AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂ​ಆರ್

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ಡಾ ವಿಕೆ ಪಾಲ್ ಅವರು, ಕೇವಲ ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜನ ಮನೆಯಿಂದ ಆಚೆ-ಅದೂ ಮಾಸ್ಕ ಧರಿಸಿಯೇ ಬರಬೇಕು ಅಂತ ಆಗ್ರಹಿಸಿದರಲ್ಲದೆ ಹೊರಗಿನವರನ್ನು ಮನೆಯೊಳಗೆ ಆಹ್ವಾನಿಸದಿರುವಂತೆ ತಾಕೀತು ಮಾಡಿದರು.

ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂ​ಆರ್
ಪ್ರಾತಿನಿಧಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Apr 26, 2021 | 11:33 PM

Share

ನವದೆಹಲಿ: ದೈಹಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಕೊವಿಡ್-19 ರೋಗ ಹರಡುವ ಸಾರ್ಸ್-ಕೊವಿ-2 ವೈರಸ್​ನಿಂದ ಸೋಂಕಿತನಾಗಿರುವ ವ್ಯಕ್ತಿಯೊಬ್ಬ 30 ದಿನಗಳ ಅವಧಿಯಲ್ಲಿ 406 ಜನರಿಗೆ ಸೋಂಕನ್ನು ಹರಡಬಲ್ಲನೆಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರದಂದು ಹೇಳಿದೆ. ಅಧಿಕೃತ ಸುದ್ದಿಗೋಷ್ಟಿಯೊಂದರಲ್ಲಿ ಇಲಾಖೆಯ ಅಧಿಕಾರಿಯೊಬ್ಬರು ಕೊವಿಡ್-19 ಸೋಂಕಿನ ವಿದ್ಯಮಾನಗಳು, ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವಾಗ, ‘ಸೂಕ್ತವಾಗಿ ದೈಹಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಒಬ್ಬ ಸೋಂಕಿತ 406 ಜನರಿಗೆ ರೋಗ ಹರಡಬಲ್ಲ ಎನ್ನುವುದು ಸಂಶೋಧನೆಯ ಮೂಲಕ ಧೃಡಪಟ್ಟಿದೆ’ ಅಂತ ಹೇಳಿದರು.

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ಡಾ ವಿಕೆ ಪಾಲ್ ಅವರು, ಕೇವಲ ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜನ ಮನೆಯಿಂದ ಆಚೆ-ಅದೂ ಮಾಸ್ಕ ಧರಿಸಿಯೇ ಬರಬೇಕು ಅಂತ ಆಗ್ರಹಿಸಿದರಲ್ಲದೆ ಹೊರಗಿನವರನ್ನು ಮನೆಯೊಳಗೆ ಆಹ್ವಾನಿಸದಿರುವಂತೆ ತಾಕೀತು ಮಾಡಿದರು.

‘ಈಗಿನ ಕೊವಿಡ್-19 ಸ್ಥಿತಿಯಲ್ಲಿ ದಯವಿಟ್ಟು ಯಾರೂ ಅನಗತ್ಯವಾಗಿ ಮನೆಯಿಂದ ಆಚೆ ಬರಬೇಡಿ, ಮನೆಯಲ್ಲಿದ್ದಾಗಲೂ ತಪ್ಪದೆ ಮಾಸ್ಕ್ ಧರಿಸಿ. ಅದನ್ನು ಧರಿಸುವುದು ಅತ್ಯವಶ್ಯಕವಾಗಿದೆ. ಯಾರನ್ನೂ ಮನೆಗೆ ಆಹ್ವಾನಿಸಬೇಡಿ, ಸಾಮಾಜಿಕ ಅಂತರ ಮತ್ತು ಬಾರಿ ಬಾರಿ ಸ್ಯಾನಿಟೈಸ್ ಮಾಡಿಕೊಳ್ಳುವುದು ಸೋಂಕಿನ ಆಪಾಯವನ್ನು ಕಡಿಮೆ ಮಾಡುತ್ತದೆ,’ ಎಂದು ಡಾ ಪಾಲ್ ಹೇಳಿದರು.

‘ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಶೇಕಡಾ 50 ರಷ್ಟು ಪಾಲಿಸದರೂ ಸೋಂಕಿತ ವ್ಯಕ್ತಿಯು 406 ಜನರ ಬದಲಿಗೆ ಕೇವಲ 15 ಜನಕ್ಕೆ ಸೋಂಕನ್ನು ಹರಡುತ್ತಾನೆ, ಮತ್ತು ಅಪಾಯದ ಪ್ರಮಾಣ ಶೇಕಡಾ 75ರಷ್ಟು ಕಡಿಮೆಯಾಗುತ್ತದೆ. ಈ ಆಂಶವನ್ನು ಎಲ್ಲರೂ ಮನಗಾಣಿರೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ವೈದ್ಯಕೀಯ ನಿರ್ವಹಣೆ ಮತ್ತು ಸೋಂಕು ನಿಯಂತ್ರಣಗಳ ಮೇಲೆ ಗಮನವಿರಲಿ,’ ಎಂದು ಪಾಲ್ ಹೇಳಿದರು.

ಲಾಕ್​ಡೌನ್ ಮತ್ತು ದೈಹಿಕ ಅಂತರವನ್ನು ಸೂಕ್ತವಾಗಿ ಜಾರಿಗೊಳಿಸದಿದ್ದರೆ, ಒಬ್ಬ ಕೊವಿಡ್-19 ರೋಗಿಯು 406 ಜನರಿಗೆ ಸೋಂಕನ್ನು ಹರಡುತ್ತಾನೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಸಂಸ್ಥೆ (ಐಸಿಎಮ್​ಆರ್) ನಡೆಸಿರುವ ಅಧ್ಯಯನದ ಮೂಲಕ ಬಯಲಿಗೆ ಬಂದಿದೆ.

ಕೊವಿಡ್-19ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಅದರಲ್ಲೂ ವಿಶೇಷವಾಗಿ ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸದರೆ ಸೋಂಕಿತನೊಬ್ಬ ಕೇವಲ 2.5 ಜನಕ್ಕೆ ಮಾತ್ರ ಹರಡುವಷ್ಟರ ಮಟ್ಟಿಗೆ ಅದನ್ನು ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಏಪ್ರಿಲ್ 8ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಜನ ಸಮೂಹಗಳಿಗೆ ಸಾಮಾಜಿಕ ಅಂತರವು ‘ಸಾಮಾಜಿಕ ಲಸಿಕೆ’ ಎಂದು ಬಣ್ಣಿಸಿದ ಅಗರ್​ವಾಲ್ ಪ್ರತಿಯೊಬ್ಬರು ಈ ನಿಯಮವನ್ನು ಚಾಚೂತಪ್ಪದೆ ಪಾಲಿಸಬೇಕು ಅಂತ ಹೇಳಿದ್ದರು.

ಜನರು ವಿನಾಕಾರಣ ಆತಂಕಕ್ಕೊಳಗಾಗಿ ಅಸ್ಪತ್ರೆಗಳಲ್ಲಿ ಬೆಡ್​ಗಳನ್ನು ಆಕ್ರಮಿಸಿಕೊಳ್ಳುತ್ತಿರುವುದರ ವಿರುದ್ಧ ಎಚ್ಚರಿಸಿದ ಇಲಾಖೆಯ ಇತರ ಅಧಿಕಾರಿಗಳು, ಕೇವಲ ವೈದ್ಯರ ಸಲಹೆ ನೀಡಿದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕೆಂದು ಹೇಳಿದರು.

‘ನಾವು ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಮತ್ತು ಆಸ್ಪತ್ರೆಗಳನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಿದೆ. ಆಕ್ಸಿಜನ್ ಉಪಯೋಗವನ್ನು ಬಹಳ ಜಾಗರೂಕತೆಯಿಂದ ಬಳಸಿಕೊಳ್ಳುವ ಅವಶ್ಯಕತೆಯಿದೆ. ಆದರೆ ಈಗ ದೇಶದಲ್ಲಿ ಅನಾವಶ್ಯಕ ಆತಂಕ ಹಬ್ಬಿದೆ,’ ಎಂದು ಎಐಐಎಮ್​ಎಸ್​ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಸೋಮವಾರ ಹೇಳಿದರು.

ಇದನ್ನೂ ಓದಿ: ICMR Guidelines for Covid Treatment: ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರ ವಿತರಿಸಿದ ಏಮ್ಸ್

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 29,744 ಮಂದಿಗೆ ಕೊರೊನಾ ಸೋಂಕು, 201 ಜನರ ಸಾವು

Published On - 11:32 pm, Mon, 26 April 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ