ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಗಾಜಾ ಮುಖ್ಯಸ್ಥ ಮೊಹಮ್ಮದ್ ಸಿನ್ವಾರ್ ಹತ್ಯೆ
ಹಮಾಸ್‌ನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ. ಇಸ್ರೇಲ್ ಪಡೆಗಳು ಹತ್ಯೆ ಮಾಡಿದ ಹಮಾಸ್ ವ್ಯಕ್ತಿಗಳ ಪಟ್ಟಿಯಲ್ಲಿ 2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಪ್ರಮುಖ ಸೂತ್ರಧಾರ ಸಿನ್ವಾರ್ ಕೂಡ ಇದ್ದಾರೆ.

ನವದೆಹಲಿ, ಮೇ 28: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಗಾಜಾ ಪಟ್ಟಿಯಲ್ಲಿ ನಡೆದ ಇಸ್ರೇಲ್ ವಾಯುದಾಳಿಯಲ್ಲಿ ಹಮಾಸ್‌ನ ಹಿರಿಯ ನಾಯಕ ಮೊಹಮ್ಮದ್ ಸಿನ್ವಾರ್ (Muhammad Sinwar) ಸಾವನ್ನಪ್ಪಿದ್ದಾರೆ ಎಂದು ಮೊದಲ ಬಾರಿಗೆ ದೃಢಪಡಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಮಿಲಿಟರಿಯಿಂದ ಕೊಲ್ಲಲ್ಪಟ್ಟ ಗಾಜಾದ ಮಾಜಿ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರನೇ ಮುಹಮ್ಮದ್ ಸಿನ್ವಾರ್.
ಇಂದು ಸಂಸತ್ತಿನಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, ಇತ್ತೀಚಿನ ಇಸ್ರೇಲಿ ಕಾರ್ಯಾಚರಣೆಗಳಲ್ಲಿ ಹಮಾಸ್‌ನ ಹಲವಾರು ನಾಯಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅವರಲ್ಲಿ ಮೊಹಮ್ಮದ್ ಸಿನ್ವಾರ್ ಹೆಸರು ಕೂಡ ಇದೆ. ಈತ ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸೂತ್ರಧಾರಿ ಎಂದು ನಂಬಲಾದ ಹಮಾಸ್‌ನ ಉನ್ನತ ಕಮಾಂಡರ್ ಯಾಹ್ಯಾ ಸಿನ್ವಾರ್ ಅವರ ಸಹೋದರ. ಕಳೆದ ವರ್ಷ ಇಸ್ರೇಲ್ ಪಡೆಗಳಿಂದ ಯಾಹ್ಯಾ ಹತ್ಯೆಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹಮಾಸ್‌ನ ಉನ್ನತ ಕಮಾಂಡರ್ ಮತ್ತು ಹತ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇದನ್ನೂ ಓದಿ: Airstrike: ಗಾಜಾ, ಲೆಬನಾನ್ ಮತ್ತು ಸಿರಿಯಾ ಮೇಲೆ ಇಸ್ರೇಲ್ನಿಂದ ವಾಯುದಾಳಿ
ಮುಹಮ್ಮದ್ ಸಿನ್ವಾರ್ ಗಾಜಾದಲ್ಲಿ ಹತ ಹಮಾಸ್‌ನ ಮಾಜಿ ನಾಯಕ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರರಾಗಿದ್ದರು. ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಮಿಲಿಟರಿ ಹತ್ಯೆ ಮಾಡಿತು. ಅವರ ಸಹೋದರನ ಮರಣದ ನಂತರ ಅವರನ್ನು ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪಿನ ಉನ್ನತ ಹುದ್ದೆಗೆ ಏರಿಸಲಾಯಿತು. ಈ ತಿಂಗಳ ಆರಂಭದಲ್ಲಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಗಾಜಾದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮುಹಮ್ಮದ್ ಸಿನ್ವಾರ್ ಕೊಲ್ಲಲ್ಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಡುಗಡೆ ವೇಳೆ ಹಮಾಸ್ ಕಾರ್ಯಕರ್ತರ ಹಣೆಗೆ ಮುತ್ತಿಟ್ಟ ಇಸ್ರೇಲಿ ಒತ್ತೆಯಾಳು
ಮುಹಮ್ಮದ್ ಸಿನ್ವಾರ್ ಯಾರು?:
1975ರಲ್ಲಿ ಖಾನ್ ಯೂನಿಸ್‌ನಲ್ಲಿ ಜನಿಸಿದ ಮುಹಮ್ಮದ್ ಸಿನ್ವಾರ್, ತನ್ನ ಸಹೋದರನ ಹೆಜ್ಜೆಗಳನ್ನು ಅನುಸರಿಸಿ 1980ರ ದಶಕದ ಉತ್ತರಾರ್ಧದಲ್ಲಿ ಹಮಾಸ್ ಸೇರಿದರು. ಶಂಕಿತ ಉಗ್ರಗಾಮಿ ಚಟುವಟಿಕೆಗಾಗಿ 1991ರಲ್ಲಿ ಅವರನ್ನು ಇಸ್ರೇಲಿ ಪಡೆಗಳು ಬಂಧಿಸಿತ್ತು. ಅವರು 1 ವರ್ಷಕ್ಕಿಂತ ಕಡಿಮೆ ಕಾಲ ಜೈಲಿನಲ್ಲಿ ಕಳೆದರು. 1990ರ ದಶಕದಲ್ಲಿ ರಾಮಲ್ಲಾದಲ್ಲಿ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದಿಂದ ಅವರು ಹಲವಾರು ವರ್ಷಗಳ ಕಾಲ ಜೈಲಿನಲ್ಲಿದ್ದರು. 2006ರಲ್ಲಿ ಮುಹಮ್ಮದ್ ಸಿನ್ವಾರ್ ಐಡಿಎಫ್ ಸೈನಿಕ ಗಿಲಾಡ್ ಶಾಲಿತ್ ಅವರನ್ನು ಅಪಹರಿಸಿದ ಹಮಾಸ್ ಕೋಶದ ಭಾಗವಾಗಿದ್ದರು. ಅವರು ಈ ಹಿಂದೆ ಹಮಾಸ್‌ನ ಖಾನ್ ಯೂನಿಸ್ ಬ್ರಿಗೇಡ್‌ಗೆ ಸಹ ಕಮಾಂಡ್ ಆಗಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




