ಆರು ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಚಿತ್ರಹಳ್ಳಿ ಪೊಲೀಸರು; ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳು ವಶಕ್ಕೆ

| Updated By: Rakesh Nayak Manchi

Updated on: Nov 11, 2023 | 9:05 PM

ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿ ಠಾಣೆ ಪೊಲೀಸುರು ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿ ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರು ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಚಿತ್ರಹಳ್ಳಿ ಪೊಲೀಸರು; ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳು ವಶಕ್ಕೆ
ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿದ ಪೊಲೀಸರು ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳನ್ನು ವಶಕ್ಕೆ ಪಡೆದಿದ್ದಾರೆ
Follow us on

ಚಿತ್ರದುರ್ಗ, ನ.11: ಜಿಲ್ಲೆಯ (Chitradurga) ಚಿತ್ರಹಳ್ಳಿ ಠಾಣೆ ಪೊಲೀಸುರು ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿ ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್​ಪಿ ಧರ್ಮೇಂದರ್ ಕುಮಾರ್ ಮೀನಾ, ಆರು ಮಂದಿ ಅಂತಾರಾಜ್ಯ ಶ್ರೀಗಂಧ ಕಳ್ಳರನ್ನು ಬಂಧಿಸಿ 91 ಕೆ.ಜಿ. 300 ಗ್ರಾಂ ಶ್ರೀಗಂಧ, 15 ಕೆ.ಜಿ. 500 ಗ್ರಾಂ ರಕ್ತ ಚಂದನ, 25 ಕೆ.ಜಿ. 400 ಗ್ರಾಂ ತೂಕದ 2 ಆನೆ ದಂತಗಳು, 34 ಕೆ.ಜಿ. 100 ಗ್ರಾಂ ಪೆಂಗೋಲಿನ್ ಚಿಪ್ಪುಗಳು, 1 ಲಕ್ಷ 10 ಸಾವಿರ ನಗದು, 2 ಕಾರು, 9 ಮೊಬೈಲ್ ಸೇರಿದಂತೆ ಇತರೆ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ ಎಂದರು.

ರಿಸಿವರ್ ತರಿಕೆರೆ ಮೂಲದ ಚಂದ್ರಶೇಖರ್ ಅಲಿಯಾಸ್ ಬೋಟಿ ಚಂದ್ರ, ಶ್ರೀಗಂಧ ಕಟಾವು ಮಾಡುತ್ತಿದ್ದ ಆಂದ್ರ ಮೂಲದ ಖಲೀಲ್, ಮಾಹಿತಿದಾರರಾದ ಹೊಸದುರ್ಗ ಮೂಲದ ಪ್ರಶಾಂತ್, ರಂಗಸ್ವಾಮಿ, ಕಡೂರ್ ಮೂಲದ ಪುನಿತ್ ನಾಯ್ಕ್, ರಾಮಾ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಚಿನ್ನ ಖರೀದಿಸುವ ಸೋಗಿನಲ್ಲಿ ಬಾಲಕನ ಜೊತೆ ಬಂದು ಕಳ್ಳಿಯ ಕೈಚಳಕ, ವಿಡಿಯೋ ವೈರಲ್

ಶ್ರೀಗಂಧ ಕಳ್ಳರ ಗ್ಯಾಂಗ್ ಜೊತೆ ಇನ್ನಷ್ಟು ಜನರಿದ್ದಾರೆ. ಪೊಲೀಸ್ ತನಿಖೆ ಮೂಲಕ ಜಾಲ ಬೇಧಿಸಿ ಉಳಿದವರನ್ನು ಬಂಧಿಸಲಾಗುವುದು. ವಶಕ್ಕೆ ಪಡೆದ ವಸ್ತುಗಳನ್ನು ಎಲ್ಲಿಂದ ತಂದಿದ್ದರು, ಯಾರಿಗೆ ಕೊಡುತ್ತಿದ್ದರೆಂಬುದು ತಿಳಿಯಬೇಕಿದೆ. ಶ್ರೀಗಂಧ ಕಳ್ಳತನದ ಬಗ್ಗೆ ಕೆಲವು ರೈತರಿಂದ ದೂರುಗಳು ಬಂದ ಹಿನ್ನೆಲೆ ಪರಿಶೀಲನೆ ನಡೆಸಲಾಗುವುದು ಎಂದರು.

ಪೊಲೀಸರು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಪವಾಗಿ ಸಂಚರಿಸುತ್ತಿದ್ದ ವಾಹನವನ್ನು ತಡೆದು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಳಿಯ ಮನೆಯಲ್ಲಿ ಅಕ್ರಮ ಮಾಲುಗಳು ಪತ್ತೆಯಾಗಿವೆ ಎಂದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ