ಚಿತ್ರದುರ್ಗ: ಒಂದು ಸಣ್ಣ ಮುಳ್ಳು ಚುಚ್ಚಿದ್ರೆ ತಡೆದುಕೊಳ್ಳಲು ಆಗುವುದಿಲ್ಲ. ಆದ್ರೆ, ಅಲ್ಲಿ ಮಾತ್ರ ಮುಳ್ಳಿನ ರಾಶಿಯ ಮೇಲೆ ಕುಣಿದಾಡುವ ವಿಶಿಷ್ಟ ಆಚರಣೆ ಇಂದಿಗೂ ಜೀವಂತವಾಗಿದೆ. ವಿಶೇಷ ಅಂದ್ರೆ ಅಲ್ಲಿ ಮುಳ್ಳಿನಿಂದಲೇ ದೇಗುಲ ನಿರ್ಮಾಣವಾಗಿದೆ. ಅಪರೂಪದ ಬುಡಕಟ್ಟು ಉತ್ಸವಕ್ಕೆ ಕೋಟೆನಾಡು ಸಜ್ಜಾಗಿದೆ.
ಮುಳ್ಳಿನಿಂದ ಗುಡಿ. ಮುಳ್ಳುಗಿಡದಿಂದಲೇ ಗೋಪುರ. ಮುಳ್ಳುಗಿಡದಿಂದಲೇ ನಿರ್ಮಾಣವಾದ ದೇಗುಲದ ಮೇಲೆ ಕಳಶ ಪ್ರತಿಷ್ಟಾಪನೆ. ಮುಳ್ಳಿನಲ್ಲೇ ನಡೆದಾಡುತ್ತಿದ್ರೂ ನೋವಿಲ್ಲ. ಮುಳ್ಳಿನ ರಾಶಿಯ ಮೇಲೆ ಹತ್ತಿ ಇಳಿಯುತ್ತಿದ್ರೂ ಕಿಚ್ಚಿಂತು ಅಳುಕುತ್ತಿಲ್ಲ. ಅಷ್ಟಕ್ಕೂ ಇದು ಬುಡಕಟ್ಟು ಸಮುದಾಯದ ವಿಶಿಷ್ಟ ಸಂಸ್ಕೃತಿಯ ಅನಾವರಣ.
ಮುಳ್ಳು ಗಿಡದಿಂದಲೇ ದೇಗುಲ ನಿರ್ಮಾಣ!
ಇನ್ನು 13ಗುಡಿಕಟ್ಟು ಸಮುದಾಯದವ್ರು ತಿಂಗಳ ಕಾಲ ‘ನವಣೆ’ ವೃತ ಆಚರಿಸುತ್ತಾರೆ. ಈ ನವಣೆ ವೃತ ಹಿಂದೆ ದೊಡ್ಡ ಕತೆ ಇದೆ. ಈ ಸಮಯದಲ್ಲಿ ಈ ಸಮುದಾಯದವರು ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳು ಕಾಲ ಸೇವಿಸುವುದಿಲ್ಲ. ಎಷ್ಟು ಕಟ್ಟು ನಿಟ್ಟು ಅಂದ್ರೆ ನವಣೆ ಬೆಳೆದ ಹೊಲದಲ್ಲೇ ಹೋಗಲ್ವಂತೆ. ಹೀಗೆ ಮುಳ್ಳಿನಿಂದಲೇ ನಿರ್ಮಾಣವಾಗಿರೋ ದೇಗುಲದ ಮೇಲಿನ ಕಳಶವನ್ನ ಜನವರಿ 13 ರಂದು ಕೆಳಗಿಳಿಸಲಾಗುತ್ತೆ. ಬರಿಗಾಲಿನಲ್ಲಿ, ಬರಿಮೈಯಲ್ಲಿ ಮುಳ್ಳಿನ ದೇಗುಲ ಏರಿ ಕಳಶ ಇಳಿಸುವುದೇ ಒಂದು ರೋಚಕ. ಆ ಕೆಲಸವನ್ನ ಈರಗಾರರ ವಂಶಸ್ಥರು ಮಾಡ್ತಾರೆ.
ಒಟ್ನಲ್ಲಿ ಆಧುನಿಕತೆಯ ಭರಾಟೆಯ ನಡುವೆಯೂ ಕೋಟೆನಾಡಿನಲ್ಲಿ ಇಂದಿಗೂ ಹಳೇಯ ಆಚರಣೆಗಳನ್ನ ಜೀವಂತವಾಗಿ ಇಟ್ಟುಕೊಳ್ಳಲಾಗಿದೆ. ಆ ಮೂಲಕ ತಮ್ಮ ವಿಶಿಷ್ಟ ಸಂಸ್ಕೃತಿಯನ್ನ ಉಳಿಸಿಕೊಂಡಿದ್ದಾರೆ.
Published On - 7:33 am, Thu, 9 January 20