ಚಿಕ್ಕಮಗಳೂರು: ಬರಿದಾಗುತ್ತಿದೆ ತುಂಗಾ ನದಿ; ಶೃಂಗೇರಿ ಮಠಕ್ಕೂ ತಟ್ಟಲಿದೆ ನೀರಿನ ಬಿಸಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 13, 2024 | 8:49 PM

ಇಡೀ ರಾಜ್ಯವೇ ಹನಿ ನೀರಿಗೂ ಹಾಹಾಕಾರ ಪಡುತ್ತಿದೆ. ಇತ್ತ ಮಳೆಯ ನಾಡೆಂದೇ ಕರೆಸಿಕೊಳ್ಳೋ ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹುಟ್ಟಿ ಹರಿದು ಲಕ್ಷಾಂತರ ಜನರ ಜೀವನಾಡಿ ಎಂದು ಕರೆಸಿಕೊಳ್ಳುವ ತುಂಗಾ ನದಿ ಕೂಡ ಬರಿದಾಗಿದೆ. ಇದರ ಬಿಸಿ ಶೃಂಗೇರಿ ಮಠಕ್ಕೂ ತಟ್ಟಲಿದೆ. 

ಚಿಕ್ಕಮಗಳೂರು: ಬರಿದಾಗುತ್ತಿದೆ ತುಂಗಾ ನದಿ; ಶೃಂಗೇರಿ ಮಠಕ್ಕೂ ತಟ್ಟಲಿದೆ ನೀರಿನ ಬಿಸಿ
ಚಿಕ್ಕಮಗಳೂರು
Follow us on

ಚಿಕ್ಕಮಗಳೂರು, ಮಾ.13: ಈ ಬಾರಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬೇಸಿಗೆ ಆರಂಭದ ಜೊತೆ ಜೊತೆಗೇ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಶೃಂಗೇರಿ ಸೇರಿದಂತೆ ಲಕ್ಷಾಂತರ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡುವ ಆತಂಕ ಎದುರಾಗಿದೆ. ಅದರಲ್ಲೂ ಪ್ರತಿ ವರ್ಷ ಮಳೆಗಾಲದಲ್ಲಿ ಮೈದುಂಬಿ ಹರಿದು ಹಲವಾರು ಅವಾಂತರ ಸೃಷ್ಟಿಸುತ್ತಿದ್ದ ತುಂಗಾ‌ನದಿ ಹರಿವಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿ ಬತ್ತಿಹೋಗುತ್ತಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಆರಂಭದ ಕೆಲ ದಿನಗಳಲ್ಲಿ ಮಳೆ ಅಬ್ಬರಿಸಿ ಬೊಬಿರಿಯಿತಾದರೂ ಅಗತ್ಯ ಸಮಯದಲ್ಲಿ ಮಳೆ ಕೈಕೊಟ್ಟಿದೆ. ಇದ್ರಿಂದಾಗಿ ಮಲೆನಾಡಿನ ಶೃಂಗೇರಿ, ಎನ್.ಆರ್. ಪುರ, ಕೊಪ್ಪ ಭಾಗದಲ್ಲಿನ ಜಲ ಮೂಲಗಳೆಲ್ಲ ಸಂಪೂರ್ಣವಾಗಿ ಬರಿದಾಗುತ್ತಿವೆ. ಅದರ ಜೊತೆಗೆ ವರ್ಷಪೂರ್ತಿ ಮೈದುಂಬಿ ಹರಿಯುತ್ತಿದ್ದ ತುಂಗಾ ನದಿ ಕೂಡ ಬರಿದಾಗುತ್ತಿದ್ದು, ಇನ್ನೇನು ಕೆಲವೇ ದಿನದಲ್ಲಿ ಮಲೆನಾಡಿನಲ್ಲೂ ಜಲಕ್ಷಾಮ‌ ತಲೆದೋರಲಿದ್ದು. ಮಲೆನಾಡಿಗರೂ ಸಹಾ ಹನಿ‌ಹನಿ‌ ನೀರಿಗೂ ಹಾಹಾಕಾರ ಪಡೋ ಆತಂಕ ಎದುರಾಗಿದೆ.

ಇದನ್ನೂ ಓದಿ:ಬನ್ನೇರುಘಟ್ಟ ಉದ್ಯಾನವನದಲ್ಲೂ ನೀರಿಗಾಗಿ ಹಾಹಾಕಾರ: ಬತ್ತಿದ ಬೋರ್​​ವೆಲ್​ಗಳು, ಟ್ಯಾಂಕರ್​ ಮೂಲಕ ನೀರು ಪೂರೈಕೆ

ಶೃಂಗೇರಿ ಶ್ರೀ ಮಠ‌, ಶಾರದಾಂಬೆಯ ಸನ್ನಿದಿ ಸೇರಿದಂತೆ ಕೃಷಿ‌ ಹಾಗೂ ಲಕ್ಷಾಂತರ ಜನರ ಜೀವನಾಡಿಯಾಗಿರೋ ತುಂಗಾ‌ ನದಿ ವರ್ಷಪೂರ್ತಿ ಮೈದುಂಬಿ ಹರಿಯುತ್ತಿತ್ತು.. ಆದ್ರೆ ಈ ಬಾರಿ‌‌ ಸರಿಯಾಗಿ ಮಳೆಯಾಗದ ತುಂಗಾ ನದಿಯ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗ್ತಿದ್ದು. ಶೃಂಗೇರಿ‌ ಶ್ರೀ ಮಠಕ್ಕೂ ಕೂಡಾ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು. ಕಾಣಿಸಿಕೊಳ್ಳಲಾರಂಭಿಸಿವೆ. ಅಷ್ಟೇ ಅಲ್ಲದೆ ತುಂಗಾ ನದಿಯನ್ನೇ ಅವಲಂಬಿಸಿರೋ ರೈತರೂ ಕೂಡಾ ಬೇಸಿಗೆ ದಿನಗಳಲ್ಲಿ‌ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವ ಎದುರಾಗುವ ಲಕ್ಷಣಗಳು‌ ಕಂಡು ಬರುತ್ತಿವೆ.

V/3 :ಈ ಬಾರಿ ಮಳೆಯಾಗದೆ ಶೃಂಗೇರಿ ಮಠಕ್ಕೆ ಹರಿದುಬರೋ‌ ಲಕ್ಷಾಂತರ ಭಕ್ತರು, ಪ್ರವಾಸಿಗರ ಜೊತೆ ರೈತರು ಹಾಗೂ ಶ್ರೀ ಶೃಂಗೇರಿಯ ಶ್ರೀ ಮಠಕ್ಕೂ ಜಲಕ್ಷಾಮ ತಲೆದೋರೋ ಲಕ್ಷಣಗಳು ಕಂಡುಬರುತ್ತಿದೆ. ಒಟ್ಟಾರೆಯಾಗಿ ಈ ಬಾರಿ ವಾಡಿಕೆಯ ಮಳೆಯಾಗದೆ ತುಂಗಾ‌ನದಿಯ ಹರಿವಿನಲ್ಲಿ ಕಡಿಮೆಯಾಗ್ತಿರೋದ್ರಿಂದ ಕೇವಲ‌ ಚಿಕ್ಕಮಗಳೂರು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ನೀರಿನ ಅಭಾವ ಸೃಷ್ಟಿಯಾಗೋ ಆತಂಕ‌ ಎದುರಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ