ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು ಪ್ರಕರಣ: ಇಬ್ಬರು ವೈದ್ಯರು ಸೇರಿ ಮೂವರ ವಿರುದ್ಧ ಎಫ್​ಐಆರ್

| Updated By: Rakesh Nayak Manchi

Updated on: Dec 09, 2023 | 5:14 PM

ಅಪೆಂಡೆಕ್ಸ್ ಹಿನ್ನಲೆ ಬಾಲಕ ವಿಜಯ್ ಎಂಬಾತನನ್ನು ಕೊಳ್ಳೇಗಾಲದ ಜನನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದ ವೈದ್ಯರು ನಂತರ ಉಸಿರಾಟದ ತೊಂದರೆಯಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ. ಆದರೆ, ಶಸ್ತ್ರ ಚಿಕಿತ್ಸೆಗೆ ಮೊದಲು ಸರಿಯಾದ ಅರವಳಿಕೆ ಚುಚ್ಚುಮದ್ದು ಕೊಟ್ಟಿಲ್ಲವೆಂದು ಆರೋಪ ಮಾಡಿದ್ದ ಕುಟುಂಬಸ್ಥರು, ವೈದ್ಯರ ನಿರ್ಲಕ್ಷ್ಯದಿಂದಲೇ ಚಾಲಕ ಸಾವನ್ನಪ್ಪಿದ್ದಾನೆ ಎಂದಿದ್ದರು. ಈ ಸಂಬಂಧ ಮೂವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು ಪ್ರಕರಣ: ಇಬ್ಬರು ವೈದ್ಯರು ಸೇರಿ ಮೂವರ ವಿರುದ್ಧ ಎಫ್​ಐಆರ್
ಬಾಲಕ ಸಾವು ಪ್ರಕರಣ ಸಂಬಂಧ ಕೊಳ್ಳೇಗಾಲದ ಜನನಿ ಆಸ್ಪತ್ರೆ ಇಬ್ಬರು ವೈದ್ಯರು ಸೇರಿ ಮೂವರ ವಿರುದ್ಧ ಎಫ್​ಐಆರ್
Follow us on

ಚಾಮರಾಜನಗರ, ಡಿ.9: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು ಆರೋಪ ಸಂಬಂಧ ಜಿಲ್ಲೆಯ ಕೊಳ್ಳೇಗಾಲ (Kollegal) ಜನನಿ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಸ್ಪತ್ರೆಯ ಸರ್ಜನ್ ಡಾ.ಶಿವಕಿಶೋರ್, ಅರವಳಿಕೆ ತಜ್ಞ ಡಾ.ಸ್ಯಾಮಸನ್ ಹಾಗೂ ವ್ಯವಸ್ಥಾಕನ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ರ ಪ್ರಕಾರ ಮೊಕದ್ದಮೆ ದಾಖಲಾಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಜನನಿ ಆಸ್ಪತ್ರೆಯಲ್ಲಿ ಸೆ‌ಪ್ಟೆಂಬರ್ 2 ರಂದು ನಡೆದಿದ್ದ ಪ್ರಕರಣ ಇದಾಗಿದೆ. ಅಪೆಂಡೆಕ್ಸ್ ಹಿನ್ನಲೆ ಬಾಲಕ ವಿಜಯ್ ಎಂಬಾತನನ್ನು ಜನನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದ ವೈದ್ಯರು, ನಂತರ ಉಸಿರಾಟದ ತೊಂದರೆಯಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ನಡೆದ ಕೇರಳ ರಾಬರಿ ವಿಚಾರಣೆ, ಸ್ಪೋಟಕ ಸತ್ಯ ಬಯಲಿಗೆ, ಅಸಲಿಗೆ ಹಣ ದೋಚಿದವರು ಯಾರು?

ಶಸ್ತ್ರ ಚಿಕಿತ್ಸೆಗೆ ಮೊದಲು ಸರಿಯಾದ ಅರವಳಿಕೆ ಚುಚ್ಚುಮದ್ದು ಕೊಟ್ಟಿಲ್ಲವೆಂದು ಆರೋಪ ಮಾಡಿದ್ದ ಕುಟುಂಬಸ್ಥರು, ವೈದ್ಯರ ನಿರ್ಲಕ್ಷ್ಯದಿಂದ ಬಾಲಕನ ಸಾವಾಗಿದೆ ಎಂಬ ಆರೋಪಿಸಿದ್ದರು. ಕೂಡಲೇ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆ ಪ್ರಕರಣದ ಸತ್ಯಾಸತ್ಯೆತೆ ವರದಿ ನೀಡಲು ಸಿಮ್ಸ್ ತಜ್ಞ ವೈದ್ಯರ ಸಮಿತಿ ರಚನೆ ಮಾಡಲಾಗಿತ್ತು.

ಅದರಂತೆ ನಡೆದ ವಿಚಾರಣೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡುಬಂದಿದ್ದು, ಈ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಲಕನನ್ನು ಸರಿಯಾಗಿ ಮಾನಿಟರ್ ಮಾಡಿಲ್ಲ, ಶಸ್ತ್ರಚಿಕಿತ್ಸೆ ನಂತರ ಅಸಮರ್ಪಕ ನಿರ್ವಹಣೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ