ವಿಜಯಪುರ: ಕೊರೊನಾ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕಾಟ ಜೋರಾಗಿದೆ. ಕೊರೊನಾದಿಂದ ಗುಣಮುಖರಾಗಿ ಬಂದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು ಮತ್ತೆ ಮೃತ್ಯಕೂಪಕ್ಕೆ ಎಳೆದುಕೊಂಡು ಹೋಗುತ್ತಿದೆ. ಆದರೆ ಈಗ ಮತ್ತೊಂದು ಭಯಾನಕ ಮಾಹಿತಿ ಹೊರ ಬಿದ್ದಿದೆ.
ಬ್ಲಾಕ್ ಫಂಗಸ್ ಬರೋದಕ್ಕೆ ಕೊರೊನಾ ಇರಲೇ ಬೇಕು ಎಂದೇನಿಲ್ಲ. ಕೊರೊನಾ ಪಾಸಿಟಿವ್ ಇಲ್ಲದವರಿಗೂ ಬ್ಲಾಕ್ ಫಂಗಸ್ ಬರಬಹುದು ಎಂದು ಡಾ ರಾಜೇಶ್ ಹೊನ್ನಟಗಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಮೂರು ದಿನಗಳ ಅಂತರದಲ್ಲಿ 31 ಬ್ಲಾಕ್ ಫಂಗಸ್ ಕೇಸ್ ಪತ್ತೆಯಾಗಿದ್ದು ಈ ಪೈಕಿ 5ಕ್ಕೂ ಹೆಚ್ಚು ಜನರಿಗೆ ಕೊರೊನಾ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಕೊರೊನಾ ಸೋಂಕು ಇಲ್ಲದೆ ಇರುವವರಲ್ಲಿಯೂ ಬ್ಲಾಕ್ ಫಂಗಸ್ ತಗುಲುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಖಾಸಗಿ ಆಸ್ಪತ್ರೆಗೆ ಬ್ಲಾಕ್ ಫಂಗಸ್ ರೋಗಿ, ಕುಟುಂಬಸ್ಥರು ಅಲೆದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 81ಕ್ಕೇರಿಕೆ
ವಿಜಯಪುರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 81ಕ್ಕೇರಿಕೆಯಾಗಿದೆ. 11 ಬ್ಲ್ಯಾಕ್ ಫಂಗಸ್ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬರು ಬ್ಲ್ಯಾಕ್ ಫಂಗಸ್‌ಗೆ ಬಲಿಯಾಗಿದ್ದಾರೆ. 69 ಪ್ರಕರಣ ಸಕ್ರಿಯವಾಗಿದೆ.
ನಾವು 20 ಸಾವಿರ ವಯಲ್ಸ್‌ಗೆ ಮನವಿ ಮಾಡಿದ್ದೇವೆ
ಇನ್ನು ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ. ಬ್ಲ್ಯಾಕ್ ಫಂಗಸ್ ರೋಗಕ್ಕೆ ಸ್ವಲ್ಪ ಔಷಧದ ಕೊರತೆ ಇದೆ. ಕೇಂದ್ರ ಸಚಿವ ಡಿವಿಎಸ್ ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಔಷಧ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಪ್ರತಿವರ್ಷ ಸಾಮಾನ್ಯವಾಗಿ 100-200 ಕೇಸ್ ಬರುತ್ತಿತ್ತು. ಈ ವರ್ಷ ಕೇಸ್ ಹೆಚ್ಚಳವಾಗಿದ್ದರಿಂದಾಗಿ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ. ಕೇಂದ್ರದಿಂದ ನಮಗೆ 1,150 ವಯಲ್ಸ್ ಔಷಧ ಬಿಡುಗಡೆಯಾಗಲಿದೆ. ನಾವು 20 ಸಾವಿರ ವಯಲ್ಸ್‌ಗೆ ಮನವಿ ಮಾಡಿದ್ದೇವೆ.
ಬ್ಲ್ಯಾಕ್ ಫಂಗಸ್ ಹೇಗೆ ಬರುತ್ತದೆ
ರಾಜ್ಯಕ್ಕೆ ಶೀಘ್ರದಲ್ಲಿಯೇ ಔಷಧ ಬರಲಿದೆ. ಬ್ಲ್ಯಾಕ್ ಫಂಗಸ್ ಹೇಗೆ ಬರುತ್ತದೆ ಎಂಬ ಬಗ್ಗೆ ನಾವು ರಚನೆ ಮಾಡಿರುವ ತಜ್ಞರ ತಂಡ ವರದಿ ನೀಡಿದೆ. ಹೆಚ್ಚು ಸ್ಟಿರಾಯ್ಡ್ ಜೊತೆಗೆ ಮಧುಮೇಹ ಕಾಯಿಲೆ, ICUಗಳಲ್ಲಿ ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಅಸ್ವಚ್ಛತೆ. ಒಂದೇ ಮಾಸ್ಕ್ ಹೆಚ್ಚು ಕಾಲ ಉಪಯೋಗ ಮಾಡಿದ್ರೆ, ಆಕ್ಸಿಜನ್ ಸೋರ್ಸ್ ಸೇರಿ ಹಲವು ವಿಧಾನಗಳಿಂದ ಬರುತ್ತೆ. ಇದಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳಲು ತಜ್ಞರು ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಕಟ್ಟಡ ನಿರ್ಮಾಣ, ನವೀಕರಣ ಮಾಡಬಾರದು. ಕೊವಿಡ್ ವಾರ್ಡ್‌ಗೆ ಬೇರೆಯವರು ಹೋಗಬಾರದು. ಪ್ರತಿ ಪಾಳಿಯಲ್ಲಿ ಆಸ್ಪತ್ರೆಗಳ ಫ್ಲೋರ್, ವಾರ್ಡ್‌ಗೆ ಸ್ಯಾನಿಟೈಸ್, ಆಕ್ಸಿಜನ್, ವೆಂಟಿಲೇಟರ್, ರೋಗಿಗಳು ಇರುವಲ್ಲಿ ಶುಚಿತ್ವ ಕಾಪಾಡಬೇಕು. ಸ್ಟಿರಾಯ್ಡ್ ಹೆಚ್ಚು ಬಳಕೆ ಮಾಡದಂತೆ ಸಲಹೆ ನೀಡಲಾಗಿದೆ. ಕೊವಿಡ್‌ನಿಂದ ಗುಣಮುಖರಾದ ಬಳಿಕ ENT ಸ್ಪೆಷಲಿಸ್ಟ್, ವೈದ್ಯರು ಮತ್ತೊಮ್ಮೆ ರೋಗಿ ಪರೀಕ್ಷೆ ಮಾಡಬೇಕು. ಹಂತಹಂತವಾಗಿ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ತೇರಿ ಮಿಟ್ಟೀ ಮೇ ಮಿಲ್ ಜಾವಾ’ ಹಾಡು ನುಡಿಸಿ ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಿದ ಐಟಿಬಿಪಿ ಕಾನ್ಸ್ಟೇಬಲ್