AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Philippines: ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಿದ ಫಿಲಿಪೈನ್ಸ್​

ಫಿಲಿಪೈನ್ಸ್‌ ಮೇ 2025ರಿಂದ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡಲಿದೆ.ಈ ಹೆಜ್ಜೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ.ಥೈಲೆಂಡ್‌, ವಿಯೆಟ್ನಾಂ, ಸಿಂಗಾಪುರ ಮೊದಲೇ ವೀಸಾ ಮುಕ್ತ ಪ್ರವೇಶ ನೀಡುತ್ತಿದ್ದ ದೇಶಗಳ ಪಟ್ಟಿ ಈಗ ಫಿಲಿಪೈನ್ಸ್‌ ಕೂಡ ಸೇರಿದೆ.ನವದೆಹಲಿಯ ಫಿಲಿಪೈನ್ಸ್ ರಾಯಭಾರ ಕಚೇರಿ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದೆ.ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ ಸುಂದರ ಕಡಲತೀರಗಳು ಮತ್ತು ದ್ವೀಪಗಳಿಗೆ ಸುಲಭವಾಗಿ ಹೋಗಬಹುದು.14 ದಿನಗಳ ವೀಸಾ ಮುಕ್ತ ಪ್ರವೇಶ ನೀಡಲಾಗುತ್ತದೆ – ಅಂದರೆ ಈ ಅವಧಿಗೆ ಯಾವುದೇ ವೀಸಾ ಮುಂಚಿತ ಅನುಮತಿ ಬೇಕಾಗಿಲ್ಲ.

Philippines: ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಿದ ಫಿಲಿಪೈನ್ಸ್​
ಫಿಲಿಪೈನ್ಸ್​​Image Credit source: Outlook traveller
ನಯನಾ ರಾಜೀವ್
|

Updated on: May 29, 2025 | 8:11 AM

Share

ಫಿಲಿಪೈನ್ಸ್​, ಮೇ 29: ಫಿಲಿಪೈನ್ಸ್​​( Philippines)ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದೆ. ಇಂದಿನ ಕಾಲದಲ್ಲಿ ವೀಸಾದ ಪ್ರಾಮುಖ್ಯತೆ ಹೆಚ್ಚಿದೆ. ಹೆಚ್ಚಿನ ದೇಶಗಳಲ್ಲಿ ಇದರ ಬಗ್ಗೆ ಕಠಿಣ ನಿಯಮಗಳನ್ನು ಕೂಡ ಮಾಡಲಾಗಿದೆ. ಆದರೆ ಕೆಲವು ದೇಶಗಳು ತಮ್ಮ ಪ್ರವಾಸದೋದ್ಯಮವನ್ನು ಹೆಚ್ಚಿಸಲು ವೀಸಾ-ಮುಕ್ತ ಪ್ರವೇಶ ಸೌಲಭ್ಯಗಳನ್ನು ನೀಡಲು ಮುಂದಾಗಿದೆ.

ಇದರಲ್ಲಿ ಥೈಲೆಂಡ್, ವಿಯೆಟ್ನಾಂ, ಸಿಂಗಾಪುರ ಸೇರಿವೆ ಮತ್ತು ಈಗ ಫಿಲಿಪೈನ್ಸ್​ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಫಿಲಿಪೈನ್ಸ್​ ಭಾರತೀಯ ನಾಗರಿಕರಿಗೆ ಎರಡು ಹೊಸ ವೀಸಾ-ಮುಕ್ತ ಪ್ರವೇಶ ಆಯ್ಕೆಗಳನ್ನು ಪರಿಚಯಿಸಿದೆ. ಇದು ಮೇ 2025ರಿಂದಲೇ ಜಾರಿಗೆ ಬರಲಿದೆ. ನವದೆಹಲಿಯಲ್ಲಿರುವ ಫಿಲಿಪೈನ್ಸ್​ ರಾಯಭಾರ ಕಚೇರಿ ಈ ಘೋಷಣೆ ಮಾಡಿದೆ. ಇದರರ್ಥ ಈಗ ಭಾರತೀಯ ಪಾಸ್​ಪೋರ್ಟ್​ ಹೊಂದಿರುವವರಿಗೆ ಫಿಲಿಪೈನ್ಸ್​ನ ಸುಮದರವಾದ ಕಡಲತೀರಗಳು ಮತ್ತು ದ್ವೀಪಗಳಲ್ಲಿ ತಮ್ಮ ರಜೆಯನ್ನು ಕಳೆಯಲು ವೀಸಾ ಅಗತ್ಯವಿಲ್ಲ ಮತ್ತು ಪ್ರಯಾಣವು ಹೆಚ್ಚು ಸುಲಭವಾಗುತ್ತದೆ. ಉಚಿತ ವೀಸಾ ಸಂಪೂರ್ಣ ಪ್ರಕ್ರಿಯೆ ಹೀಗಿರಲಿದೆ.

14ದಿನಗಳ ವೀಸಾ ಮುಕ್ತ ಪ್ರವೇಶ ಈಗ ಭಾರತೀಯ ಪ್ರವಾಸಿಗರು ವೀಸಾ ಇಲ್ಲದೆ ಫಿಲಿಪೈನ್ಸ್‌ಗೆ ಭೇಟಿ ನೀಡಬಹುದು, ಅದು ಕೂಡ ಪೂರ್ಣ 14 ದಿನಗಳವರೆಗೆ. ಈ ಸೌಲಭ್ಯವನ್ನು ಪ್ರವಾಸದ ಉದ್ದೇಶದಿಂದ ಮಾತ್ರ ಒದಗಿಸಲಾಗುತ್ತಿದೆ, ನೀವು ಅದನ್ನು ವಿಸ್ತರಿಸಲು ಅಥವಾ ಬೇರೆ ಯಾವುದೇ ವೀಸಾಕ್ಕೆ ಬದಲಾಯಿಸಲು ಸಾಧ್ಯವಿಲ್ಲ. ಉಚಿತ ವೀಸಾದೊಂದಿಗೆ, ನೀವು ಪ್ರಮುಖ ವಿಮಾನ ನಿಲ್ದಾಣಗಳು, ಕರಾವಳಿ ಬಂದರುಗಳು ಅಥವಾ ಕ್ರೂಸ್ ಟರ್ಮಿನಲ್‌ಗಳ ಮೂಲಕ ಫಿಲಿಪೈನ್ಸ್‌ಗೆ ಪ್ರವೇಶಿಸಬಹುದು.

ಮತ್ತಷ್ಟು ಓದಿ:  ಬ್ರಿಟನ್​ನ ವಿವಿಧ ವೀಸಾ ದರಗಳಲ್ಲಿ ಹೆಚ್ಚಳ; ಇಂಗ್ಲೆಂಡ್ ಪ್ರಯಾಣ ಇನ್ನು ದುಬಾರಿ

ಉಚಿತ ವೀಸಾ ಪಡೆಯಲು ಇರುವ ಷರತ್ತುಗಳು ಪ್ರವಾದವಷ್ಟೇ ನಿಮ್ಮ ಉದ್ದೇಶವಾಗಿರಬೇಕು ನಿಮ್ಮ ಪ್ರವಾಸ ಮುಗಿದ ನಂತರ ಕನಿಷ್ಠ ಆರು ತಿಂಗಳವರೆಗೆ ಪಾಸ್​ಪೋರ್ಟ್​ ಮಾನ್ಯವಾಗಿರಬೇಕು ಹೋಟೆಲ್​ ಬುಕಿಂಗ್ ಮತ್ತು ಹಿಂದಿರುಗುವ ಅಥವಾ ಮುಂದಿನ ಪ್ರಯಾಣ ಟಿಕೆಟ್ ತೋರಿಸುವುದು ಅವಶ್ಯಕ ನಿಮ್ಮ ಸಂಪೂರ್ಣ ಪ್ರವಾಸವನ್ನು ಸರಿದೂಗಿಸಲು ನಿಮ್ಮ ಬಳಿ ಸಾಕಷ್ಟು ಹಣವಿರಬೇಕು, ಇದಕ್ಕೆ ನೀವು ಪುರಾವೆಯನ್ನು ಕೂಡ ಒದಗಿಸಬೇಕಾಗುತ್ತದೆ.

ನೀವು 30 ದಿನಗಳವರೆಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಭಾರತೀಯ ನಾಗರಿಕರು ಆಸ್ಟ್ರೇಲಿಯಾ, ಜಪಾನ್, ಅಮೆರಿಕ, ಕೆನಡಾ, ಷೆಂಗೆನ್ ದೇಶಗಳು, ಸಿಂಗಾಪುರ ಅಥವಾ ಯುನೈಟೆಡ್ ಕಿಂಗ್‌ಡಮ್‌ಗೆ ಮಾನ್ಯ ವೀಸಾ ಅಥವಾ ಶಾಶ್ವತ ನಿವಾಸವನ್ನು ಹೊಂದಿದ್ದರೆ, ಅವರು ಹೊಸ ನಿಯಮದ ಅಡಿಯಲ್ಲಿ 30 ದಿನಗಳವರೆಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.

ಇ-ವೀಸಾ ಆಯ್ಕೆಯೂ ಲಭ್ಯ ವೀಸಾ-ಮುಕ್ತ ಮಾನದಂಡಗಳನ್ನು ಪೂರೈಸದವರು ಫಿಲಿಪೈನ್ಸ್‌ನ ಅಧಿಕೃತ ಇ-ವೀಸಾ ವೆಬ್‌ಸೈಟ್ ಮೂಲಕ 9(a) ತಾತ್ಕಾಲಿಕ ಸಂದರ್ಶಕ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಇದು ಸಿಂಗಲ್-ಎಂಟ್ರಿ ವೀಸಾ ಆಗಿದ್ದು, ಫಿಲಿಪೈನ್ಸ್‌ನಲ್ಲಿ 30 ದಿನಗಳವರೆಗೆ ಇರಲು ನಿಮಗೆ ಅವಕಾಶ ನೀಡುತ್ತದೆ. ಇ-ವೀಸಾ ಶುಲ್ಕ ಸಾಮಾನ್ಯವಾಗಿ ಸುಮಾರು 3,500 ರೂ. ವೀಸಾ ನೀಡಲು ಸಾಮಾನ್ಯವಾಗಿ 7 ವಾರದ ದಿನಗಳು ಬೇಕಾಗುತ್ತದೆ, ಆದರೆ ನೀವು ಕನಿಷ್ಠ 10-15 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ. ನೆನಪಿನಲ್ಲಿಡಿ, ಈ ವೀಸಾ ಒಂದು ಬಾರಿ ಪ್ರವೇಶವನ್ನು ಮಾತ್ರ ಅನುಮತಿಸುತ್ತದೆ, ಆದ್ದರಿಂದ ನೀವು ಹೊರಗೆ ಹೋಗಿ ಮತ್ತೆ ಬರಲು ಬಯಸಿದರೆ, ನೀವು ಮತ್ತೆ ಹೊಸ ವೀಸಾವನ್ನು ಪಡೆಯಬೇಕಾಗುತ್ತದೆ.

ನೀವು ಈ ಹೋಟೆಲ್​ಗಳಲ್ಲಿ ಉಳಿದುಕೊಳ್ಳಬಹುದು ಪ್ಯಾಂಗ್ಯುಲೇಷಿಯನ್ ಎಲ್ ನಿಡೋ(Pangulasian, El Nido, Amanpulo), ಡಿಸ್ಕವರಿ ಬೊರಾಕೆ(Discovery Boracay), ಶಾಂಘ್ರಿ-ಲಾ ಬೊರಾಕೆ(Shangri-La Boracay), ಶಾಂಘ್ರಿ-ಲಾ ಮ್ಯಾಕ್ಟನ್( Shangri-La Mactan), ಸೆಬು ಸಿಯಾಗೋ ಬೀಚ್ ರೆಸಾರ್ಟ್​(Cebu, Siago Beach Resort), ಹೈಲ್ಯಾಂಡ್ ಬಾಲಿ ವಿಲ್ಲಾಸ್ ರೆಸಾರ್ಟ್​( Highland Bali Villas Resort And Spa),ದಿ ಫಾರ್ಮ್​ ಅಟ್ ಸ್ಯಾನ್ ಬೆನಿತೋ( The Farm At San Benito), ದಿ ಪೆನಿನ್ಸುಲಾ ಮನಿಲಾ ಹೋಟೆಲ್( The Peninsula Manila Hotel) ಇಲ್ಲಿ ಉಳಿದುಕೊಳ್ಳಬಹುದು.

ನೀವು ಯಾವ ಯಾವ ದಾಖಲೆಗಳನ್ನು ಹೊಂದಿರಬೇಕು? ನಿಮ್ಮ ಬಳಿ ಮಾನ್ಯವಾದ ಪಾಸ್‌ಪೋರ್ಟ್ ಇರಬೇಕು. ಸರ್ಕಾರ ನೀಡಿದ ಗುರುತಿನ ಚೀಟಿ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಹೊಂದಿರಬೇಕು. ಹೋಟೆಲ್ ಬುಕಿಂಗ್ ಇತ್ಯಾದಿ ವಸತಿಗೆ ಪುರಾವೆ ಇರಬೇಕು ಹಿಂತಿರುಗುವ ಅಥವಾ ಮುಂದುವರೆಯುವ ಪ್ರಯಾಣ ಟಿಕೆಟ್ ಹಣಕಾಸು ದಾಖಲೆಗಳು

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ