲಿ 2,000 ಡೆಲಿವರಿ ಎಕ್ಸ್​ಕ್ಯೂಟಿವ್ಸ್ ನೇಮಿಸಿಕೊಳ್ಳಲಾಗಿದೆ ಮತ್ತು ಮುಂದಿನ ಎರಡು ತಿಂಗಳೊಳಗೆ 5,000 ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ.

ನೇಮಕಾತಿಯಿಂದ ವಿತರಣೆ ಹೆಚ್ಚಳ ಹಾಗೂ ಉದ್ಯೋಗಾವಕಾಶ ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿದೆ. ಮುಂದಿನ 12-18 ತಿಂಗಳುಗಳಲ್ಲಿ ಬೆಂಗಳೂರಿನ ವಿವಿಧೆಡೆ 100 ಗೊರೊಗ್ರೊ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಝೈಪ್ ಹೇಳಿದೆ. ಇದು ನಗರದ ಎಲೆಕ್ಟ್ರಿಕ್ ವಾಹನ ವ್ಯವಸ್ಥೆಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Bangalore rain: ಬೆಂಗಳೂರಿನ ಹಲವೆಡೆ ಭಾರೀ ಮಳೆ, ಮೇ 6ರ ವರೆಗೂ ವರ್ಷಧಾರೆ ಸಾಧ್ಯತೆ

ನಾವು ಈಗಾಗಲೇ ಬೆಂಗಳೂರಿನಲ್ಲಿ 2,000 ಇ-ಸ್ಕೂಟರ್‌ಗಳನ್ನು ನಿಯೋಜಿಸಿದ್ದೇವೆ. ಕೈಗೆಟುಕುವ ಮತ್ತು ಸ್ಥಿರವಾದ ವಿತರಣೆ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಝೈಪ್ ಎಲೆಕ್ಟ್ರಿಕ್‌ನ ಸಂಸ್ಥಾಪಕಿ ರಾಶಿ ಅಗರ್ವಾಲ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:33 pm, Wed, 3 May 23