ಚಿಕ್ಕಬಳ್ಳಾಫುರ, ನ.6: ಎರಡು ವರ್ಷ ನಾಲ್ಕು ತಿಂಗಳ ಗಂಡು ಮಗುವನ್ನು ಅಪಹರಣ (Kidnap) ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನಡೆದಿದೆ. ಅಜ್ಜಿ ತಾತ ತಾಯಿಯ ಜೊತೆ ಅಮ್ಮಜಾನ್ ಬಾವಜಾನ್ ದರ್ಗಾಕ್ಕೆ ಆಗಮಿಸಿದ್ದ ವೇಳೆ ಕಿಡ್ನಾಪ್ ಮಾಡಲಾಗಿದೆ.
ನವೆಂಬರ್ 5 ರಂದು ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿಯ ಮಗು ಜಾವೀದ್ ತನ್ನ ಅಜ್ಜ, ಅಜ್ಜಿ ಮತ್ತು ತಾಯಿಯೊಂದಿಗೆ ಮುರುಗಮಲ್ಲ ದರ್ಗಾಕ್ಕೆ ಆಗಮಿಸಿದ್ದಾನೆ. ಮಧ್ಯಾಹ್ನ 3.22 ರ ಸಮಯದಲ್ಲಿ ದರ್ಗಾ ಒಳಗೆ ಹೋಗುತ್ತಿದ್ದಾಗ ಜನಸಂದಣಿ ನಡುವೆ ಮಗುವನ್ನು ಅಪಹರಣ ಮಾಡಲಾಗಿದೆ.
ಇದನ್ನೂ ಓದಿ: ರಾಂಚಿ: ಧೋನಿ ಹಣ ಹಂಚುತ್ತಿದ್ದಾರೆ ಎಂದು ನಂಬಿಸಿ ಕರೆದೊಯ್ದು, ತಾಯಿಯ ಪ್ರಜ್ಞೆ ತಪ್ಪಿಸಿ ಮಗುವಿನ ಅಪಹರಣ
ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪೋಷಕರು, ಮಗು ಪತ್ತೆ ಮಾಡಿಕೊಡುವಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ನಿನ್ನೆ ಮಧ್ಯಾಹ್ನ ಕಿಡ್ನಾಪ್ ಆಗಿದ್ದರೂ ಇದುವರೆಗೂ ಮಗುವಿನ ಸುಳಿವು ಇಲ್ಲ ಎಂದು ಮಗುವಿನ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ