AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನ ವಿವಿಧ ವೀಸಾ ದರಗಳಲ್ಲಿ ಹೆಚ್ಚಳ; ಇಂಗ್ಲೆಂಡ್ ಪ್ರಯಾಣ ಇನ್ನು ದುಬಾರಿ

British Visa Rates: ಬ್ರಿಟನ್ ಸರಕಾರ ತನ್ನ ದೇಶದ ಎಲ್ಲಾ ವಿಭಾಗಗಳ ವೀಸಾಗಳ ದರವನ್ನು ಹೆಚ್ಚಿಸಿದೆ. ಸ್ಟುಡೆಂಟ್ ವೀಸಾದಿಂದ ಹಿಡಿದು ಕಿರು ಅವಧಿ ವೀಸಾವರೆಗೂ ಶುಲ್ಕಗಳನ್ನು ಏರಿಸಿದೆ. ಸರ್ಕಾರಕ್ಕೆ ಫಂಡಿಂಗ್ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆರು ತಿಂಗಳೊಳಗಿನ ಅವಧಿಯ ಭೇಟಿಗೆ ವೀಸಾ ಪಡೆಯಲು 11,500 ರೂ (115 ಜಿಬಿಪಿ) ಶುಲ್ಕ ಪಾವತಿಸಬೇಕಾಗುತ್ತದೆ.

ಬ್ರಿಟನ್​ನ ವಿವಿಧ ವೀಸಾ ದರಗಳಲ್ಲಿ ಹೆಚ್ಚಳ; ಇಂಗ್ಲೆಂಡ್ ಪ್ರಯಾಣ ಇನ್ನು ದುಬಾರಿ
ಬ್ರಿಟನ್ ವೀಸಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2023 | 2:54 PM

Share

ಲಂಡನ್, ಅಕ್ಟೋಬರ್ 4: ಪ್ರಧಾನಿ ರಿಷಿ ಸುನಕ್ ನೇತೃತ್ವದ ಬ್ರಿಟನ್ ಸರ್ಕಾರ (britain government) ಇಂದು ವೀಸಾ ದರ ಏರಿಸಿದೆ. ಎಲ್ಲಾ ವಿಭಾಗದ ವೀಸಾ ಶುಲ್ಕ ದರ (visa fee) ಹೆಚ್ಚಿಸಲಾಗಿದೆ. ಆರು ತಿಂಗಳ ಅವಧಿಯವರೆಗಿನ ವೀಸಾ, 2, 5 ಮತ್ತು 10 ವರ್ಷದ ಅವಧಿಗಳ ವೀಸಾ, ಆರೋಗ್ಯ ವೀಸಾ ಇತ್ಯಾದಿ ಎಲ್ಲವುಗಳ ಶುಲ್ಕ ಹೆಚ್ಚಳವಾಗಿವೆ. ಕುಶಲ ಕಾರ್ಮಿಕರು, ವಲಸಿಗರ ವೀಸಾ ದರವೂ ಇಂದಿನಿಂದ ಹೆಚ್ಚಾಗಿದೆ. ಭಾರತೀಯರು ಸೇರಿದಂತೆ ಎಲ್ಲಾ ವಿದೇಶೀಯರಿಗೂ ಬ್ರಿಟನ್ ವೀಸಾ ಶುಲ್ಕ ಬೆಲೆ ಹೆಚ್ಚಳ ಅನ್ವಯ ಆಗಲಿದೆ. ಬ್ರಿಟನ್​ನ ಗೃಹ ಕಚೇರಿ ವಕ್ತಾರರು (home office spokesperson) ಈ ಬಗ್ಗೆ ಮಾಹಿತಿ ನೀಡಿದ್ದು, ‘ಬಹಳ ಮುಖ್ಯವಾದ ಸಾರ್ವಜನಿಕ ಸೇವೆಗಳು ಮತ್ತು ಪಬ್ಲಿಕ್ ಸೆಕ್ಟರ್​ಗೆ ಹಣ ಒದಗಿಸಬೇಕಾದ ಹಿನ್ನೆಲೆಯಲ್ಲಿ ವೀಸಾ ಅರ್ಜಿಗಳಿಗೆ ಶುಲ್ಕ ಹೆಚ್ಚಿಸುವ ಕ್ರಮ ನ್ಯಾಯಯುತ ಎನಿಸಿದೆ,’ ಎಂದು ಹೇಳಿದ್ದಾರೆ.

ಆರು ತಿಂಗಳೊಳಗಿನ ವೀಸಾ ದರವನ್ನು 15 ಜಿಬಿಪಿಯಷ್ಟು (ಗ್ರೇಟ್ ಬ್ರಿಟನ್ ಪೌಂಡ್) ಹೆಚ್ಚಿಸಲಾಗಿದೆ. ಅಂದರೆ, ಈ ಕಿರು ಅವಧಿ ವೀಸಾ 1,500 ರೂನಷ್ಟು ಬೆಲೆ ಹೆಚ್ಚಳ ಕಾಣಲಿದೆ. ಸದ್ಯ 100 ಜಿಬಿಪಿ ಇರುವ ಈ ಕಿರು ಅವಧಿ ವೀಸಾ ಬೆಲೆ 115 ಪೌಂಡ್​ಗೆ ಏರಲಿದೆ. ಅಂದರೆ ಸುಮಾರು 11,500 ರೂ ಆಗಲಿದೆ.

ಇನ್ನು, ಸ್ಟುಡೆಂಟ್ ವೀಸಾ ದರ 127 ಪೌಂಡ್​ನಷ್ಟು ಹೆಚ್ಚಲಿದೆ. ಇದರೊಂದಿಗೆ ಹೊರದೇಶಗಳಿಂದ ವಿದ್ಯಾರ್ಥಿಗಳು ಬ್ರಿಟನ್​ಗೆ ಹೋಗಲು ವೀಸಾ ಪಡೆಯಬೇಕಾದರೆ 490 ಜಿಬಿಪಿ ಶುಲ್ಕ ಪಾವತಿಸಬೇಕು. ಸುಮಾರು 50,000 ರೂ ಆಗುತ್ತದೆ. ಆದರೆ, 6 ತಿಂಗಳಿಗೂ ಹೆಚ್ಚಿರುವ ಮತ್ತು 11 ತಿಂಗಳಿಗೂ ಕಡಿಮೆ ಇರುವ ಶಾರ್ಟ್ ಟರ್ಮ್ ಕೋರ್ಸ್​ಗಳನ್ನು ಕಲಿಯಲು ಬೇಕಿರುವ ವೀಸಾದ ಶುಲ್ಕದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.

ಇದನ್ನೂ ಓದಿ: ಫೇಸ್​ಬುಕ್​ನಿಂದ ಇನ್ನಷ್ಟು ಲೇ ಆಫ್; ವರ್ಚುವಲ್ ರಿಯಾಲಿಟಿ ಟೀಮ್​ಗೆ ಕಾದಿದೆಯಾ ಸಂಕಷ್ಟ?

ವೀಸಾ ಶುಲ್ಕ ಏರಿಕೆ ವಿವರ

  • ಫ್ಯಾಮಿಲಿ, ಸೆಟಲ್ಮೆಂಟ್, ಸಿಟಿಜನ್​ಶಿಪ್ ವೀಸಾ ಶುಲ್ಕ ಶೇ. 20ರಷ್ಟು ಏರಿಕೆ
  • ವರ್ಕ್ ಮತ್ತು ವಿಸಿಟ್ ವೀಸಾ ಶುಲ್ಕ ಶೇ. 15ರಷ್ಟು ಹೆಚ್ಚಳ
  • ಇಮೈಗ್ರೇಶನ್ ಹೆಲ್ತ್ ಸರ್ಚಾರ್ಜ್ (ವಲಸಿಗರ ಆರೋಗ್ಯ ಶುಲ್ಕ) ಒಂದು ವರ್ಷಕ್ಕೆ 1,035 ಜಿಬಿಪಿ.
  • ಆರು ತಿಂಗಳೊಳಗಿನ ವಿಸಿಟ್ ವೀಸಾ ಶುಲ್ಕ 115 ಜಿಬಿಪಿ
  • ಸ್ಟುಡೆಂಟ್ ವೀಸಾ ಶುಲ್ಕ 490 ಜಿಬಿಪಿ

ಇದನ್ನೂ ಓದಿ: ಅಮೆರಿಕದ ಕ್ರಿಪ್ಟಾನ್, ಟೆಕ್ಸಾಸ್ ಇನ್ಸ್​ಟ್ರುಮೆಂಟ್ಸ್, ಇಆರ್​ಪಿ ಲಾಜಿಕ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ಸಾಧ್ಯತೆ

ಕುಶಲ ಕಾರ್ಮಿಕರಿಗೆ ಪ್ರಮಾಣಿತ ಪ್ರಾಯೋಜಕತ್ವ (ಸರ್ಟಿಫಿಕೇಟ್ ಸ್ಪಾನ್ಸರ್​ಶಿಪ್) 3 ವರ್ಷಕ್ಕಿಂತ ಕಡಿಮೆ ಇದ್ದರೆ ಅವರಿಗೆ ವೀಸಾ ಶುಲ್ಕ 719 ಜಿಬಿಪಿ ಇರುತ್ತದೆ. ಪ್ರಾಯೋಜಕತ್ವ 3 ವರ್ಷ ಮೇಲ್ಪಟ್ಟಿದ್ದರೆ ವಲಸೆ ಶುಲ್ಕ 1,420 ಜಿಬಿಪಿ ಇರುತ್ತದೆ.

ಇವುಗಳ ಜೊತೆಗೆ ಬ್ರಿಟನ್ ಪೌರತ್ವ ಪಡೆಯಲು ಅರ್ಜಿ ಇತ್ಯಾದಿಯ ಶುಲ್ಕಗಳಲ್ಲೂ ಹೆಚ್ಚಲ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ