AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆಗೆ ಸರ್ಕಾರದಿಂದ ಅಧಿಸೂಚನೆ; ಈ ಮಂಡಳಿ ಯಾಕೆ ಮುಖ್ಯ? ಇಲ್ಲಿದೆ ಡೀಟೇಲ್ಸ್

National Turmeric Board Importance and benefits: ರಾಷ್ಟ್ರೀಯ ಅರಿಶಿನ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮಂಡಳಿ ಸ್ಥಾಪನೆಯಿಂದ ಹಲವು ನಿರೀಕ್ಷೆಗಳಿವೆ. ಅರಿಶಿನ ಮಾರುಕಟ್ಟೆ ಬೆಳೆಯಲು ಮತ್ತು ಹೊಸ ಅರಿಶಿನ ಉತ್ಪನ್ನಗಳನ್ನು ತಯಾರಿಸಲು ಮಂಡಳಿ ಸಹಾಯಕ್ಕೆ ಬರುತ್ತದೆ. ಅರಿಶಿನವನ್ನು ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಮಂಡಳಿ ಸಹಾಯವಾಗುತ್ತದೆ. ಇದರಿಂದ ಅರಿಶಿನ ಬೆಳೆಗಾರರಿಗೆ ಹೆಚ್ಚು ಲಾಭ ಆಗಲಿದೆ.

ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆಗೆ ಸರ್ಕಾರದಿಂದ ಅಧಿಸೂಚನೆ; ಈ ಮಂಡಳಿ ಯಾಕೆ ಮುಖ್ಯ? ಇಲ್ಲಿದೆ ಡೀಟೇಲ್ಸ್
ಅರಿಶಿನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2023 | 4:58 PM

ನವದೆಹಲಿ, ಅಕ್ಟೋಬರ್ 4: ಮೂರು ದಿನಗಳ ಹಿಂದೆ ತೆಲಂಗಾಣದಲ್ಲಿ ಪ್ರಧಾನಿ ಘೋಷಿಸಿದಂತೆ ರಾಷ್ಟ್ರೀಯ ಅರಿಶಿನ ಮಂಡಳಿಯ (National Turmeric Board) ರಚನೆಯಾಗಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ (notify) ಹೊರಡಿಸಿದೆ. ದೇಶದಲ್ಲಿ ಅರಿಶಿನ ಮತ್ತು ಅದರ ಉತ್ಪನ್ನಗಳ ಅಭಿವೃದ್ಧಿಯತ್ತ ಈ ಮಂಡಳಿ ಪೂರ್ಣ ಗಮನ ಹರಿಸಲಿದೆ. ಮಸಾಲ ಪದಾರ್ಥಗಳ ಮಂಡಳಿ ಹಾಗೂ ಇತರ ಸರ್ಕಾರಿ ಸಂಸ್ಥೆಗಳ ಜೊತೆ ನ್ಯಾಷನಲ್ ಟರ್ಮರಿಕ್ ಬೋರ್ಡ್ ಸಹಯೋಗದೊಂದಿಗೆ ಕೆಲಸ ಮಾಡಿ ಅರಿಶಿನ ಕ್ಷೇತ್ರಕ್ಕೆ ಪುಷ್ಟಿ ತರುವ ಪ್ರಯತ್ನ ಮಾಡಲಿದೆ. ಅರಿಶಿನ ಉತ್ಪನ್ನದ ಬಗ್ಗೆ ಇರುವ ಸಾಂಪ್ರದಾಯಿಕ ತಿಳುಹುವಿನ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಹೊಸ ಉತ್ಪನ್ನಗಳನ್ನು ತಯಾರಿಸಿ ಹೊಸ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಪ್ರಯತ್ನಗಳನ್ನು ಮಂಡಳಿಯಿಂದ ನಿರೀಕ್ಷಿಸಬಹುದಾಗಿದೆ.

ಅರಿಶಿನ ಮಂಡಳಿಯಲ್ಲಿ ಯಾರು ಇರುತ್ತಾರೆ?

ರಾಷ್ಟ್ರೀಯ ಅರಿಶಿನ ಮಂಡಳಿಯಲ್ಲಿ ಆಯುಷ್ ಸಚಿವಾಲಯ, ಔಷಧಗಳ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ, ಸಂಶೋಧನಾ ಸಂಸ್ಥೆಗಳಿಂದ ಪರಿಣಿತರು ಸದಸ್ಯರಾಗಿರುತ್ತಾರೆ. ಹಾಗೆಯ, ಅರಿಶಿನ ಬೆಳೆಯುವ ರೈತರು ಮತ್ತು ಅರಿಶಿನ ರಫ್ತುದಾರರ ಪ್ರತಿನಿಧಿಗಳನ್ನು ಮತ್ತು ಮೂರು ರಾಜ್ಯಗಳ ಸರ್ಕಾರಿ ಪ್ರತಿನಿಧಿಗಳೂ ಇದರ ಸದಸ್ಯರಾಗಿರುತ್ತಾರೆ. ರಾಜ್ಯಗಳ ಪ್ರಾತಿನಿಧ್ಯವನ್ನು ಪ್ರತೀ ವರ್ಷ ಬದಲಿಸಲಾಗುತ್ತದೆ.

ಇನ್ನು ಈ ಮಂಡಳಿಗೆ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನವೂ ಇರುತ್ತದೆ. ಕೇಂದ್ರ ವಾಣಿಜ್ಯ ಇಲಾಖೆ ಮಂಡಳಿ ಕಾರ್ಯದರ್ಶಿ ಸ್ಥಾನವನ್ನು ಆಯ್ಕೆ ಮಾಡುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಆ ಘೋಷಣೆಯಿಂದಾಗಿ… 12 ವರ್ಷದಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದ 70 ವರ್ಷದ ರೈತ ನಾಯಕ ಕಾಲಿಗೆ ಚಪ್ಪಲಿ ಹಾಕಿದರು! ಏನಿದರ ವೃತ್ತಾಂತ?

ಅರಿಶಿನ ಉತ್ಪಾದನೆಯಲ್ಲಿ ಸೈ

ಭಾರತದ ವಿಶ್ವದಲ್ಲೇ ಅತಿ ಹೆಚ್ಚು ಅರಿಶಿನ ಬೆಳೆಯುವ, ರಫ್ತು ಮಾಡುವ ಮತ್ತು ಬಳಸುವ ದೇಶವಾಗಿದೆ. ಭಾರತದಲ್ಲಿ ವರ್ಷಕ್ಕೆ 11 ಲಕ್ಷ ಟನ್​ಗೂ ಹೆಚ್ಚು ಅರಿಶಿನ ಉತ್ಪಾದನೆ ಆಗುತ್ತದೆ. ವಿಶ್ವದ ಅರಿಶಿನ ಉತ್ಪಾದನೆಯಲ್ಲಿ ಭಾರತದ ಪಾಲು ಶೇ. 75ರಷ್ಟಿದೆ. ವಿಶ್ವದ ಅರಿಶಿನ ವ್ಯಾಪಾರದಲ್ಲಿ ಭಾರತದ ಪಾಲು ಬರೋಬ್ಬರಿ ಶೇ. 62ರಷ್ಟಿದೆ.

ಭಾರತದಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತದೆ. ದೇಶದಲ್ಲಿ 30ಕ್ಕೂ ಹೆಚ್ಚು ತಳಿಯ ಅರಿಶಿನ ಇದೆ. ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಅರಿಶಿನ ಬೆಳೆಯುವ ಪ್ರಮುಖ ರಾಜ್ಯಗಳು. ಅದರಲ್ಲೂ ತೆಲಂಗಾಣದಲ್ಲಿ ಅತಿಹೆಚ್ಚು ಅರಿಶಿನ ಬೆಳೆಯಲಾಗುತ್ತದೆ. ಅದರಲ್ಲೂ ನಿಜಾಮಾಬಾದ್, ನಿರ್ಮಲ್ ಮತ್ತು ಜಗತಿಯಾಲ್ ಜಿಲ್ಲೆಗಳಲ್ಲಿ ಅತಿಹೆಚ್ಚು ಅರಿಶಿನ ಬೆಳೆಯುವುದು.

ಅರಿಶಿನ ಮಂಡಳಿ ಸ್ಥಾಪನೆಯಿಂದ ಏನು ಉಪಯೋಗ?

ಅರಿಶಿನ ಮಾರುಕಟ್ಟೆ ಬೆಳೆಯಲು ಮತ್ತು ಹೊಸ ಅರಿಶಿನ ಉತ್ಪನ್ನಗಳನ್ನು ತಯಾರಿಸಲು ಮಂಡಳಿ ಸಹಾಯಕ್ಕೆ ಬರುತ್ತದೆ. ಅರಿಶಿನವನ್ನು ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಮಂಡಳಿ ಸಹಾಯವಾಗುತ್ತದೆ. ಇದರಿಂದ ಅರಿಶಿನ ಬೆಳೆಗಾರರಿಗೆ ಹೆಚ್ಚು ಲಾಭ ಆಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನ ಷೇರಿಗೆ ಭರ್ಜರಿ ಬೇಡಿಕೆ; ಆರು ತಿಂಗಳಲ್ಲಿ ಎರಡೂವರೆ ಪಟ್ಟು ಬೆಲೆ ಹೆಚ್ಚಳ

ಒಂದು ಎಕರೆಯಲ್ಲಿ 45 ಕ್ವಿಂಟಾಲ್​ವರೆಗೆ ಅರಿಶಿನ ಇಳುವರಿ ಪಡೆಯಬಹುದು. ಒಂದು ಕ್ವಿಂಟಾಲ್ ಅರಿಶಿನಕ್ಕೆ 11,000 ರೂ ಬೆಲೆ ಇದೆ. ಅರಿಶಿನ ಮಂಡಳಿ ಸ್ಥಾಪನೆಯಿಂದ ರೈತರಿಗೆ ಹೆಚ್ಚಿನ ಬೆಲೆ ಸಿಗಬಹುದೆಂದು ನಿರೀಕ್ಷಿಸಬಹುದು.

ಅರಿಶಿನದ ಉಪಯೋಗಗಳೇನು?

ಅರಿಶಿನ ಒಂದು ಸಾಂಬಾರ ಪದಾರ್ಥವೇ ಆದರೂ ಸಾಕಷ್ಟು ಔಷಧೀಯ ಗುಣ ಹೊಂದಿದೆ. ಧಾರ್ಮಿಕವಾಗಿಯೂ ಅದು ಅವಶ್ಯವಾಗಿದೆ. ಬಣ್ಣದ ಡೈ ಮತ್ತು ಕಾಸ್ಮೆಟಿಕ್​ಗೂ ಅರಿಶಿನದ ಬಳಕೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್