ರಸ್ತೆ ಮೇಲೆಯೇ ರಾಗಿ ಕಣ: ಜಾರಿಬಿದ್ದು ಸಾವನ್ನಪ್ಪಿದ ಬೈಕ್ ಸವಾರ, ಇನ್ನಾದ್ರು ಎಚ್ಚೆತ್ಕೊಳ್ಳಿ!

|

Updated on: Jan 15, 2020 | 11:26 AM

ಚಾಮರಾಜನಗರ: ರಸ್ತೆಯ ಮೇಲೆ ಹಾಕಿದ್ದ ರಾಗಿ ಹುಲ್ಲಿನಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಬಳಿ ನಡೆದಿದೆ. ಅನಿಲ್ ಕುಮಾರ್ (45) ಮೃತ ಬೈಕ್ ಸವಾರ. ಒಕ್ಕಣೆಗೆ ರಸ್ತೆ ಮೇಲೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಚಲಿಸುವಾಗ ನಿಯಂತ್ರಣ ತಪ್ಪಿ ಟೆಂಪೋಗೆ ಬೈಕ್ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಅನಿಲ್ ಕುಮಾರ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಓಮ್ನಿ ಸುಟ್ಟು ಹೋಗಿತ್ತು.. ಯಾಕೆ ಗೊತ್ತಾ!? […]

ರಸ್ತೆ ಮೇಲೆಯೇ ರಾಗಿ ಕಣ: ಜಾರಿಬಿದ್ದು ಸಾವನ್ನಪ್ಪಿದ ಬೈಕ್ ಸವಾರ, ಇನ್ನಾದ್ರು ಎಚ್ಚೆತ್ಕೊಳ್ಳಿ!
Follow us on

ಚಾಮರಾಜನಗರ: ರಸ್ತೆಯ ಮೇಲೆ ಹಾಕಿದ್ದ ರಾಗಿ ಹುಲ್ಲಿನಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿ ಬಳಿ ನಡೆದಿದೆ. ಅನಿಲ್ ಕುಮಾರ್ (45) ಮೃತ ಬೈಕ್ ಸವಾರ.

ಒಕ್ಕಣೆಗೆ ರಸ್ತೆ ಮೇಲೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಚಲಿಸುವಾಗ ನಿಯಂತ್ರಣ ತಪ್ಪಿ ಟೆಂಪೋಗೆ ಬೈಕ್ ಡಿಕ್ಕಿಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಅನಿಲ್ ಕುಮಾರ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓಮ್ನಿ ಸುಟ್ಟು ಹೋಗಿತ್ತು.. ಯಾಕೆ ಗೊತ್ತಾ!?
ಎರಡು ದಿನಗಳ ಹಿಂದೆಯಷ್ಟೇ ಮಾರುತಿ ಓಮ್ನಿ ಕಾರು ಹೊತ್ತಿ ಉರಿದಿತ್ತು. ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ರಸ್ತೆಯ ಮೇಲೆ ಹಾಕಿದ್ದ ಹುರುಳಿ ಸಿಪ್ಪೆಯಿಂದ ಕಾರಿನ ಎಂಜಿನ್​ ಹೀಟ್​ ಆಗಿ ಓಮ್ನಿ ಸುಟ್ಟು ಹೋಗಿತ್ತು. ರಸ್ತೆಯ ಮೇಲೆಯೇ ಹೀಗೆ ಕಣ ಹಾಕುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಹೀಗಾಗಿ ಇನ್ನಾದ್ರು ನಮ್ಮ ರೈತಾಪಿ ಜನ ಎಚ್ಚೆತ್ತುಕೊಳ್ಳಬೇಕಾಗಿದೆ.

Published On - 12:10 pm, Tue, 31 December 19