TV9 Kannada Digital Impact: ಮನಿ ಡಬ್ಲಿಂಗ್ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಶಾಮೀಲು: ಸಾಲು ಸಾಲು ಮೂವರು ಪೊಲೀಸರು ಅಮಾನತು

| Updated By: ಸಾಧು ಶ್ರೀನಾಥ್​

Updated on: Aug 12, 2023 | 5:22 PM

ಇದು ಟಿವಿ9 ಕನ್ನಡ ಡಿಜಿಟಲ್‌ ವರದಿ ಫಲಶೃತಿ. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಕಾನ್​ಸ್ಟೇಬಲ್​​ಗಳು ಮತ್ತು ಒಬ್ಬ ಪೊಲೀಸ್​​ ಇನ್ಸ್​​ಪೆಕ್ಟರ್ ಅನ್ನು ಸೇವೆಯಿಂದ ಅಮಾನತು ಮಾಡಿ, ಮನೆಗೆ ಕಳಿಸಲಾಗಿದೆ.

TV9 Kannada Digital Impact: ಮನಿ ಡಬ್ಲಿಂಗ್ ಪ್ರಕರಣದಲ್ಲಿ ಬಾಗೇಪಲ್ಲಿ ಪೊಲೀಸರ ಶಾಮೀಲು: ಸಾಲು ಸಾಲು ಮೂವರು ಪೊಲೀಸರು ಅಮಾನತು
ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರು ಶಾಮೀಲು, ಅಮಾನತು
Follow us on

ಚಿಕ್ಕಬಳ್ಳಾಪುರ, ಆಗಸ್ಟ್​ 12: ಇದು ಟಿವಿ9 ಕನ್ನಡ ಡಿಜಿಟಲ್‌ ವರದಿ ಫಲಶೃತಿ. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಕಾನ್​ಸ್ಟೇಬಲ್​​ಗಳು ಮತ್ತು ಒಬ್ಬ ಪೊಲೀಸ್​​ ಇನ್ಸ್​​ಪೆಕ್ಟರ್ ಅನ್ನು ಸೇವೆಯಿಂದ ಅಮಾನತು ಮಾಡಿ, ಮನೆಗೆ ಕಳಿಸಲಾಗಿದೆ. ಬಾಗೇಪಲ್ಲಿ ಠಾಣೆಯ (Bagepalli police) ಗುಪ್ತವಾರ್ತೆ ಕಾನ್​ಸ್ಟೇಬಲ್​​ ನರಸಿಂಹಮೂರ್ತಿ, ಕಾನ್​ಸ್ಟೇಬಲ್​​ ಅಶೋಕ್ ಅವರನ್ನು ಅಮಾನತು ಮಾಡಿ (suspend) ಚಿಕ್ಕಬಳ್ಳಾಪುರ ಪೊಲೀಸ್ (Chikkaballapur police)​ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ ಇಂದು ಶನಿವಾರ ಆದೇಶ ಹೊರಡಿಸಿದ್ದಾರೆ.

ಇನ್ನು ಪೊಲೀಸ್ ಇನ್ಸ್​​ಪೆಕ್ಟರ್ ರವಿಕುಮಾರ್ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐ.ಜಿ.ಪಿ. ರವಿಕಾಂತೇ ಗೌಡ (B R Ravikanthe Gowda) ಆದೇಶ ಹೊರಡಿಸಿದ್ದಾರೆ. ರವಿಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹಾಗೂ ಚೇಳೂರು ಪೊಲೀಸ್ ಠಾಣೆಗಳ ಇನ್ಸ್​​ಪೆಕ್ಟರ್ ಆಗಿದ್ದರು. ಪ್ರಕರಣದಲ್ಲಿ ಪೊಲೀಸರ ಶಾಮೀಲು ಹಾಗೂ ಕರ್ತವ್ಯ ಲೋಪದ ಬಗ್ಗೆ ಟಿವಿ9 ಡಿಜಿಟಲ್ ಮೂರು ಸವಿಸ್ತಾರ, ಸಾಕ್ಷ್ಯ ಸಹಿತ ವರದಿಗಳನ್ನು ಪ್ರಕಟಿಸಿತ್ತು.

ಇದನ್ನೂ ಓದಿ: TV9 Digital ಫಲಶೃತಿ: ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ ಪಿಂಕ್ ಟು ಗ್ರೀನ್ ನೋಟ್ ಜಾಲದ ಪ್ರಕರಣ- ಕೊನೆಗೂ FIR ದಾಖಲು, ವಿವರ ಇಲ್ಲಿದೆ

ಬಾಗೇಪಲ್ಲಿ ಠಾಣೆ ವ್ಯಾಪ್ತಿಯಲ್ಲಿ ಪಿಂಕ್ ಟು ಗ್ರೀನ್ ನೋಟ್ ಜಾಲದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದ ಬಾಗೇಪಲ್ಲಿ ಪೊಲೀಸರ ವಿರುದ್ಧ ಲಂಚಾವತಾರ ಕೇಳಿಬಂದಿತ್ತು. 5 ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸದೇ ಮುಚ್ಚಿ ಹಾಕಲು ಯತ್ನಿಸಿದ್ದರು. ಸಾಕ್ಷ್ಯಾಧಾರಗಳ ಸಮೇತ TV9 Digital ಈ ಬಗ್ಗೆ ಆಗಸ್ಟ್ 8 ಹಾಗೂ 9 ರಂದು ವಿಸ್ತೃತವಾಗಿ ವರದಿ ಮಾಡಿತ್ತು.

ಚಿಕ್ಕಬಳ್ಳಾಪುರ ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 5:09 pm, Sat, 12 August 23