ಚಿಕ್ಕಮಗಳೂರು: ಕೊರೊನಾ ಕ್ರಿಮಿಯ ಎಫೆಕ್ಟ್ನಿಂದ ದೇವಸ್ಥಾನಗಳಲ್ಲಿ ಪೂಜೆಗೆ ಬ್ರೇಕ್ ಹಾಕಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆನ್ಲೈನ್ ಮೂಲಕವೇ ದೇವರ ಮೊರೆ ಹೋಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗನಿಗೆ ಆನ್ಲೈನ್ ಮೂಲಕವೇ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ.
ಇಷ್ಟ ದೇವತೆ ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಮುಕ್ತಿಗೆ ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಋಷ್ಯಶೃಂಗನಿಗೆ ಆನ್ಲೈನ್ ಅಕೌಂಟ್ ಮೂಲಕವೇ ಹಣ ಪಾವತಿಸಿದ್ದಾರೆ. ಕಾಂಗ್ರೆಸ್ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ನೇತೃತ್ವದಲ್ಲಿ 101 ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ.
Published On - 4:46 pm, Fri, 15 May 20