ಬೀದರ್: ರಾಕ್ಷಸರಿಂದ ನಿರ್ಮಾಣವಾದ ಆಂಜನೇಯ ದೇವಾಲಯ; ಇಲ್ಲಿನ ಹನುಮಂತನಿಗಿದೆ 2 ಸಾವಿರ ವರ್ಷಗಳ ಇತಿಹಾಸ

| Updated By: preethi shettigar

Updated on: Sep 19, 2021 | 7:52 AM

ಚಳಕಾಪುರ ಹನುಮಂತ ದೇವಾಲಯವನ್ನು ಉದ್ಭವ ಮೂರ್ತಿ ಎಂದು ಕರೆಯಲಾಗುತ್ತದೆ. ದೇಗುಲದ ಬಾಗಿಲು ಉತ್ತರಾಭಿಮುಖವಾಗಿದೆ ಆಂಜನೇಯ ಸ್ವಾಮಿಯ ಮುಖ ದಕ್ಷಿಣಾಭಿಮುಖವಾಗಿದ್ದು, ಕರ್ನಾಟಕದಲ್ಲಿಯೆ ಅತ್ಯಂತ ಸುಂದರವಾದ ಮೂರ್ತಿಯಾಗಿದೆ.

ಬೀದರ್: ರಾಕ್ಷಸರಿಂದ ನಿರ್ಮಾಣವಾದ ಆಂಜನೇಯ ದೇವಾಲಯ; ಇಲ್ಲಿನ ಹನುಮಂತನಿಗಿದೆ 2 ಸಾವಿರ ವರ್ಷಗಳ ಇತಿಹಾಸ
ಆಂಜನೇಯ ದೇವಾಲಯ
Follow us on

ಬೀದರ್: ನಮ್ಮ ದೇಶದಲ್ಲಿ ಆಂಜನೇಯನ ಉಪಾಸನೆಗೆ ಅತೀ ಹೆಚ್ಚು ಪ್ರಾಶ್ಯಸ್ಥವನ್ನು ನೀಡಲಾಗುತ್ತದೆ. ಭಾರತದಲ್ಲಿರುವ ಅದೇಷ್ಟೋ ದೇವರ ಸನ್ನಿದಾನಗಳಲ್ಲಿ ಆಂಜನೇಯನ ದೇವಸ್ಥಾನಗಳೇ ಅತೀ ಹೆಚ್ಚು. ಅಂಜನಾದೇವಿಯ ಮಗಾ ಆಂಜನೇಯ, ಪವನ ಸುತ ರಾಮನ ಪರಮ ಭಕ್ತ, ರಾಮಾಯಣದಲ್ಲಿ ರಾಮನ ನಂತರದ ಸ್ಥಾನವನ್ನು ಪಡೆದಿರುವುದು ಆಂಜನೇಯನೇ. ಹನುಮಂತನನ್ನು ಶಕ್ತಿ ದೇವರು ಎಂದು ಕರೆಯಲಾಗುತ್ತದೆ. ಇಷ್ಟೇಲ್ಲಾ ಮಹತ್ವ ಪಡೆದಿರುವ ಆಂಜನೇಯನ ಅಪರೂಪದ ದೇವಾಲವೊಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರದಲ್ಲಿದೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುದಲ್ಲಿರುವ ಹನುಮಂತ ದೇವಾಲಯ ಸುಮಾರು 2 ಸಾವಿರ ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ. ಇಲ್ಲಿ ಪ್ರತಿದಿನ ಮೂರು ಬಾರಿ ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ, ಮಧ್ಯಾಹ್ನ 12 ಗಂಟೆಗೆ ಹಾಗೂ ಸಾಯಂಕಾಲ 7 ಗಂಟೆಗೆ ಪೂಜೆ ನಡೆಸಲಾಗುತ್ತದೆ. ಬೆಳಗ್ಗೆ ನಡೆಯುವ ಪೂಜೆಯು ಹಾಲಿನಿಂದ ಅಭಿಷೇಕ ಮಾಡಿ ಹನುಮನನ್ನು ಅಲಂಕಾರ ಮಾಡಲಾಗುತ್ತದೆ. ಮದ್ಯಾಹ್ನ ನಡೆಯುವ ಪೂಜೆಯು ಗಂಧ ಹಾಗೂ ಕುಂಕುಮದ ಲೇಪನ ಮಾಡಿ ಅಭಿಷೇಕ ಮಾಡಲಾಗುತ್ತದೆ. ಸಂಜೆ ನಡೆಯುವ ಪೂಜೆಯುವ ವಿಶೇಷತೆಯಿಂದ ಕೂಡಿದ್ದು, ಪಂಚಾಮೃತಗಳಿಂದ ಅಭಿಷೇಕ ಮಾಡಿ ಎಲೆಗಳಿಂದ ಹನುಮನ ಮೂರ್ತಿಗೆ ಅಲಂಕಾರ ಮಾಡಿ, ಎರಡು ಗಂಟೆಗ ಕಾಲ ಭಜನೆ ಮಾಡಿ ದೇವರನ್ನು ಪೂಜೆ ಮಾಡಲಾಗುತ್ತದೆ.

ವರ್ಷದಲ್ಲಿ ಎರಡು ಬಾರಿ ಜಾತ್ರೆ ಅಂದರೆ ದವನದ ಹುಣ್ಣುಮೆ ಹಾಗೂ ದೀಪಾವಳಿ ಪಾಡ್ಯೆಯಂದು ವರ್ಷದಲ್ಲಿ ಎರಡು ಬಾರಿ ಅದ್ಧೂರಿಯಾಗಿ ಹನುಮನ ಜಾತ್ರೆಯನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು ಹನುಮನ ದರ್ಶನ ಪಡೆದುಕೊಂಡು ತಮ್ಮ ಇಷ್ಟಾರ್ಥವನ್ನು ಇಡೇರಿಸಿಕೊಂಡು ಹೋಗುತ್ತಾರೆ.

ತ್ರೇತಾಯುಗದಲ್ಲಿ ಹೇಮಾಡಪಂತಿ ರಾಕ್ಷರು ಕಟ್ಟಿದ ದೇವಸ್ಥಾನ
ತ್ರೇತಾಯುಗದಲ್ಲಿ ಚಾಳಿಕಾಸುರ ಹಾಗೂ ಚಾಳಿಕಾದೇವಿ ಎನ್ನುವ ಇಬ್ಬರು ರಾಕ್ಷಸ ದಂಪತಿಗಳಿದ್ದರಂತೆ, ಆ ದಂತಿಗಳ ಪೈಕಿ ಚಾಳಿಕಾಸುರನ ಹೆಂಡತಿ ಚಾಳಿಕಾದೇವಿಯು ಅಪ್ಪಟ ರಾಮನ ಭಕ್ತೆಯಾಗಿದ್ದಳಂತೆ. ತನ್ನ ಹೆಂಡತಿಯ ಆಸೆಯಂತೆ ಚಾಳಿಕಾಸುರ ರಾಕ್ಷಸನು ಚಾಳಿಕಾದೇವಿಗೆ ಒಂದೇ ಒಂದು ರಾತ್ರಿಯಲ್ಲಿ ದೇವಾಲಯವೊಂದನ್ನು ನಿರ್ಮಾಣ ಮಾಡಿ ಚಾಳಿಕಾದೇವಿಗೆ ಉಡುಗೊರೆಯಾಗಿ ಕೊಡುತ್ತಾನಂತೆ. ಆ ದೇವಾಲಯ ನಿರ್ಮಾಣವಾದ 5 ಗಂಟೆಯಲ್ಲಿ ದೇವಾಲಯದ ಗರ್ಬಗುಡಿಯಲ್ಲಿ ಹನುಮನ ಮೂರ್ತಿ ಉದ್ಭವವಾಗಿ ಅಶ್ಚಿರಿಯನುಂಟು ಮಾಡಿತ್ತು ಎಂಬ ಇತಿಹಾಸ ಇದೆ. ಹೀಗಾಗಿ ಚಳಕಾಪುರ ಹನುಮಂತ ದೇವಾಲಯವನ್ನು ಉದ್ಬವ ಮೂರ್ತಿ ಎಂದು ಕರೆಯಲಾಗುತ್ತದೆ. ದೇಗುಲದ ಬಾಗಿಲು ಉತ್ತರಾಭಿಮುಖವಾಗಿದೆ ಆಂಜನೇಯ ಸ್ವಾಮಿಯ ಮುಖ ದಕ್ಷಿಣಾಭಿಮುಖವಾಗಿದ್ದು, ಕರ್ನಾಟಕದಲ್ಲಿಯೆ ಅತ್ಯಂತ ಸುಂದರವಾದ ಮೂರ್ತಿಯಾಗಿದೆ.

ಹನುಮಂತ ದೇವಾಲಯ

ಯುಗಾದಿಯಲ್ಲಿ ಒಂದು ತಿಂಗಳ ವರೆಗೆ ನಿರಂತರವಾಗಿ ಪಂಚಾಮೃತ ಅಭಿಷೇಕ, ಕುಂಕುಮ ಅಭಿಷೇಕ, ಹಾಲಿನ ಅಭಿಷೇಕ, ಎಳ್ಳೆಣ್ಣೆ ಅಭಿಷೇಕ ಹಾಗೂ ಶ್ರೀಗಂಧದ ಅಭಿಷೇಕಗಳು ನಡೆಯುತ್ತವೆ. ಅಲ್ಲದೆ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಕಾರ್ತಿಕ ಹಚ್ಚಲಾಗುವುದು. ದೇವಸ್ಥಾನದ ಸುತ್ತಲೂ ಆವರಣದಲ್ಲಿ ತುಳಸಿಕಟ್ಟಿ, ಬೆನ್ನಪ್ಪ, ಕಡಗೋಲ ಕೃಷ್ಣ, ಈಶ್ವರಲಿಂಗ ಸೇರಿದಂತೆ ಹಲವಾರು ದೇವರುಗಳ ಮೂರ್ತಿಗಳಿವೆ.

ಮಕ್ಕಳಾಗದವರು ಇಲ್ಲಿಗೆ ಬಂದು ಹರಕೆ ಮತ್ತು ಕಠಿಣ ವೃತ ಮಾಡಿದರೆ ಮಕ್ಕಳಾಗುತ್ತವೆ. ಕಣ್ಣು ಕಳೆದುಕೊಂಡವರಿಗೂ ಕಣ್ಣು ಬಂದಿವೆ. ಚಿಕ್ಕ ಮಕ್ಕಳನ್ನು ತಂದು ಆಂಜನೇಯನ ಆಶಿರ್ವಾದ ಪಡೆಯಲಾಗುತ್ತದೆ. ಅಂದುಕೊಂಡ ಕಾರ್ಯ ತಪ್ಪದೆ ನೆರವೇರುತ್ತದೆ. ಹರಕೆ ಹೊತ್ತವರು ಧೀರ್ಘದಂಡ ನಮಸ್ಕಾರ ಹಾಕುತ್ತಾರೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ವರದಿ: ಸುರೇಶ್ ನಾಯಕ್ 

ಇದನ್ನೂ ಓದಿ:
ಬೀದರ್: ಸಿಖ್ಖರ ಪವಿತ್ರ ಸ್ಥಳ ಗುರುನಾನಕ್​ ಝಿರಾ; ಧಾರ್ಮಿಕತೆ ಮತ್ತು ಪರಂಪರೆಗೆ ಹೆಸರುವಾಸಿಯಾದ ದೇವಾಲಯ

ಎದೆಮಟ್ಟದ ಉಗುರು ಬೆಚ್ಚಗಿನ ನೀರಲ್ಲಿಯೇ ದೇವರ ದರ್ಶನ; ಐತಿಹಾಸಿಕ ಝರಣಿ ಗುಹಾ ದೇವಾಲಯದ ಮಹಿಮೆ ಏನು ಗೊತ್ತಾ?

Published On - 7:47 am, Sun, 19 September 21