ಬೆಂಗಳೂರಿಗೆ ಬೈಬೈ ಹೇಳಿ ತವರಿಗೆ ಮರಳಿದ ಜನ; ಕಲಬುರಗಿಯಲ್ಲಿ ಹೆಚ್ಚಾದ ಕೊರೊನಾ ಭೀತಿ

|

Updated on: Apr 27, 2021 | 8:09 AM

ದೇಶದಲ್ಲಿ ಕೊರೊನಾಗೆ ಮೊದಲು ಬಲಿಯಾಗಿದ್ದು ಕಲಬುರಗಿ ನಗರದ ವೃದ್ದ. 2020 ಮಾರ್ಚ್ 10 ರಂದು ಕೊರೊನಾ ಸೋಂಕಿನಿಂದ ವೃದ್ದ ಮೃತಪಟ್ಟಿದ್ದ. ಆದಾದ ಮೇಲೂ ಕಲಬುರಗಿ ನಗರದಲ್ಲಿ ಸೋಂಕಿತರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿತ್ತು.

ಬೆಂಗಳೂರಿಗೆ ಬೈಬೈ ಹೇಳಿ ತವರಿಗೆ ಮರಳಿದ ಜನ; ಕಲಬುರಗಿಯಲ್ಲಿ ಹೆಚ್ಚಾದ ಕೊರೊನಾ ಭೀತಿ
ಕಲಬುರಗಿಗೆ ಆಗಮಿಸುತ್ತಿರುವ ಜನ
Follow us on

ಕಲಬುರಗಿ: ಕೆಟ್ಟು ಪಟ್ಟಣ ಸೇರು ಎನ್ನುವ ಮಾತಿದೆ. ಆದರೆ ಇದೀಗ ಪಟ್ಟಣದ ಸಹವಾಸವೇ ಸಾಕು. ಅದರಲ್ಲೂ ಬೆಂಗಳೂರಿನ ಸಹವಾಸವೇ ಸಾಕು ಅಂತಿದ್ದಾರೆ ಹಳ್ಳಿಯ ಜನರು. ರಾಜ್ಯದಲ್ಲಿ ಇಂದು (ಏಪ್ರಿಲ್ 27) ರಾತ್ರಿ 9 ಗಂಟೆಯಿಂದ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. ಇದರ ನಡುವೆ ಬೆಂಗಳೂರಿನಲ್ಲಿದ್ದ ಜನರು ಇದೀಗ ರಾಜಧಾನಿಗೆ ಬೈಬೈ ಹೇಳಿ ಮತ್ತೆ ತಮ್ಮೂರಿಗೆ ಮರಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರಿಗೆ ಬೆಂಗಳೂರಿನಲ್ಲಿದ್ದವರು ಮರಳಿ ಊರಿಗೆ ಬರುತ್ತಿರುವುದು ಭಯ ಹೆಚ್ಚಿಸಿದೆ. ಬೆಂಗಳೂರಿನಲ್ಲಿದ್ದವರು ಹಳ್ಳಿಗೆ ಕೊರೊನಾ ಸೋಂಕು ತಂದಾರು ಎನ್ನುವ ಭೀತಿ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ.

ಗ್ರಾಮೀಣ ಜನರ ಆತಂಕಕ್ಕೆ ಕಾರಣವೇನು?
ದೇಶದಲ್ಲಿ ಕೊರೊನಾಗೆ ಮೊದಲು ಬಲಿಯಾಗಿದ್ದು ಕಲಬುರಗಿ ನಗರದ ವೃದ್ದ. 2020 ಮಾರ್ಚ್ 10 ರಂದು ಕೊರೊನಾ ಸೋಂಕಿನಿಂದ ವೃದ್ದ ಮೃತಪಟ್ಟಿದ್ದ. ಆದಾದ ಮೇಲೂ ಕಲಬುರಗಿ ನಗರದಲ್ಲಿ ಸೋಂಕಿತರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿತ್ತು. ಆದರೆ ಯಾವಾಗ ಮಹಾರಾಷ್ಟ್ರ ಮತ್ತು ಬೆಂಗಳೂರಿಗೆ ಕೆಲಸ ಹರಸಿ ಗುಳೆ ಹೋಗಿದ್ದವರು, ಮರಳಿ ಜಿಲ್ಲೆಗೆ ಬರಲು ಪ್ರಾರಂಭವಾದರೋ ಆವಾಗಿನಿಂದ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿತ್ತು. ಪ್ರತಿನಿತ್ಯ ಒಬ್ಬಿಬ್ಬರಲ್ಲಿ ಸೋಂಕು ಪತ್ತೆಯಾಗುತ್ತಿದ್ದರೆ, ಬೆಂಗಳೂರು, ಮಹಾರಾಷ್ಟ್ರದಿಂದ ಜನರು ಬಂದ ಮೇಲೆ ಜಿಲ್ಲೆಯಲ್ಲಿ ಪ್ರತಿನಿತ್ಯ ನೂರರಿಂದ ಇನ್ನೂರು ಜನರಿಗೆ ಸೋಂಕಿತರು ಪತ್ತೆಯಾಗಿದ್ದರು. ಕಲಬುರಗಿ ಕೊರೊನಾದ ಹಾಟ್ಸ್ಪಾಟ್ ಜಿಲ್ಲೆಯಾಗಿತ್ತು. ಗ್ರಾಮೀಣ ಭಾಗದಲ್ಲಿ ಕೂಡಾ ಸೋಂಕು ದೊಡ್ಡಮಟ್ಟದಲ್ಲಿ ಹಬ್ಬಿತ್ತು. ಇದೀಗ ಮತ್ತೆ ಇದೇ ಭಯ ಗ್ರಾಮೀಣ ಭಾಗದ ಜನರನ್ನು ಕಾಡುತ್ತಿದೆ.

ಈ ಮೊದಲು ಬೆಂಗಳೂರು ಮತ್ತು ಮಹಾರಾಷ್ಟ್ರದಿಂದ ಬರುವ ಜನರನ್ನು ಮೊದಲು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗುತ್ತಿತ್ತು. ಕ್ವಾರಂಟೈನ್ ಅವಧಿ ಮುಗಿಸಿದವರನ್ನು ಮಾತ್ರ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ ಈ ಭಾರಿ ಯಾವುದೇ ಕ್ವಾರಂಟೈನ್ ಇಲ್ಲ. ಹೀಗಾಗಿ ನೇರವಾಗಿ ಮನೆಗೆ ಬಂದು ಸೇರಿಕೊಳ್ಳುತ್ತಾರೆ. ಮನೆಯಲ್ಲಿ ಕೂಡಾ ಸುಮ್ಮನಿರದೇ ಇಡೀ ಊರನ್ನೆ ಅಡ್ಡಾಡುತ್ತಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುವ ಆತಂಕ ಜನರನ್ನು ಕಾಡುತ್ತಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಶಹಬಾದ್, ಕಮಲಾಪುರ, ಜೇವರ್ಗಿ ತಾಲೂಕಿನ ಸಾವಿರಾರು ಜನರು ಬೆಂಗಳೂರಿನಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಬೆಂಗಳೂರು ಬಿಟ್ಟು ತಮ್ಮೂರಿನತ್ತ ಬರುತ್ತಿದ್ದಾರೆ. ಇನ್ನು ಕೆಲವರು ಬೆಂಗಳೂರಿನಲ್ಲಿಯೇ ಇದ್ದರು. ಆದರೆ ಲಾಕ್​ಡೌನ್ ಆದರೆ ಕಳೆದ ವರ್ಷದಂತೆ ಮತ್ತೆ ನಾವು ಬೆಂಗಳೂರಿನಲ್ಲಿಯೇ ಸಿಕ್ಕಿಕೊಳ್ಳುತ್ತೇವೆ. ಊಟಕ್ಕೂ ಕೂಡಾ ಪರದಾಡಬೇಕಾಗುತ್ತದೆ. ಹೀಗಾಗಿ ಲಾಕ್​ಡೌನ್ ಮೊದಲೇ ಊರು ಸೇರೋಣಾ ಅಂತ ಈ ಮೊದಲೆ ಅನೇಕರು ಮತ್ತೆ ಮರಳಿ ತಮ್ಮೂರಿನತ್ತ ಮುಖ ಮಾಡಿದ್ದರು.

ನಗರದಲ್ಲೇ ಹೆಚ್ಚು
ಇಲ್ಲಿವರಗೆ ಕಲಬುರಗಿ ಜಿಲ್ಲೆಯಲ್ಲಿ 34,454 ಜನರಿಗೆ ಸೋಂಕು ತಗುಲಿದೆ. ಅದರ ಪೈಕಿ ಅರ್ಧಕ್ಕೂ ಹೆಚ್ಚು ಸೋಂಕಿತರು ಇರುವುದು ಕಲಬುರಗಿ ನಗರದಲ್ಲಿ. ಉಳಿದವರು ಗ್ರಾಮೀಣ ಭಾಗದಲ್ಲಿದ್ದವರಿಗೆ ಸೋಂಕು ತಗುಲಿತ್ತು. ಅದು ಕೂಡಾ ಮಹಾರಾಷ್ಟ್ರ ಮತ್ತು ಬೆಂಗಳೂರಿನಿಂದ ಬಂದವರೇ ಹೆಚ್ಚು ಸೋಂಕಿತರಾಗಿದ್ದರು. ಇದೀಗ ಎರನಡೇ ಅಲೆ ಕೂಡಾ ಗ್ರಾಮೀಣ ಭಾಗದಲ್ಲಿ ಕಾಲಿಡುತ್ತಿದೆ. ಇದೀಗ ಮತ್ತೆ ಮಹಾರಾಷ್ಟ್ರ ಮತ್ತು ಬೆಂಗಳೂರಿನಿಂದ ಜನರು ಬರುತ್ತಿರುವುದರಿಂದ ಎರಡನೇ ಅಲೆ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಅನಾಹುತವನ್ನು ಸೃಷ್ಟಿಸುವ ಭೀತಿ ಎದುರಾಗಿದೆ.

ಅನೇಕರು ಹಳ್ಳಿಯನ್ನು ಬಿಟ್ಟು ಬೆಂಗಳೂರು ಸೇರಿದ್ದರು. ಆದರೆ ಇದೀಗ ಬೆಂಗಳೂರು ಬಿಟ್ಟು ಹಳ್ಳಿಗೆ ಬರುತ್ತಿದ್ದಾರೆ. ನಮ್ಮೂರಿನ ಜನರು ನಮ್ಮೂರಿಗೆ ಬರುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಬೆಂಗಳೂರಿನಿಂದ ಸೋಂಕು ಹೊತ್ತು ತಂದರೆ ಗ್ರಾಮೀಣ ಭಾಗದಲ್ಲಿ ಅಲ್ಲೋಲ ಕಲ್ಲೋಲವಾಗುವುದು ಗ್ಯಾರಂಟಿ. ಹೀಗಾಗಿ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಇದ್ದವರು ಊರಿಗೆ ಬಂದರೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಬೆಂಗಳೂರು ಬಿಟ್ಟು ಬರುವವರು ಈ ಬಗ್ಗೆ ಚಿಂತನೆ ಮಾಡಬೇಕಿದೆ. ಸೋಂಕಿನ ಲಕ್ಷಣಗಳು ಇದ್ದರೆ, ಸೋಂಕಿತರಿದ್ದರೆ ಹಳ್ಳಿಗೆ ಬರುವುದು ಬೇಡ ಎಂದು ಗ್ರಾಮಸ್ಥ ಪರಮೇಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂ​ಆರ್

ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ

(coronavirus on the rise and people moving from Bangalore to Kalaburagi)