ಸಾರ್ವಜನಿಕರ ಎದುರು ಗುಂಡು ಹಾರಿಸಿದ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ವಿರುದ್ಧ ಪ್ರಕರಣ ದಾಖಲು

|

Updated on: Feb 21, 2023 | 12:03 PM

ಭಾನುವಾರ ರಾತ್ರಿ ರಾಯಚೂರಿನ ಚೌಕಿಮಠದಲ್ಲಿ ಹುಮನಾಬಾದ್ ಸಬ್ ಇನ್ಸ್‌ಪೆಕ್ಟರ್ ಮಂಜುನಗೌಡ ಪಾಟೀಲ್ ಅವರು ಸಿದ್ದಲಿಂಗ ಸ್ವಾಮಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಸಾರ್ವಜನಿಕರ ಎದುರು ಗುಂಡು ಹಾರಿಸಿದ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ವಿರುದ್ಧ ಪ್ರಕರಣ ದಾಖಲು
ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ
Follow us on

ಬೀದರ್: ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪಕ್ಕೆ ಸಂಬಂಧಿಸಿ ಬೀದರ್ ಜಿಲ್ಲೆಯ ಹುಮನಾಬಾದ್​ನ ಹೊರವಲಯದಲ್ಲಿರುವ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ(Basavateerth Mutt Siddalinga Swamy) ವಿರುದ್ಧ ಪ್ರಕರಣ ದಾಖಲಾಗಿದೆ. ಶುಕ್ರವಾರ ಭಾಲ್ಕಿ ಕ್ರಾಸ್ ಬಳಿಯ ಹುಮನಾಬಾದ್-ಬೀದರ್ ರಸ್ತೆಯಲ್ಲಿ ತನ್ನ ನಾಲ್ವರು ಅನುಯಾಯಿಗಳೊಂದಿಗೆ ನಿಂತಿದ್ದಾಗ ಸ್ವಾಮಿಜಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಕಲ್ಲೂರ್ ದೂರು ನೀಡಿದ್ದಾರೆ.

ಶುಕ್ರವಾರ ಕಲ್ಲೂರ್ ಗ್ರಾಮದಿಂದ ಹುಮನಾಬಾದ್‌ಗೆ ಬರುವ ರಸ್ತೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಪಿಸ್ತೂಲ್ ಹಿಡಿದುಕೊಂಡು ನಿಂತಿದ್ದರು. ಸಮೀಪ ಹೋಗಿ ನೋಡುತ್ತಿದ್ದಂತೆ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದರು. ಕಾನೂನಿನ ಅರಿವು ಇದ್ದರೂ ಸಾರ್ವಜನಿಕರ ಮಧ್ಯೆ ಗುಂಡು ಹಾರಿಸಿದ್ದಾರೆ ಎಂದು ನಾಗೇಶ ಕಲ್ಲೂರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಭಾನುವಾರ ರಾತ್ರಿ ರಾಯಚೂರಿನ ಚೌಕಿಮಠದಲ್ಲಿ ಹುಮನಾಬಾದ್ ಸಬ್ ಇನ್ಸ್‌ಪೆಕ್ಟರ್ ಮಂಜುನಗೌಡ ಪಾಟೀಲ್ ಅವರು ಸಿದ್ದಲಿಂಗ ಸ್ವಾಮಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 4 ವರ್ಷದ ಬಾಲಕನನ್ನು ಹತ್ಯೆಗೈದ ಬೀದಿ ನಾಯಿಗಳು, ಘಟನೆ ಸಿಸಿಟಿವಿಯಲ್ಲಿ ಸೆರೆ

ಸ್ವಾಮೀಜಿ ವಿರುದ್ಧ ಮತ್ತೊಂದು ದೂರು ದಾಖಲು

ಹುಮನಾಬಾದ್ ತಾಲ್ಲೂಕಿನ ಬಸವ ತೀರ್ಥ ಗ್ರಾಮದ ಬಸವ ತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ಅವರ ವಿರುದ್ಧ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಕುರಿತಂತೆ ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ನಮ್ಮ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದನ್ನು ತಡೆಯಲು ಹೋದಾಗ ಹಲವರು ಹಲ್ಲೆ ನಡೆಸಿದ್ದು, ನನ್ನ ಪತ್ನಿ ಮೇಲೆ ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಾಲ್ಲೂಕಿನ ಕಲ್ಲೂರ ತಾಂಡಾ ನಿವಾಸಿ ಸೋಮನಾಥ ಲಕ್ಷ್ಮಣ ಪವಾರ ಎಂಬುವವರು ನೀಡಿದ ದೂರಿನನ್ವಯ ಪೊಲೀಸ್ ಸಬ್ ಇನ್‌’ಸ್ಪೆಕ್ಟರ್ ಮಹೇಂದ್ರಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:03 pm, Tue, 21 February 23