ಶಾಸಕರ ಭವನದಲ್ಲಿ ಕಾರು ಕ್ಲೀನರ್​ಗೆ ಕೊರೊನಾ, ಸಿಎಂ ಕಚೇರಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್

|

Updated on: Jun 23, 2020 | 12:46 PM

ಬೆಂಗಳೂರು: ಇಷ್ಟು ದಿನ ಪೊಲೀಸರಿಗೆ ಬೆನ್ನು ಬಿಡದೆ ಕಾಡುತ್ತಿದ್ದ ಕೊರೊನಾ ಇದೀಗ ರಾಜಕೀಯ ನಾಯಕರತ್ತ ಮುಖ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಧಾನಸೌಧ ಹಾಗೂ ವಿಕಾಸಸೌಧದ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಸೋಂಕು​ ಪತ್ತೆಯಾಗಿತ್ತು. ಇದಲ್ಲದೆ, ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ರ ಕುಟುಂಬದ ಕೆಲವು ಸದಸ್ಯರಿಗೆ ಹಾಗೂ ಅಡುಗೆ ಭಟ್ಟನಿಗೆ ಸೋಂಕು ತಗುಲಿತ್ತು. ಜೊತೆಗೆ ಇಂದು, ವಿಧಾನಸೌಧದ ಬಳಿಯಿರುವ ಶಾಸಕರ ಭವನದ ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ಎಂದು ವರಿದಿಯಾಗಿದೆ. ಹೌದು, ಶಾಸಕರ ಭವನದಲ್ಲಿ ಕಾರು ತೊಳೆಯುತ್ತಿದ್ದ ವ್ಯಕ್ತಿಗೂ […]

ಶಾಸಕರ ಭವನದಲ್ಲಿ ಕಾರು ಕ್ಲೀನರ್​ಗೆ ಕೊರೊನಾ, ಸಿಎಂ ಕಚೇರಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್
Follow us on

ಬೆಂಗಳೂರು: ಇಷ್ಟು ದಿನ ಪೊಲೀಸರಿಗೆ ಬೆನ್ನು ಬಿಡದೆ ಕಾಡುತ್ತಿದ್ದ ಕೊರೊನಾ ಇದೀಗ ರಾಜಕೀಯ ನಾಯಕರತ್ತ ಮುಖ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಧಾನಸೌಧ ಹಾಗೂ ವಿಕಾಸಸೌಧದ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಸೋಂಕು​ ಪತ್ತೆಯಾಗಿತ್ತು. ಇದಲ್ಲದೆ, ನಿನ್ನೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ರ ಕುಟುಂಬದ ಕೆಲವು ಸದಸ್ಯರಿಗೆ ಹಾಗೂ ಅಡುಗೆ ಭಟ್ಟನಿಗೆ ಸೋಂಕು ತಗುಲಿತ್ತು.

ಜೊತೆಗೆ ಇಂದು, ವಿಧಾನಸೌಧದ ಬಳಿಯಿರುವ ಶಾಸಕರ ಭವನದ ಸಿಬ್ಬಂದಿಗೂ ಕೊರೊನಾ ಪಾಸಿಟಿವ್​ ಎಂದು ವರಿದಿಯಾಗಿದೆ. ಹೌದು, ಶಾಸಕರ ಭವನದಲ್ಲಿ ಕಾರು ತೊಳೆಯುತ್ತಿದ್ದ ವ್ಯಕ್ತಿಗೂ ಸೋಂಕು ದೃಢಪಟ್ಟಿದ್ದು ಶಾಸಕರು ಹಾಗೂ ಭವನದಲ್ಲಿ ಕೆಲಸ ಮಾಡ್ತಿದ್ದ ಇತರೆ ಸಿಬ್ಬಂದಿಗೂ ಆತಂಕ ಶುರುವಾಗಿದೆ.

ಸಿಎಂ ಕಚೇರಿಯ ಎಲ್ಲ ಸಿಬ್ಬಂದಿಗೆ ಕೊವಿಡ್ ಟೆಸ್ಟ್
ಇದೀಗ ಸರ್ಕಾರಿ ಕಚೇರಿಗಳಲ್ಲೇ ಕೇಸ್​ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಎಲ್ಲ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಸಿಎಂ ಯಡಿಯೂರಪ್ಪನವರ ಗೃಹ ಕಚೇರಿ ಕೃಷ್ಣಾ ಮತ್ತು ನಿವಾಸವಾದ ಕಾವೇರಿಯ ಎಲ್ಲಾ ಭದ್ರತಾ ಹಾಗೂ ಇತರೆ ಸಿಬ್ಬಂದಿಗೆ ಕೋವಿಡ್​ ಪರೀಕ್ಷೆ ನಡೆಸಲಾಗ್ತಿದೆ.

ನಿನ್ನೆ ಮತ್ತು ನಡೆಸಲಾಗುತ್ತಿರುವ ಕರೋನಾ ಟೆಸ್ಟಿಂಗನ್ನು ಇನ್ನು ಮುಂದೆ ಪ್ರತಿ 15 ದಿನಕ್ಕೊಮ್ಮೆ ನಡೆಸಲು ನಿರ್ಧರಿಸಲಾಗಿದೆ.

 

Published On - 12:44 pm, Tue, 23 June 20