ಸಿಕ್ಕಿಂನಲ್ಲಿ ಹೃದಯಾಘಾತದಿಂದ ಬೀದರ್​ನ ಯೋಧ ಸಾವು

| Updated By: ವಿವೇಕ ಬಿರಾದಾರ

Updated on: Jul 27, 2024 | 9:40 AM

ಭಾರತೀಯ ಸೇನೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಬೀದರ್​ ಜಿಲ್ಲೆಯ ಕಮಲನಗರ ತಾಲೂಕಿನ ಕೋರಿಯಾಳ ಗ್ರಾಮದ ಯೋಧ ಹವಾಲ್ದಾರ್ ಅನಿಲ್​​​ ಕುಮಾರ್ ನವಾಡೆ (40) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಿಕ್ಕಿಂನಲ್ಲಿ ಹೃದಯಾಘಾತದಿಂದ ಬೀದರ್​ನ ಯೋಧ ಸಾವು
ಯೋಧ ಹವಾಲ್ದಾರ್ ಅನಿಲ್​​​ ಕುಮಾರ್ ನವಾಡೆ
Follow us on

ಬೀದರ್, ಜುಲೈ 27: ಸಿಕ್ಕಿಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀದರ್ (Bidar) ಜಿಲ್ಲೆಯ ಕಮಲನಗರ ತಾಲೂಕಿನ ಕೋರಿಯಾಳ ಗ್ರಾಮದ ಯೋಧ ಹವಾಲ್ದಾರ್ ಅನಿಲ್​​​ ಕುಮಾರ್ ನವಾಡೆ (40) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಯೋಧ ಅನಿಲ್ ಕಳೆದ 20 ವರ್ಷದಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿಕ್ಕಿಂ ಗಡಿ ಭಾಗದ ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿಮಪಾತವಾಗಿ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಯೋಧನ ಪಾರ್ಥೀವ ಶರೀರ ಭಾನುವಾರ (ಜು.28) ರಂದು ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ. ಮೃತ ಯೋಧನಿಗೆ ತಂದೆ-ತಾಯಿ, ನಾಲ್ವರು ಸಹೋದರರು, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅನಿಲ್​ ಕುಮಾರ್ ಅವರು 2004ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಹವಾಲ್ದಾರರಾಗಿ ಸಿಕ್ಕಿಂ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ