ಯಡಿಯೂರಪ್ಪ ವಾಯ್ಸ್ ರಿಮೇಕ್ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ: ಚಿಕ್ಕಮಗಳೂರಿನಲ್ಲಿ ದೂರು ದಾಖಲು

ಹಣವನ್ನ ಎಲ್ಲಿಂದ ತರಲಿ, ಚುನಾವಣೆಗೋಸ್ಕರ ಹೇಳಿರುತ್ತೇವೆ, ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ ಎಂದು ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಸಿದ್ದರಾಮಯ್ಯ ಸ್ವರ ಅಲ್ಲ, ಯಡಿಯೂರಪ್ಪ ಅವರ ಧ್ವನಿಯನ್ನು ರಿಮೇಕ್ ಮಾಡಿ ಹರಿಬಿಡಲಾಗಿದೆ ಎಂದು ಆರೋಪಿಸಿ ಯುವಕನ ವಿರುದ್ಧ ಚಿಕ್ಕಮಗಳೂರು ಕಾಂಗ್ರೆಸ್ ದೂರು ನೀಡಿದೆ.

ಯಡಿಯೂರಪ್ಪ ವಾಯ್ಸ್ ರಿಮೇಕ್ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ: ಚಿಕ್ಕಮಗಳೂರಿನಲ್ಲಿ ದೂರು ದಾಖಲು
ಯಡಿಯೂರಪ್ಪ ವಾಯ್ಸ್ ರಿಮೇಕ್ ಮಾಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಆರೋಪ; ಚಿಕ್ಕಮಗಳೂರಿನಲ್ಲಿ ದೂರು ದಾಖಲು
Image Credit source: IANS
Edited By:

Updated on: Dec 19, 2023 | 12:14 PM

ಚಿಕ್ಕಮಗಳೂರು, ಡಿ.19: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಅಪಪ್ರಚಾರ ಮಾಡಿದ ಆರೋಪ ಸಂಬಂಧ ಯುವಕನ ವಿರುದ್ಧ ಚಿಕ್ಕಮಗಳೂರು (Chikkamagaluru) ಯೂತ್ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದು, ಎನ್​ಆರ್​ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಧ್ವನಿಯನ್ನು ರಿಮೇಕ್ ಮಾಡಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹಣವನ್ನ ಎಲ್ಲಿಂದ ತರಲಿ, ಚುನಾವಣೆಗೋಸ್ಕರ ಹೇಳಿರುತ್ತೇವೆ. ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ ಎಂದು ಸಿದ್ದರಾಮಯ್ಯ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು 2009ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದ ಮಾತಾಗಿದ್ದು, ಇದನ್ನು ಸಿದ್ದರಾಮಯ್ಯ ಹೇಳಿದಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಮುಸಲ್ಮಾನರೇ, ವಿವಾದತ್ಮಕ ಹೇಳಿಕೆ ನೀಡಿದ ಈಶ್ವರಪ್ಪ!

ಸಿದ್ದರಾಮಯ್ಯ ವೈರಲ್ ವಿಡಿಯೋ ಸಂಬಂಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶರತ್ ಗೌಡ ಎಂಬುವರ ವಿರುದ್ಧ ದೂರು ನೀಡಿದ್ದು, ಎನ್​ಆರ್​ ಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ