ಚಿಕ್ಕಮಗಳೂರು: ಹಣ ಡಬಲ್​​ ಮಾಡುವ ಆಸೆಗೆ ಬಿದ್ದು 91 ಲಕ್ಷ ಕಳೆದುಕೊಂಡ ಮಹಿಳೆ

ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಫೇಸ್ಬುಕ್ ನಲ್ಲಿ ಬಂದ ಜಾಹಿರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಕ್ಷಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ಹಣ ಇನ್ವೆಸ್ಟ್ ಮಾಡಿ ಡಬಲ್ ಪಡೆಯಿರಿ ಎಂದು ವಂಚಕರು ನಂಬಿಸಿ ಹಂತ ಹಂತವಾಗಿ 91 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ವಂಚನೆ ಮಾಡಿದ್ದಾರೆ.

ಚಿಕ್ಕಮಗಳೂರು: ಹಣ ಡಬಲ್​​ ಮಾಡುವ ಆಸೆಗೆ ಬಿದ್ದು 91 ಲಕ್ಷ ಕಳೆದುಕೊಂಡ ಮಹಿಳೆ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Oct 15, 2024 | 10:37 AM

ಚಿಕ್ಕಮಗಳೂರು, ಅ.15: ರಾಜ್ಯದಲ್ಲಿ ಸೈಬರ್ ಖದೀಮರ (Cyber Crime) ಕೈ ಚಳಕ ಮುಂದುವರೆದಿದೆ. ನೂರಾರು ಮಂದಿ ಅನ್​ಲೈನ್​ನಲ್ಲಿ ವಂಚನೆಗೆ (Online Fraud) ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಎಷ್ಟೇ ಜಾಗೃತಿ ಕಾರ್ಯಕ್ರಮಗಳು ನಡೆದರೂ ಸೈಬರ್ ಕ್ರೈಂ ಕಡಿಮೆ ಮಾಡಲು ಆಗುತ್ತಿಲ್ಲ. ಇದೀಗ ಚಿಕ್ಕಮಗಳೂರಿನಲ್ಲಿ (Chikkamagaluru) ಹಣ ಡಬಲ್ ಮಾಡುವ ಆಸೆಗೆ ಬಿದ್ದು ಮಹಿಳೆ 91 ಲಕ್ಷ ಹಣ ಕಳೆದುಕೊಂಡಿದ್ದಾರೆ. ಆನ್ ಲೈನ್ ವಂಚಕರ ಮಾತು ನಂಬಿ ಹಣ ಮಾಡುವ ಆಸೆಗೆ ಬಿದ್ದ ಮಹಿಳೆ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಫೇಸ್ಬುಕ್​ನಲ್ಲಿ ಬಂದ ಜಾಹಿರಾತು ನೋಡಿ ಹಣ ಡಬಲ್ ಮಾಡುವ ಆಸೆಗೆ ಬಿದ್ದ ಮಹಿಳೆ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್​ಗೆ ಹಣ ಹಾಕಿ ಕಂಗಾಲಾಗಿದ್ದಾರೆ. ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಫೇಸ್ಬುಕ್ ನಲ್ಲಿ ಬಂದ ಜಾಹಿರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಕ್ಷಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ಹಣ ಇನ್ವೆಸ್ಟ್ ಮಾಡಿ ಡಬಲ್ ಪಡೆಯಿರಿ ಎಂದು ಕರೆ ಬಂದಿದೆ. ಮಹಿಳೆಗೆ ವಂಚಕರು ತಮ್ಮ ಕಂಪನಿಯ ಮೂಲಕ ಹಣ ಹಾಕಿ ಡಬಲ್ ಪಡೆಯಿರಿ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಂತ ಹಂತವಾಗಿ ಹಣ ಕಳಿಸಿದ್ದಾರೆ. ಈ ಮೂಲಕ ಬರೋಬ್ಬರಿ 91 ಲಕ್ಷದ 4315 ಹಣವನ್ನು ವಂಚಕರಿಗೆ ಹಾಕಿ ಮಹಿಳೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ರಾಜ್ಯದ 8 ರೈಲುಗಳ ಸಂಚಾರ 1 ವಾರ ರದ್ದು

ಡಬಲ್ ಹಣ ಮಾಡುವ ಆಸೆಗೆ ಬಿದ್ದು 91 ಲಕ್ಷ ಹಣ ಕಳೆದುಕೊಂಡ ಮಹಿಳೆ ಇದೀಗ ಹಣ ವಾಪಸ್ ಕೊಡಿಸುವಂತೆ ದೂರು ಸಲ್ಲಿಸಿದ್ದಾರೆ. ವಂಚನೆಯ ಕುರಿತು ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ಪೊಲೀಸ್ ಇಲಾಖೆಯು ಆನ್ ಲೈನ್ ವಂಚಕರಿಂದ ದೂರ ಇರುವಂತೆ ಮನವಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಲಿಂಕ್ ಕ್ಲಿಕ್ ಮಾಡದಂತೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮಟೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಹಾಗೂ ಆನ್ಲೈನ್ ವಂಚನೆಯಾಗಿದ್ರೆ ದೂರು ನೀಡುವಂತೆ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:11 am, Tue, 15 October 24

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us