ಕ್ಷಣಕಾಲ ಆತಂಕ ಮೂಡಿಸಿದ ಸಿಎಂ ಬೊಮ್ಮಾಯಿ ಇದ್ದ ಹೆಲಿಕಾಪ್ಟರ್: ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​

|

Updated on: Mar 27, 2023 | 5:05 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (CM Basavaraj Bommai) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter)​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ. ಧೂಳಿನಿಂದ ಆಕಾಶ ಕಾಣಿಸದಂತಾದ ಹಿನ್ನಲೆ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್​ ನೋಡಿ ಆತಂಕಗೊಂಡ ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರು. ಆದರೆ, ಬಳಿಕ ಮತ್ತೊಮ್ಮೆ ಟೇಕ್ ಆಫ್​ ಆಗಿ ಹೆಲಿಕಾಪ್ಟರ್​ ಹಾರಾಟ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ. ಕೆ ಸುಧಾಕರ್​ ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ತೆರಳಲೆಂದು ಹೆಲಿಕಾಪ್ಟರ್​​ ಹತ್ತಿದ್ದರು. ಟೇಕ್​ ಆಫ್​ ಆಗುವ ವೇಳೆಗೆ, ಹೆಲಿಕಾಪಟ್ಟರ್​ ಪ್ಯಾನ್​​ ಗಾಳಿಯಿಂದ ದೂಳು ಎದ್ದಿದೆ. ಆಗ ಚಾಲಕನಿಗೆ ಆಕಾಶ ಕಾಣದ ಹಿನ್ನೆಲೆ ಮತ್ತೆ ಲ್ಯಾಂಡ್​ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ಕೂಡಲೆ ಸ್ಥಳಕ್ಕೆ ತೆರಳುವಷ್ಟರಲ್ಲಿ, ಹೆಲಿಕಾಪ್ಟರ್​ ಮತ್ತೆ ಟೇಕ್​ ಆಫ್​​ ಆಗಿ ಪ್ರಯಾಣ ಬೆಳಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:56 pm, Mon, 27 March 23