ಲೈಂಗಿಕ ದೌರ್ಜನ್ಯಕ್ಕೆ ಸಹಕಾರ: ಮುರುಘಾ ಮಠದ ವಾರ್ಡನ್ ರಶ್ಮಿಗೆ ಜಾಮೀನು

ಚಿತ್ರದುರ್ಗ ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಗೆ ಹೈಕೋರ್ಟ್‌ನ ನ್ಯಾ.ಮೊಹಮ್ಮದ್ ನವಾಜ್‌ರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಸ್ವಾಮೀಜಿ ಕೃತ್ಯಕ್ಕೆ ಲೇಡಿ ವಾರ್ಡನ್ ಸಾಥ್ ನೀಡುತ್ತಿದ್ದರು ಅನ್ನುವ ಅಂಶವನ್ನ ಬಾಲಕಿಯರು ಪೊಲೀಸರ ಎದುರು ತಿಳಿಸಿದ್ದರು.

ಲೈಂಗಿಕ ದೌರ್ಜನ್ಯಕ್ಕೆ ಸಹಕಾರ: ಮುರುಘಾ ಮಠದ ವಾರ್ಡನ್ ರಶ್ಮಿಗೆ ಜಾಮೀನು
ಲೇಡಿ ವಾರ್ಡನ್ ರಶ್ಮಿ
Edited By:

Updated on: Dec 21, 2023 | 4:15 PM

ಚಿತ್ರದುರ್ಗ, ಡಿಸೆಂಬರ್​ 21: ಚಿತ್ರದುರ್ಗ ಮುರುಘಾಶ್ರೀ (Muruga shree) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿಗೆ ಹೈಕೋರ್ಟ್‌ನ ನ್ಯಾ.ಮೊಹಮ್ಮದ್ ನವಾಜ್‌ರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿದ್ದರು.

ಚಾರ್ಜ್​ಶೀಟ್​​ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್ ವಿರುದ್ಧ, ಬೆಚ್ಚಿ ಬೀಳಿಸುವ ಆರೋಪಗಳು ಮಾಡಲಾಗಿತ್ತು. ಈ ಪೈಕಿ, ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್​ ಮಾಡುತ್ತಿದ್ದಳು.

ಇದನ್ನೂ ಓದಿ: ಮುರುಘಾ ಮಠದ ಎಸ್​ಜೆಎಂ ವಿದ್ಯಾಪೀಠದ ಸಿಇಒಗೆ ಗೇಟ್​ಪಾಸ್​: ಮುರುಘಾ ಶ್ರೀ ಆದೇಶ

ಯಾರನ್ನ ಕಳಿಸಬೇಕು, ಯಾವಾಗ ಕಳಿಸಬೇಕು,  ಹೇಗೆ ಕಳಿಸಬೇಕು ಅನ್ನುವ ಎಲ್ಲ ವಿಚಾರವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದಳು. ಇದಕ್ಕೆ ತಿರುಗಿ ಬೀಳುವ ಬಾಲಕಿಯರ ಮೇಲೆ, ಇಲ್ಲದ ನೆಪವೊಡ್ಡಿ ಶಿಕ್ಷೆಯನ್ನೂ ನೀಡುತ್ತಿದ್ದಳು ಅನ್ನುವ ಸಂಗತಿಯನ್ನ ಬಾಲಕಿಯರು ಹೇಳಿದ್ದರು.

ಮುರುಘಾಶ್ರೀ ವಿರುದ್ಧದ ಫೋಕ್ಸೋ ಪ್ರಕರಣದಲ್ಲಿ, ಸ್ವಾಮೀಜಿ ಕೃತ್ಯಕ್ಕೆ ಲೇಡಿ ವಾರ್ಡನ್ ಸಾಥ್ ನೀಡುತ್ತಿದ್ದರು ಅನ್ನುವ ಅಂಶವನ್ನ ಬಾಲಕಿಯರು ಪೊಲೀಸರ ಎದುರು ತಿಳಿಸಿದ್ದರು. ಇಲ್ಲಿ, ಶ್ರೀಗಳ ಬಳಿಗೆ ಕಳುಹಿಸಲು ಬಾಲಕಿಯರನ್ನ ಲೇಡಿ ವಾರ್ಡನ್ ಆಯ್ಕೆ ಮಾಡುತ್ತಿದ್ದಳು. ಬಡತನ, ತಂದೆ ತಾಯಿ ಇಲ್ಲದ ಬಾಲಕಿಯರನ್ನೇ ಈ ಕೃತ್ಯಕ್ಕೆ ಆಯ್ಕೆ ಮಾಡುತ್ತಿದ್ರಂತೆ.

ಇದನ್ನೂ ಓದಿ: ಮುರುಘಾಶ್ರೀ ಕೈಗೆ ಮರಳಿದ ಮುರುಘಾಮಠದ ಅಧಿಕಾರ

ಆರೋಪಿ ನಂಬರ್​ 1 ಅಂದರೆ ಮುರುಘಾ ಶ್ರೀ ಖಾಸಗಿ ಕೋಣೆಗೆ ಆರೋಪಿ ನಂಬರ್​ 2 ಹಾಸ್ಟೆಲ್​ ಲೇಡಿ ವಾರ್ಡನ್​ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದರು. ಇದಕ್ಕೆ ಪೂರಕವಾದ ಸಾಕ್ಷ್ಯಧಾರಗಳು ಲಭಿಸಿವೆ ಎಂದು ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಸತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದರು.

ಹೊರಗಿದ್ದುಕೊಂಡೇ ಮಠದ ಆಡಳಿತ

ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಮುರುಘಾಶ್ರೀಗೆ ಹೈಕೋರ್ಟ್ ಷರತ್ತು ನೀಡಿದ ಹಿನ್ನಲೆ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮುರುಘಾ ಶ್ರೀಗಳು ಮಠದ ಆಡಳಿತವನ್ನು ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:58 pm, Thu, 21 December 23